ಶುಕ್ರವಾರ, ನವೆಂಬರ್ 15, 2019
22 °C

ಟ್ವೆಂಟಿ–20 ಕ್ರಿಕೆಟ್‌: ಇಂದಿನಿಂದ ಟಿಕೆಟ್‌ ಮಾರಾಟ

Published:
Updated:

ಬೆಂಗಳೂರು: ಇದೇ 22 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದ ಟಿಕೆಟ್‌ ಮಾರಾಟವು ಶುಕ್ರವಾರ ಆನ್‌ಲೈನ್‌ನಲ್ಲಿ (https://www.ksca.cricket/) ಆರಂಭವಾಗಲಿದೆ.

ಬೆಳಿಗ್ಗೆ 10ರಿಂದ ಮಾರಾಟ ನಡೆಯಲಿದೆ. ಒಬ್ಬರಿಗೆ ಎರಡು ಟಿಕೆಟ್‌ ಮಾತ್ರ ನೀಡಲಾಗುವುದು. ₹5,000ರಿಂದ ₹10,000 ಬೆಲೆಯ ಟಿಕೆಟ್‌ಗಳು ಮಾತ್ರ ಲಭ್ಯ ಇವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ತಿಳಿಸಿದೆ.

ಪ್ರತಿಕ್ರಿಯಿಸಿ (+)