ಮೈಸೂರು: ಕೆಎಸ್‌ಸಿಎ ಕೋಲ್ಟ್ಸ್ ನಾಯಕ ಶುಭಾಂಗ್ ಹೆಗ್ಡೆ (117ಕ್ಕೆ 5) ಸ್ಪಿನ್ ಮೋಡಿಯ ನಡುವೆಯೂ ಡಿ.ವೈ. ಪಾಟೀಲ ಅಕಾಡೆಮಿಯು ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಅದಕ್ಕೆ ಕಾರಣವಾಗಿದ್ದು ಪ್ರಣವ್ ಕೇಲಾ ಮತ್ತು ಅಬ್ದುಲ್ ಸಮದ್ ಅವರ ದ್ವಿಶತಕದ ಜೊತೆಯಾಟ.
ಇಲ್ಲಿನ ಎಸ್‌ಜೆಸಿಇ ಮೈದಾನದಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ 2ನೇ ದಿನದ ಅಂತ್ಯಕ್ಕೆ ಡಿ.ವೈ. ಪಾಟೀಲ ಅಕಾಡೆಮಿಯು 415 ರನ್ ಕಲೆ ಹಾಕಿದೆ.
ಮಂಗಳವಾರ ಇನಿಂಗ್ಸ್ ಆರಂಭಿಸಿದ ಡಿ.ವೈ. ಪಾಟೀಲ ಅಕಾಡೆಮಿಯ ಆರಂಭಿಕ ಬ್ಯಾಟರ್ ಪ್ರಣವ್ ( 139; 208 ಎ, 4X21) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಅಬ್ದುಲ್ ಸಮದ್ (118;125 ಎ, 4X13, 6X6) ಕೂಡ ಶತಕ ದಾಖಲಿಸಿದರು. ಈ ಜೋಡಿಯು 4ನೇ ವಿಕೆಟ್‌ಗೆ 200 ರನ್ ( 229 ಎಸೆತ) ಕಲೆ ಹಾಕಿತು. ಧೀರಜ್ ಗೌಡ ಅವರು ಸಮದ್ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು.
32 ಓವರ್ ಬೌಲ್ ಮಾಡಿದ ಶುಭಾಂಗ್, ಸ್ಪಿನ್ ಮೂಲಕ ಎದುರಾಳಿ ತಂಡದ ಬಾಲಂಗೋಚಿ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ದೂಡಿದರು. ಕೋಲ್ಟ್ ತಂಡದ ಒಟ್ಟು ಎಂಟು ಬೌಲರ್‌ಗಳು ಬೌಲಿಂಗ್ ಮಾಡಿದರು.
ದ್ವಿಶತಕದತ್ತ ಪೊದ್ದಾರ್: ಇಲ್ಲಿನ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ಒಡಿಶಾ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ ಬರೋಡಾ ಕ್ರಿಕೆಟ್ ಸಂಸ್ಥೆಯ ಗೋವಿಂದ ಪೊದ್ದಾರ್ (180; 277ಎ, 4X15, 6X2) ದ್ವಿಶತಕದತ್ತ ಹೆಜ್ಜೆ ಇಟ್ಟಿದ್ದಾರೆ. 2ನೇ ದಿನದ ಅಂತ್ಯಕ್ಕೆ ಒಡಿಶಾ 8 ವಿಕೆಟ್‌ಗೆ 386 ರನ್ ಗಳಿಸಿದ್ದು, ಸುಸ್ಥಿತಿಯಲ್ಲಿದೆ. ಎದುರಾಳಿ ತಂಡದ ಪರ ಬಾಬಾ ಸಫಿ ಪಠಾಣ್ 81ಕ್ಕೆ 5 ವಿಕೆಟ್ ಉರುಳಿಸಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ಎಸ್‌ಜೆಸಿಇ ಕ್ರೀಡಾಂಗಣ ( ಮೈಸೂರು): ಡಾ.ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 98 ಓವರ್‌ಗಳಲ್ಲಿ 9 ವಿಕೆಟ್‌ಗೆ 416 (ಪ್ರಣವ್ ಕೇಲಾ 139, ಅಬ್ದುಲ್ ಸಮದ್ 118, ಕರ್ಶ್ ಕೊಠಾರಿ 49. ಶುಭಾಂಗ್ ಹೆಗ್ಡೆ 117ಕ್ಕೆ 5, ಧನುಷ್ ಗೌಡ 59ಕ್ಕೆ 1)– ಕೆಎಸ್‌ಸಿಎ ಕೋಲ್ಟ್ಸ್ ವಿರುದ್ಧ.
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ: ಬರೋಡಾ ಕ್ರಿಕೆಟ್ ಸಂಸ್ಥೆ: 119.4 ಓವರ್‌ಗಳಲ್ಲಿ 8 ವಿಕೆಟ್‌ಗೆ 386 (ಗೋವಿಂದ ಪೊದ್ದಾರ್ ಔಟಾಗದೆ 180, ವಿಪ್ಲವ್ ಸಾಮಂತ್ರೆ 66. ಬಾಬಾಸಫಿ ಪಠಾಣ್ 81ಕ್ಕೆ5)– ಒಡಿಶಾ ಕ್ರಿಕೆಟ್ ಸಂಸ್ಥೆ ವಿರುದ್ಧ.
ಬೆಂಗಳೂರು ಪಂದ್ಯಗಳು:
ಚಿನ್ನಸ್ವಾಮಿ ಕ್ರೀಡಾಂಗಣ: ಮೊದಲ ಇನಿಂಗ್ಸ್:ಮಧ್ಯಪ್ರದೇಶ ಕ್ರಿಕೆಟ್ ಅಕಾಡೆಮಿ: 79.3 ಓವರ್‌ಗಳಲ್ಲಿ 187. ಕೆಎಸ್‌ಸಿಎ ಇಲೆವನ್: 86.2 ಓವರ್‌ಗಳಲ್ಲಿ 201 (ಕೆ.ವಿ. ಅನೀಶ್ 42, ಸ್ಮರಣ್ ಆರ್. 45, ಆದಿತ್ಯ ನಾಯರ್ 34, ಆರ್ಯನ್ ಪಾಂಡೆ 28ಕ್ಕೆ3, ಅರ್ಷದ್ ಖಾನ್ 37ಕ್ಕೆ2, ಕುಮಾರ್ ಕಾರ್ತಿಕೇಯ 63ಕ್ಕೆ3) ಎರಡನೇ ಇನಿಂಗ್ಸ್: ಮಧ್ಯಪ್ರದೇಶ: 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 4.
ಬಿಜಿಎಸ್ ಮೈದಾನ: ವಿದರ್ಭ: 109.4 ಓವರ್‌ಗಳಲ್ಲಿ 331 (ಅಕ್ಷಯ್ ಕರ್ಣೇವರ್ 78, ಪಾರ್ಥ್ ರೇಖಡೆ 47, ನಚಿಕೇತ್ ಭೂತೆ 22, ಉಮೇಶ್ ಯಾದವ್ ಔಟಾಗದೆ 23, ರಾಜವೀರ್ ವಾಧ್ವಾ 61ಕ್ಕೆ2, ಎಂ.ಎಸ್. ಭಾಂಡಗೆ 55ಕ್ಕೆ2, ಪಾರಸ್ ಗುರುಭಕ್ಷ ಆರ್ಯ 50ಕ್ಕೆ2) ಕೆಎಸ್‌ಸಿಎ ಅಧ್ಯಕ್ಷರ ಇಲೆವನ್: 67 ಓವರ್‌ಗಳಲ್ಲಿ 7ಕ್ಕೆ200 (ಅನೀಶ್ವರ್ ಗೌತಮ್ 31, ಸುಜಯ್ ಸತೇರಿ ಔಟಾಗದೆ 48, ಅಭಿನವ್ ಮನೋಹರ್ 62, ನಚಿಕೇತ್ ಭೂತೆ 35ಕ್ಕೆ4, ಪಾರ್ಥ ರೇಖಡೆ 49ಕ್ಕೆ2)
ಆಲೂರು (3): ಮೊದಲ ಇನಿಂಗ್ಸ್: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 63.1 ಓವರ್‌ಗಳಲ್ಲಿ 181. ಆಂಧ್ರ: 51 ಓವರ್‌ಗಳಲ್ಲಿ 188 (ಎಂ. ವಂಶಿಕೃಷ್ಣ 81, ಕೆ.ವಿ. ಶಶಿಕಾಂತ್ 31, ಆದಿತ್ಯ ಗೋಯಲ್ 38ಕ್ಕೆ2, ನಿಶ್ಚಿತ್ ಎನ್ ರಾವ್ 19ಕ್ಕೆ2), ಶಿಖರ್ ಶೆಟ್ಟಿ 39ಕ್ಕೆ5) 2ನೇ ಇನಿಂಗ್ಸ್: ಕರ್ನಾಟಕ: 61 ಓವರ್‌ಗಳಲ್ಲಿ 7ಕ್ಕೆ257 (ವಿಶಾಲ್ ಓನತ್ 65, ಕಿಶನ್ ಬೆದರೆ 40, ಕೆ.ಎಲ್. ಶ್ರೀಜಿತ್ 83, ಶ್ರೇಯಸ್ ಗೋಪಾಲ್ 36, ಜಿ. ಮನೀಶ್ 59ಕ್ಕದ2, ವೈ. ಸಂದೀಪ್ 14ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.