ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರ ಇಲೆವನ್‌, ಕೇರಳ ತಂಡಗಳ ಜಯಭೇರಿ

ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್: ಡಿ.ವೈ.ಪಾಟೀಲ ಅಕಾಡೆಮಿಗೆ ಜಯ; ವಿದರ್ಭ ವಿರುದ್ಧ ಉತ್ತರ ಪ್ರದೇಶಕ್ಕೆ ಗೆಲುವು
Last Updated 27 ಜುಲೈ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಿಯಾನ್ ಖಾನ್ ಅವರ ಶತಕ ಮತ್ತು ಎಚ್‌.ಎಸ್.ಶರತ್‌, ಹರೀಶ್ ಕುಮಾರ್ ಅವರ ಪರಿಣಾಮಕಾರಿ ದಾಳಿ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್ ತಂಡಕ್ಕೆ ಅಮೋಘ ಜಯ ಗಳಿಸಿಕೊಟ್ಟಿತು. ನಗರ ಹೊರವಲಯದ ಆಲೂರು ಒಂದನೇ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಈ ತಂಡ ಬರೋಡ ಕ್ರಿಕೆಟ್ ಸಂಸ್ಥೆ ತಂಡವನ್ನು 93 ರನ್‌ಗಳಿಂದ ಸೋಲಿಸಿತು.

ಎರಡನೇ ಇನಿಂಗ್ಸ್‌ನಲ್ಲಿ ಲಿಯಾನ್ ಖಾನ್‌ (ಔಟಾಗದೆ 101; 218 ಎ, 8 ಬೌಂ) ಅವರ ಮೋಹಕ ಬ್ಯಾಟಿಂಗ್‌ ನೆರವಿನಿಂದ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ಭಾರಿ ಮುನ್ನಡೆ ಗಳಿಸಿತ್ತು. ಹೀಗಾಗಿ ಬರೋಡಕ್ಕೆ ಗೆಲ್ಲಲು 359 ರನ್‌ಗಳು ಬೇಕಾಗಿದ್ದವು. ವಿಷ್ಣು ಸೋಲಂಕಿ ಮತ್ತು ದೀಪಕ್ ಹೂಡ ಅರ್ಧಶತಕ ಗಳಿಸಿ ತಂಡದ ಜಯಕ್ಕಾಗಿ ಶ್ರಮಿಸಿದರು. ಆದರೆ 265 ರನ್‌ಗಳಿಗೆ ಆಲೌಟಾಗಿ ತಂಡ ಸೋಲೊಪ್ಪಿಕೊಂಡಿತು.

ಆಲೂರು ಎರಡನೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಾ.ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿ ತಂಡ ಬಂಗಾಳ ಕ್ರಿಕೆಟ್ ಸಂಸ್ಥೆ ವಿರುದ್ಧ ಇನಿಂಗ್ಸ್‌ ಮತ್ತು 147 ರನ್‌ಗಳಿಂದ ಗೆದ್ದಿತು. ಕಿಣಿ ಕ್ರೀಡಾಂಗಣದಲ್ಲಿ ಕೇರಳ ಕ್ರಿಕೆಟ್ ಸಂಸ್ಥೆ ತಂಡ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯನ್ನು 173 ರನ್‌ಗಳಿಂದ ಮಣಿಸಿತು.

ಸಂಕ್ಷಿಪ್ತ ಸ್ಕೋರು: ಆಲೂರು ಕ್ರೀಡಾಂಗಣ–1: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್, ಮೊದಲ ಇನಿಂಗ್ಸ್‌: 106.4 ಓವರ್‌ಗಳಲ್ಲಿ 402; ಬರೋಡ ಕ್ರಿಕೆಟ್ ಸಂಸ್ಥೆ, ಮೊದಲ ಇನಿಂಗ್ಸ್‌: 82.1 ಓವರ್‌ಗಳಲ್ಲಿ 305; ಕೆಎಸ್‌ಸಿಎ ಅಧ್ಯಕ್ಷರ ಇಲೆವನ್, ಎರಡನೇ ಇನಿಂಗ್ಸ್‌: 88 ಓವರ್‌ಗಳಲ್ಲಿ 3ಕ್ಕೆ 261, ಡಿಕ್ಲೇರ್‌ (ಲಿಯಾನ್ ಖಾನ್‌ ಔಟಾಗದೆ 101, ಕೆ.ವಿ.ಸಿದ್ಧಾರ್ಥ್‌ 51); ಬರೋಡ ಕ್ರಿಕೆಟ್ ಸಂಸ್ಥೆ, ಎರಡನೇ ಇನಿಂಗ್ಸ್‌: 53.4 ಓವರ್‌ಗಳಲ್ಲಿ 265 (ವಿಷ್ಣು ಸೋಲಂಕಿ 53, ದೀಪಕ್‌ ಹೂಡ 88. ಪಿನಾಲ್‌ ಶಾ 32, ನಿನಾದ್‌ ರಾಥ್ವಾ 43; ಎಚ್‌.ಎಸ್‌. ಶರತ್‌ 42ಕ್ಕೆ3, ಹರೀಶ್ ಕುಮಾರ್‌ 29ಕ್ಕೆ3). ಫಲಿತಾಂಶ: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ಗೆ 93 ರನ್‌ಗಳ ಜಯ.

ಆಲೂರು ಕ್ರೀಡಾಂಗಣ–2: ಡಾ.ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿ: 119.5 ಓವರ್‌ಗಳಲ್ಲಿ 8ಕ್ಕೆ 653 ಡಿಕ್ಲೇರ್‌; ಬಂಗಾಳ ಕ್ರಿಕೆಟ್‌ ಸಂಸ್ಥೆ, ಮೊದಲ ಇನಿಂಗ್ಸ್‌: 56.5 ಓವರ್‌ಗಳಲ್ಲಿ 188; ದ್ವಿತೀಯ ಇನಿಂಗ್ಸ್‌: 102.4 ಓವರ್‌ಗಳಲ್ಲಿ 318 (ಇಕ್ಬಾಲ್ ಅಬ್ದುಲ್ಲ 88ಕ್ಕೆ4, ನಿಕಿತ್‌ ಧುಮಲ್‌ 48ಕ್ಕೆ3). ಫಲಿತಾಂಶ: ಡಾ.ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿಗೆ ಇನಿಂಗ್ಸ್‌ ಮತ್ತು 147 ರನ್‌ ಗೆಲುವು.

ಆಲೂರು ಕ್ರೀಡಾಂಗಣ–3: ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ, ಮೊದಲ ಇನಿಂಗ್ಸ್: 95 ಓವರ್‌ಗಳಲ್ಲಿ 319; ವಿದರ್ಭ ಕ್ರಿಕೆಟ್ ಸಂಸ್ಥೆ, ಮೊದಲ ಇನಿಂಗ್ಸ್‌: 77.1 ಓವರ್‌ಗಳಲ್ಲಿ 214; ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ, ಎರಡನೇ ಇನಿಂಗ್ಸ್: 84.3 ಓವರ್‌ಗಳಲ್ಲಿ 5ಕ್ಕೆ 331; ವಿದರ್ಭ ಕ್ರಿಕೆಟ್ ಸಂಸ್ಥೆ, ಎರಡನೇ ಇನಿಂಗ್ಸ್‌: 64.4 ಓವರ್‌ಗಳಲ್ಲಿ 227 (ಅಪೂರ್ವ ವಾಂಖೆಡೆ 57, ಸೌರಭ್ ಕುಮಾರ್‌ 92ಕ್ಕೆ5, ಜೀಶನ್‌ ಅನ್ಸಾರಿ 46ಕ್ಕೆ3). ಫಲಿತಾಂಶ: ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಗೆ 210 ರನ್‌ಗಳ ಜಯ.

ಕಿಣಿ ಕ್ರೀಡಾಂಗಣ: ಕೇರಳ ಕ್ರಿಕೆಟ್ ಸಂಸ್ಥೆ, ಮೊದಲ ಇನಿಂಗ್ಸ್‌: 99.5 ಓವರ್‌ಗಳಲ್ಲಿ 312; ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ, ಮೊದಲ ಇನಿಂಗ್ಸ್‌: 75.4 ಓವರ್‌ಗಳಲ್ಲಿ 175; ಕೇರಳ ಕ್ರಿಕೆಟ್ ಸಂಸ್ಥೆ, ದ್ವಿತೀಯ ಇನಿಂಗ್ಸ್‌:92 ಓವರ್‌ಗಳಲ್ಲಿ 7ಕ್ಕೆ 214 ಡಿಕ್ಲೇರ್‌; ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ, ಎರಡನೇ ಇನಿಂಗ್ಸ್‌: 50.4 ಓವರ್‌ಗಳಲ್ಲಿ 182 (ಅಂಕುಶ್‌ ಬೈನ್ಸ್‌ 41, ಅಮಿತ್ ಕುಮಾರ್‌ 47; ಮಿಥುನ್ ಎಸ್‌ 56ಕ್ಕೆ6, ಸಚಿನ್ ಬೇಬಿ 36ಕ್ಕೆ3). ಫಲಿತಾಂಶ: ಕೇರಳ ಕ್ರಿಕೆಟ್ ಸಂಸ್ಥೆಗೆ 173 ರನ್‌ಗಳ ಗೆಲುವು.

ಮೈಸೂರು ಕೆಎಸ್‌ಸಿಎ ಕ್ರಿಡಾಂಗಣ: ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ, ಮೊದಲ ಇನಿಂಗ್ಸ್‌: 103 ಓವರ್‌ಗಳಲ್ಲಿ 390; ಕೆಎಸ್‌ಸಿಎ ಕೋಲ್ಟ್ಸ್‌, ಮೊದಲ ಇನಿಂಗ್ಸ್‌: 185.2 ಓವರ್‌ಗಳಲ್ಲಿ 9ಕ್ಕೆ 500 ಡಿಕ್ಲೇರ್‌ (ಶುಭಾಂಗ್ ಹೆಗ್ಡೆ 125, ವೈಶಾಖ್ ವಿಜಯಕುಮಾರ್‌ 84; ಈಶ್ವರ್ ಪಾಂಡೆ 85ಕ್ಕೆ 2, ಮಿಹಿರ್‌ ಹಿರ್ವಾನಿ 111ಕ್ಕೆ4); ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ, ದ್ವಿತೀಯ ಇನಿಂಗ್ಸ್‌: 36 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 112 (ಮೊಹಿನಿಶ್ ಮಿಶ್ರಾ ಔಟಾಗದೆ 42; ಶುಭಾಂಗ್ ಹೆಗ್ಡೆ 38ಕ್ಕೆ2). ಫಲಿತಾಂಶ: ಪಂದ್ಯ ಡ್ರಾ.

ಎಸ್‌ಜೆಸಿಇ ಕ್ರೀಡಾಂಗಣ: ಗುಜರಾತ್ ಕ್ರಿಕೆಟ್ ಸಂಸ್ಥೆ, ಮೊದಲ ಇನಿಂಗ್ಸ್‌: 85.5 ಓವರ್‌ಗಳಲ್ಲಿ 272; ಆಂಧ್ರ ಕ್ರಿಕೆಟ್ ಸಂಸ್ಥೆ: 93.3 ಓವರ್‌ಗಳಲ್ಲಿ 313; ಗುಜರಾತ್ ಕ್ರಿಕೆಟ್ ಸಂಸ್ಥೆ, ಎರಡನೇ ಇನಿಂಗ್ಸ್‌: 134 ಓವರ್‌ಗಳಲ್ಲಿ 7ಕ್ಕೆ 486 (ಮನ್‌ಪ್ರೀತ್ ಜುನೇಜ 104, ರುಜುಲ್ ಭಟ್‌ 74, ಉಶ್ಟಿಜ್ ಪಾಟೀಲ್‌ 67; ಪಿ.ವಿಜಯಕುಮಾರ್‌ 49ಕ್ಕೆ2, ಬಿ.ಸಿದ್ಧಾರ್ಥ್‌ 107ಕ್ಕೆ2, ರಿಕಿ ಭುಯಿ 18ಕ್ಕೆ2). ಫಲಿತಾಂಶ: ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT