ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಮಳೆ ನಿಯಮದ ಹರಿಕಾರ ಲೂಯಿಸ್ ನಿಧನ

Last Updated 2 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಲಂಡನ್: ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಮಳೆ ಮತ್ತು ಕೆಟ್ಟ ಹವಾಮಾನದಿಂದಾಗಿ ಆಟ ನಿಂತಾಗ ಅನ್ವಯವಾಗುವ ಡಕ್ವರ್ಥ್–ಲೂಯಿಸ್ ನಿಯಮ ರೂಪಿಸಿದವರಲ್ಲಿ ಒಬ್ಬರಾದ ಟೋನಿ ಲೂಯಿಸ್ (78) ಬುಧವಾರ ನಿಧನರಾದರು.

‘ಟೋನಿ ಮತ್ತು ಗಣಿತತಜ್ಞ ಫ್ರ್ಯಾಂಕ್ ಡಕ್ವರ್ಥ್ ಅವರು 1997ರಲ್ಲಿ ನಿಯಮ ರೂಪಿಸಿದ್ದರು. ಅದನ್ನು 1999ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧಿಕೃತವಾಗಿ ಜಾರಿಗೊಳಿಸಿತ್ತು. 2014ರಲ್ಲಿ ಪರಿಷ್ಕರಣೆಗೊಂಡ ನಿಯಮಕ್ಕೆ ಡಕ್ವರ್ಥ್‌–ಲೂಯಿಸ್‌–ಸ್ಟರ್ನ್ ಎಂದು ಮರುನಾಮಕರಣ ಮಾಡಲಾಗಿತ್ತು. ಪಂದ್ಯ ನಡೆಯುವ ಸಂದರ್ಭದಲ್ಲಿ ಮಳೆ ಬಂದಾಗ ಓವರ್‌ಗಳ ಕಡಿತ ಮತ್ತು ಪರಿಷ್ಕತ ಗುರಿ ನಿಗದಿ ಮಾಡಲು ಈ ನಿಯಮವನ್ನು ಬಳಸಲಾಗುತ್ತಿದೆ’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಲೂಯಿಸ್ ಇಂಗ್ಲೆಂಡ್ ತಂಡದ ಪರ ಕ್ರಿಕೆಟ್ ಆಡಿದ್ದರು. ಆದರೆ, ಅವರು ಕ್ರಿಕೆಟ್‌ ಲೋಕದಲ್ಲಿ ಚಿರಪರಿಚಿತರಾಗಿದ್ದು ಮಳೆ ನಿಯಮದ ಮೂಲಕವೇ. ಅವರ ಕಾರ್ಯಕ್ಕಾಗಿ ಎಂಬಿಇ (ಬ್ರಿಟಿಷ್ ಎಂಪೈರ್ ಗೌರವ ಸದಸ್ಯತ್ವ) ಕೂಡ ಲಭಿಸಿತ್ತು. ‌

‘ಕ್ರಿಕೆಟ್‌ ಕ್ಷೇತ್ರಕ್ಕೆ ಟೋನಿಯವರ ಕಾಣಿಕಗೆ ಬಹಳ ದೊಡ್ಡದು. ಅವರ ಅಗಲಿಕೆಯು ದುಃಖದ ವಿಷಯ’ ಎಂದು ಇಸಿಬಿ ಸಂತಾಪ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT