ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್: ಡೆಲ್ಲಿಗೆ ಅಶ್ವಿನ್; ಪಂಜಾಬ್‌ಗೆ ಸುಚಿತ್

Last Updated 8 ನವೆಂಬರ್ 2019, 19:38 IST
ಅಕ್ಷರ ಗಾತ್ರ

ನವದೆಹಲಿ: ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವನ್ನು ತೊರೆದು ಡೆಲ್ಲಿ ಕ್ಯಾಪಿಟಲ್ಟ್‌ ಸೇರಿಕೊಂಡಿದ್ಧಾರೆ.

ಅವರ ಬದಲಿಗೆ ಕನ್ನಡಿಗ ಜೆ. ಸುಚಿತ್ ಅವರನ್ನು ಡೆಲ್ಲಿ ತಂಡವು ಪಂಜಾಬ್‌ಗೆ ವಿನಿಮಯ ಮಾಡಿಕೊಂಡಿದೆ. ಟ್ರೇಡ್‌ ವಿಂಡೋ ನಿಯಮದಡಿಯಲ್ಲಿ ಡೆಲ್ಲಿ ತಂಡವು ಈ ವಿನಿಮಯವನ್ನು ಮಾಡಿಕೊಂಡಿದೆ. ಪಂಜಾಬ್ ತಂಡಕ್ಕೆ ₹1.5 ಕೋಟಿ ಹೆಚ್ಚುವರಿ ಮೊತ್ತವನ್ನೂ ನೀಡಿದೆ.

‘ಈ ವಿನಿಮಯದಿಂದ ಉಭಯ ತಂಡಗಳಲ್ಲಿ ಸಂತಸ ಮೂಡಿದೆ. ನಾವು ಮೂರು ತಂಡಗಳ ಆಟಗಾರರ ಬಗ್ಗೆ ಯೋಚಿಸದ್ದೆವು. ಅಂತಿಮವಾಗಿ ಅಶ್ವಿನ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಅವರು ಉತ್ತಮ ಆಲ್‌ರೌಂಡರ್ ಆಗಿದ್ದಾರೆ’ ಎಂದು ಕಿಂಗ್ಸ್‌ ಇಲೆವನ್ ತಂಡದ ಸಹಮಾಲೀಕ ನೆಸ್ ವಾಡಿಯಾ ಹೇಳಿದ್ಧಾರೆ.

2018ರ ಹರಾಜು ಪ್ರಕ್ರಿಯೆಯಲ್ಲಿ ಅಶ್ವಿನ್ ಅವರಿಗೆ ಬಿಡ್ ಮಾಡಲಾಗಿದ್ದ ₹ 7.6 ಕೋಟಿಯನ್ನು ಡೆಲ್ಲಿ ತಂಡವೇ ಪಾವತಿಸಲಿದೆ.

ಈ ವರ್ಗಾವಣೆಯ ಕುರಿತು ನವೆಂಬರ್ 14ರಂದು ಈ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಗುವುದು.

ರಾಹುಲ್‌ಗೆ ನಾಯಕತ್ವ?: ಪಂಜಾಬ್ ತಂಡದ ನಾಯಕರಾಗಿದ್ದ ಅಶ್ವಿನ್ ಡೆಲ್ಲಿ ತಂಡಕ್ಕೆ ಹೋಗಿದ್ದರಿಂದ ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ನಾಯಕತ್ವದ ಹೊಣೆ ನೀಡುವ ಸಾಧ್ಯತೆ ಇದೆ.

ಪಂಜಾಬ್ ತಂಡದಲ್ಲಿ ರಾಹುಲ್ ಕಳೆದ ಎರಡು ಋತುಗಳಿಂದಲೂ ಆಡುತ್ತಿದ್ಧಾರೆ. ಈ ತಂಡದಲ್ಲಿ ಕನ್ನಡಿಗರಾದ ಮಯಂಕ್ ಅಗರವಾಲ್ ಮತ್ತು ಕರುಣ್ ನಾಯರ್ ಕೂಡ ಇದ್ದಾರೆ. ಇತ್ತೀಚೆಗೆ ಕರ್ನಾಟಕದ ಅನಿಲ್ ಕುಂಬ್ಳೆ ಅವರು ಈ ತಂಡದ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT