ಭಾನುವಾರ, ನವೆಂಬರ್ 17, 2019
21 °C

ದೆಹಲಿ ವಾಯುಮಾಲಿನ್ಯ; ಟಿ–20 ಪಂದ್ಯದ ವೇಳೆ ವಾಂತಿ ಮಾಡಿಕೊಂಡ ಬಾಂಗ್ಲಾ ಆಟಗಾರರು

Published:
Updated:

ನವದೆಹಲಿ: ಭಾನುವಾರ ನಡೆದ ಟಿ 20 ಪಂದ್ಯದ ವೇಳೆ ವಿಪರೀತ ವಾಯುಮಾಲಿನ್ಯದಿಂದಾಗಿ ಬಾಂಗ್ಲಾ ಕ್ರಿಕೆಟ್‌ ತಂಡದ ಸೌಮ್ಯ ಸರ್ಕಾರ್ ಮತ್ತು ಇನ್ನೊಬ್ಬ ಆಟಗಾರ ಮೈದಾನದಲ್ಲೇ ವಾಂತಿ ಮಾಡಿಕೊಂಡಿದ್ದಾರೆ ಎಂದು espncricinfo.com ವರದಿ ಮಾಡಿದೆ. 

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಮೊದಲ ಟಿ20 ಪಂದ್ಯ ನಡೆದಿದ್ದು, ಬಾಂಗ್ಲಾ ತಂಡ ಫೀಲ್ಡಿಂಡ್‌ ಮಾಡುತ್ತಿದ್ದಾಗ ಆಟಗಾರ ಇಂಥ ಅವಸ್ಥೆ ಪಟ್ಟಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತವು 148  ರನ್‌ಗಳಿಸಿತು, ಬಾಂಗ್ಲಾ ತಂಡವು 19.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಬೆನ್ನಟ್ಟಿತು .        

ಇದನ್ನೂ ಓದಿ: ಭಾರತ ಎದುರು ಗೆಲುವು: ಬಾಂಗ್ಲಾ ಕ್ರಿಕೆಟ್‌ನಲ್ಲಿ ಮೂಡಿದ ಭರವಸೆ

ನಾವು ಭಾರತ ಬೌಲರ್‌ಗಳನ್ನು ಎದುರಿಸುವ ಬಗ್ಗೆ ಚಿಂತಿತರಾಗಿದ್ದೆವು. ವಾಯು ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು  ಮುಷ್ಫಿಕುರ್ ರಹೀಮ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. 

ಕಠಿಣ ಪರಿಸ್ಥಿತಿಯಲ್ಲಿ ಪಂದ್ಯ ಆಡಲು ಒಪ್ಪಿಕೊಂಡ ಭಾರತ ಮತ್ತು ಬಾಂಗ್ಲಾ ತಂಡದ ಆಟಗಾರರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ: ಮಾಲಿನ್ಯದ ಅಪಾಯಮಟ್ಟ: ಶಾಲೆಗಳಿಗೆ ರಜೆ, ಉಸಿರಾಟವೂ ಕಷ್ಟ

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾದೇಶವು 1–0 ಅಂತರದಲ್ಲಿ ಮುಂದಿದೆ.

 

ಪ್ರತಿಕ್ರಿಯಿಸಿ (+)