ಮಂಗಳವಾರ, ನವೆಂಬರ್ 12, 2019
24 °C
ಮತ್ತೆ ಮಿಂಚಿದ ಲವನೀತ್

ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವು

Published:
Updated:

ಮೈಸೂರು: ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ಬಿಸಿಸಿಐ 23 ವರ್ಷ ವಯಸ್ಸಿನೊಳಗಿನವರ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯರು 65 ರನ್‌ಗಳಿಂದ ಮಹಾರಾಷ್ಟ್ರ ತಂಡವನ್ನು ಪರಾಭವಗೊಳಿಸಿದರು. ಅಜೇಯ 91 ರನ್‌ ಗಳಿಸಿದ ಲವನೀತ್‌ ಸಿಸೋಡಿಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂಕ್ಷಿಪ್ತ ಸ್ಕೋರ್‌ (ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣ): ಕರ್ನಾಟಕ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 305 (ಲವನೀತ್ ಸಿಸೋಡಿಯ ಅಜೇಯ 91, ಶಿವಕುಮಾರ್‌ ಉಮೇಶ್‌ 79, ಸುಜಿತ್‌ ಎನ್‌ ಗೌಡ 31, ದಿಗ್ವಿಜಯ್‌ ದೇಶಮುಖ್ 53ಕ್ಕೆ 3) ಮಹಾರಾಷ್ಟ್ರ 48.1 ಓವರ್‌ಗಳಲ್ಲಿ 240 (ಅಥರ್ವ ಕಾಳೆ 71, ಪವನ್‌ ಶಾ 56, ಅಭಿಲಾಶ್‌ ಶೆಟ್ಟಿ 51ಕ್ಕೆ 3, ಪ್ರಣವ್‌ ಭಾಟಿಯ 25ಕ್ಕೆ 2) ಫಲಿತಾಂಶ: ಕರ್ನಾಟಕಕ್ಕೆ 65 ರನ್‌ ಗೆಲುವು

ಎಸ್‌ಜೆಸಿಇ, ಮೈಸೂರು: ಗುಜರಾತ್‌ 50 ಓವರ್‌ಗಳಲ್ಲಿ 260 (ಉರ್ವಿಲ್‌ ಪಟೇಲ್‌ 94, ಕ್ಷಿತಿಜ್‌ಕುಮಾರ್‌ ಪಟೇಲ್ 57, ತ್ರಿಲೋಕ್‌ನಾಗ್‌ ಕುಮಾರ್‌ 60ಕ್ಕೆ 4) ತಮಿಳುನಾಡು 48.1 ಓವರ್‌ಗಳಲ್ಲಿ 247 (ಪ್ರದೋಶ್‌ ಪೌಲ್‌ 69, ಜಗನ್ನಾಥ್‌ ರವಿಶಂಕರ್‌ 56, ಯಶ್‌ ಗರ್ಧಾರಿಯ 31ಕ್ಕೆ 3, ಸಿದ್ದಾರ್ಥ್‌ ದೇಸಾಯಿ 37ಕ್ಕೆ 3) ಫಲಿತಾಂಶ: ಗುಜರಾತ್‌ ತಂಡಕ್ಕೆ 13 ರನ್‌ ಜಯ

ಪಿಇಟಿ, ಮಂಡ್ಯ: ವಿದರ್ಭ 48.5 ಓವರ್‌ಗಳಲ್ಲಿ 232 (ಅಥರ್ವ ತೈಡೆ 51, ಸಿದ್ದೇಶ್‌ ವಾಥ್‌ 40, ಯಶ್‌ ಕದಂ 45, ಗುರ್ವಿಂದರ್‌ ಭುಲ್ಲರ್‌ 48ಕ್ಕೆ 6) ಪಂಜಾಬ್‌ 20.4 ಓವರ್‌ಗಳಲ್ಲಿ 41 (ಮಯಂಕ್‌ ಸಿಧು 17, ಯಶ್‌ ಠಾಕೂರ್‌ 16ಕ್ಕೆ 4, ದರ್ಶನ್‌ ನಾಲ್ಕಂಡೆ 6ಕ್ಕೆ 3) ಫಲಿತಾಂಶ: ವಿದರ್ಭ ತಂಡಕ್ಕೆ 191 ರನ್‌ ಗೆಲುವು

ಪ್ರತಿಕ್ರಿಯಿಸಿ (+)