ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ತಂಡ ಜಯಭೇರಿ

ಕ್ರಿಕೆಟ್‌: ಮಿಂಚಿದ ಲವನೀತ್‌, ಶರತ್‌
Last Updated 1 ನವೆಂಬರ್ 2019, 19:13 IST
ಅಕ್ಷರ ಗಾತ್ರ

ಮೈಸೂರು: ಲವನೀತ್‌ ಸಿಸೋಡಿಯ, ಬಿ.ಆರ್‌.ಶರತ್ ಮತ್ತು ಕಿಶನ್‌ ಬೆದಾರೆ ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ ಬಿಸಿಸಿಐ 23 ವರ್ಷ ವಯಸ್ಸಿನೊಳಗಿನವರ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಜಯ ಸಾಧಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕರ್ನಾಟಕ 6 ವಿಕೆಟ್‌ಗಳಿಂದ ಮಧ್ಯಪ್ರದೇಶ ತಂಡವನ್ನು ಮಣಿಸಿತು. ಎಸ್‌ಜೆಸಿಇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ತಮಿಳುನಾಡು ತಂಡ 3 ವಿಕೆಟ್‌ಗಳಿಂದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಗೆಲುವು ಪಡೆಯಿತು.

ಸಂಕ್ಷಿಪ್ತ ಸ್ಕೋರ್‌ (ಗ್ಲೇಡ್ಸ್‌ ಕ್ರೀಡಾಂಗಣ): ಮಧ್ಯಪ್ರದೇಶ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 234 (ಅಂಕುಶ್‌ ತ್ಯಾಗಿ 64, ನಿಖಿಲ್‌ ಮಿಶ್ರಾ 49, ಮನೋಜ್‌ ಭಾಂಡಗೆ 48ಕ್ಕೆ 2, ವೈಶಾಖ್‌ ವಿಜಯಕುಮಾರ್ 59ಕ್ಕೆ 2) ಕರ್ನಾಟಕ 45.3 ಓವರ್‌ಗಳಲ್ಲಿ 4 ವಿಕೆಟ್‌ಗೆ 235 (ಬಿ.ಆರ್‌.ಶರತ್ 67, ಲವನೀತ್‌ ಸಿಸೋಡಿಯ 86, ಕಿಶನ್‌ ಬೆದಾರೆ 56, ಬಿ.ರಾಹುಲ್‌ 44ಕ್ಕೆ 2) ಫಲಿತಾಂಶ: ಕರ್ನಾಟಕ ತಂಡಕ್ಕೆ 6 ವಿಕೆಟ್‌ ಜಯ

ಎಸ್‌ಜೆಸಿಇ ಮೈದಾನ: ಜಮ್ಮು ಮತ್ತು ಕಾಶ್ಮೀರ 39.1 ಓವರ್‌ಗಳಲ್ಲಿ 172 (ಹೆನಾನ್‌ ಮಲಿಕ್‌ 87, ಸೂರ್ಯಾಂಶ್ ರೈನಾ 31, ತ್ರಿಲೋಕ್‌ ನಾಗಕುಮಾರ್ 20ಕ್ಕೆ 3, ಸಿದ್ದಾರ್ಥ್‌ ಮಣಿಮಾರನ್‌ 22ಕ್ಕೆ 2) ತಮಿಳುನಾಡು 41 ಓವರ್‌ಗಳಲ್ಲಿ 7 ವಿಕೆಟ್‌ಗೆ 177 (ಗೌರಿಶಂಕರ್‌ ದುರೈಸ್ವಾಮಿ 57, ಸಿದ್ದಾರ್ಥ್‌ ಮಣಿಮಾರನ್ 42) ಫಲಿತಾಂಶ: ತಮಿಳುನಾಡು ತಂಡಕ್ಕೆ 3 ವಿಕೆಟ್‌ ಗೆಲುವು

ಪಿಇಟಿ ಮೈದಾನ, ಮಂಡ್ಯ: ಬರೋಡ 32 ಓವರ್‌ಗಳಲ್ಲಿ 9 ವಿಕೆಟ್‌ಗೆ 147 (ಧ್ರುವ ಪಟೇಲ್‌ ಅಜೇಯ 34, ಭಾನು ಪನಿಯಾ 23, ದರ್ಶನ್‌ ಎನ್‌. 18ಕ್ಕೆ 3, ಮೋಹಿತ್‌ ರಾವತ್ 41ಕ್ಕೆ 3) ವಿದರ್ಭ 28 ಓವರ್‌ಗಳಲ್ಲಿ 3 ವಿಕೆಟ್‌ಗೆ 148 (ಸಿದ್ದೇಶ್‌ ವಾಥ್‌ 75, ಮೋಹಿತ್‌ ಕಾಳೆ 35) ಫಲಿತಾಂಶ: ವಿದರ್ಭ ತಂಡಕ್ಕೆ 7 ವಿಕೆಟ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT