ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮರ್‌ ಅಕ್ಮಲ್‌ಗೆ ಮೂರು ವರ್ಷ ನಿಷೇಧ

Last Updated 27 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕರಾಚಿ: ಭ್ರಷ್ಟಾಚಾರ ನಡೆಸಲುವ್ಯಕ್ತಿಯೊಬ್ಬರು ಸಂಪರ್ಕಿಸಿದ್ದ ಸಂಗತಿಯನ್ನು ಮುಚ್ಚಿಟ್ಟ ಹಿನ್ನೆಲೆಯಲ್ಲಿ ಬ್ಯಾಟ್ಸಮನ್‌ ಉಮರ್‌ ಅಕ್ಮಲ್‌ ಮೇಲೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ)ಸೋಮವಾರ ಮೂರು ವರ್ಷಗಳ ನಿಷೇಧ ಹೇರಿದೆ.

ಪಾಕಿಸ್ತಾನ ಪ್ರೀಮಿಯರ್‌ ಟ್ವೆಂಟಿ–20 ಲೀಗ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಫೆಬ್ರವರಿಯಲ್ಲಿ ಉಮರ್ ಅವರನ್ನು ಅಮಾನತು ಮಾಡಲಾಗಿತ್ತು.ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘಿಸಿದ ಎರಡು ಪ್ರಕರಣಗಳಲ್ಲಿ ಅವರನ್ನು ಆರೋಪಿಯನ್ನಾಗಿಸಲಾಗಿತ್ತು.

‘ನಿವೃತ್ತ ನ್ಯಾಯಮೂರ್ತಿ ಫಜಲ್‌ –ಇ– ಮಿರಾನ್ ನೇತೃತ್ವದ ಶಿಸ್ತು ಸಮಿತಿಯಿಂದ ಉಮರ್‌ ಅವರಿಗೆ‌ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಮೂರು ವರ್ಷ ನಿಷೇಧ ಹೇರಲಾಗಿದೆ’ ಎಂದು ಪಿಸಿಬಿ ಟ್ವೀಟ್‌ ಮಾಡಿದೆ.

ಹಿರಿಯ ಕ್ರಿಕೆಟಿಗ, ವಿಕೆಟ್‌ ಕೀಪರ್‌ ಕಮ್ರಾನ್‌ ಅಕ್ಮಲ್‌ ಅವರ ಸಹೋದರ ಉಮರ್‌, ಪಾಕಿಸ್ತಾನ ಪರ 16 ಟೆಸ್ಟ್‌, 121 ಏಕದಿನ ಹಾಗೂ 84 ಟಿ20 ಪಂದ್ಯಗಳನ್ನು ಆಡಿದ್ದಾರೆ. ತಮ್ಮ ತಂಡಕ್ಕೆ ಕೊನೆಯ ಬಾರಿ ಆಡಿದ್ದು ಹೋದ ವರ್ಷದ ಅಕ್ಟೋಬರ್‌ನಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT