ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL T20: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬೆನ್ ದ್ವಾರ್ಶಿಸ್‌

Last Updated 14 ಸೆಪ್ಟೆಂಬರ್ 2021, 5:13 IST
ಅಕ್ಷರ ಗಾತ್ರ

ದುಬೈ: ಆಸ್ಟ್ರೇಲಿಯಾದ ವೇಗದ ಬೌಲರ್ ಬೆನ್‌ ದ್ವಾರ್ಶಿಸ್‌ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕ್ರಿಸ್ ವೋಕ್ಸ್‌ ಬದಲಿಗೆ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಕ್ಯಾಪಿಟಲ್ಸ್ ಫ್ರಾಂಚೈಸ್ ಸೋಮವಾರ ತಿಳಿಸಿದೆ.

27 ವರ್ಷದ ದ್ವಾರ್ಶಿಸ್‌ ಎಡಗೈ ಬೌಲರ್ ಆಗಿದ್ದು ಈ ವರೆಗೆ ಅಂತರರಾಷ್ಟ್ರೀಯ ಪಂದ್ಯ ಆಡಲಿಲ್ಲ. ಆದರೆ ಲಿಸ್ಟ್ ‘ಎ’ ಮತ್ತು ದೇಶಿ ಟಿ20 ಪಂದ್ಯಗಳಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಏಳು ಲಿಸ್ಟ್ ‘ಎ’ ಪಂದ್ಯಗಳಲ್ಲಿ 12 ವಿಕೆಟ್ ಗಳಿಸಿರುವ ಅವರು 82 ಟಿ20 ಪಂದ್ಯಗಳಲ್ಲಿ 100 ವಿಕೆಟ್ ಉರುಳಿಸಿದ್ದಾರೆ.

ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ನ್ಯೂ ಸೌತ್ ವೇಲ್ಸ್‌ ತಂಡದ ಪರ ಆಡುವ ಅವರು ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಕಣಕ್ಕೆ ಇಳಿದಿದ್ದಾರೆ. ಬಿಗ್ ಬ್ಯಾಷ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅರನೇ ಸ್ಥಾನದಲ್ಲಿದ್ದಾರೆ. ಲೀಗ್‌ನ 69 ಪಂದ್ಯಗಳಲ್ಲಿ 85 ವಿಕೆಟ್ ಉರುಳಿಸಿದ್ದಾರೆ.

ಈ ಹಿಂದೆ ಕಿಂಗ್ಸ್ ಇಲೆವನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್‌) ತಂಡದಲ್ಲಿದ್ದ ಅವರು ಸದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ನ ಬಯೊ ಬಬಲ್ ಪ್ರವೇಶಿಸಲಿದ್ದಾರೆ ಎಂದು ಫ್ರಾಂಚೈಸ್ ತಿಳಿಸಿದೆ.

ಕೊರೊನಾದಿಂದಾಗಿ ಅರ್ಧಕ್ಕೆ ನಿಂತಿದ್ದ ಐಪಿಎಲ್‌ ಟೂರ್ನಿಯ ಎರಡನೇ ಭಾಗದ ಪಂದ್ಯಗಳು ಇದೇ 19ರಂದು ಯುಎಇಯಲ್ಲಿ ಆರಂಭವಾಗಲಿವೆ. ಮೊದಲ ಭಾಗದಲ್ಲಿ ಆಡಿದ್ದ ವೋಕ್ಸ್‌ ವೈಯಕ್ತಿಕ ಕಾರಣದಿಂದ ಎರಡನೇ ಭಾಗದಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಜಾನಿ ಬೆಸ್ಟೊ (ಸನ್‌ರೈಸರ್ಸ್ ಹೈದರಾಬಾದ್) ಮತ್ತು ಡೇವಿಡ್ ಮಲಾನ್ (ಪಂಜಾಬ್ ಕಿಂಗ್ಸ್) ಕೂಡ ಯುಎಇಗೆ ತೆರಳದೇ ಇರಲು ನಿರ್ಧರಿಸಿದ್ದಾರೆ.

ಈ ಮೂವರು ಭಾರತದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಪರ ಆಡಿದ್ದರು. ಎಂಟು ಪಂದ್ಯಗಳಿಂದ 12 ಪಾಯಿಂಟ್ ಕಲೆ ಹಾಕಿರುವ ಡೆಲ್ಲಿ ಕ್ಯಾಪಿಟಲ್ಸ್‌ ಪಟ್ಟಿಯಲ್ಲಿ ಸದ್ಯ ಅಗ್ರ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT