ಮಂಗಳವಾರ, ಜುಲೈ 27, 2021
20 °C

ಇಂಗ್ಲೆಂಡ್‌ ಪ್ರವಾಸಕ್ಕೆ ಆಸ್ಟ್ರೇಲಿಯಾದ ಸಂಭಾವ್ಯ ತಂಡ: ಮೂವರು ಹೊಸಬರಿಗೆ ಅವಕಾಶ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಮುಂಬರುವ ಇಂಗ್ಲೆಂಡ್‌ ಎದುರಿನ ನಿಗದಿತ ಓವರ್‌ಗಳ ಕ್ರಿಕೆಟ್‌ ಸರಣಿಗಳಿಗೆ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಗುರುವಾರ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದು, ಮೂರು ಮಂದಿ ಹೊಸಬರಿಗೆ ಅವಕಾಶ ನೀಡಿದೆ.

ಡೇನಿಯಲ್‌ ಸ್ಯಾಮ್ಸ್‌, ರಿಲಿ ಮೆರೆಡಿತ್‌ ಹಾಗೂ ಜೋಶ್‌ ಫಿಲಿಪ್‌ ಅವರು 26 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅನುಭವಿಗಳಾದ ಶಾನ್‌ ಮಾರ್ಷ್‌ ಮತ್ತು ನೇಥನ್‌ ಕೌಲ್ಟರ್‌ನೈಲ್‌ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇವರು ಹೋದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದರು.

ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಉಸ್ಮಾನ್‌ ಖ್ವಾಜಾ ಹಾಗೂ ಆಲ್‌ರೌಂಡರ್‌ ಮಾರ್ಕಸ್‌ ಸ್ಟೊಯಿನಿಸ್‌ ಅವರು ತಂಡಕ್ಕೆ ಮರಳಿದ್ದಾರೆ.

ಈ ತಿಂಗಳು ನಿಗದಿಯಾಗಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವಣ ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ–20 ಕ್ರಿಕೆಟ್‌ ಸರಣಿಗಳನ್ನು ಕೋವಿಡ್‌ ಬಿಕ್ಕಟ್ಟಿನಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಇಂಗ್ಲೆಂಡ್‌ನಲ್ಲಿ ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳು ನಡೆಯುತ್ತಿರುವ ಕಾರಣ, ಸೆಪ್ಟೆಂಬರ್‌ನಲ್ಲಿ ಕಾಂಗರೂ ನಾಡಿನ ಎದುರಿನ ಸರಣಿ ಆಯೋಜನೆಯಾಗುವ ನಿರೀಕ್ಷೆ ಇದೆ.

‘ಬಿಗ್‌ ಬ್ಯಾಷ್‌ ಸೇರಿದಂತೆ ದೇಶಿಯ ಟೂರ್ನಿಗಳಲ್ಲಿ ಅನೇಕ ಯುವ ಆಟಗಾರರು ಮಿಂಚುತ್ತಿದ್ದಾರೆ. ಆ ಪೈಕಿ ಕೆಲವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಯುವ ಆಟಗಾರರು ಆಸ್ಟ್ರೇಲಿಯಾ ಕ್ರಿಕೆಟ್‌ನ ಭವಿಷ್ಯದ ತಾರೆಗಳಾಗಿದ್ದಾರೆ. ಅವರಿಗೆ ಅಗತ್ಯ ಪ್ರೋತ್ಸಾಹ ನೀಡಲು ನಾವು ಸಿದ್ಧರಿದ್ದೇವೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವೊರ್‌ ಹಾನ್ಸ್‌ ತಿಳಿಸಿದ್ದಾರೆ. 

ಸಂಭಾವ್ಯ ತಂಡ ಇಂತಿದೆ: ಸೀನ್‌ ಅಬಾಟ್‌, ಆ್ಯಷ್ಟನ್‌ ಆಗರ್‌, ಅಲೆಕ್ಸ್‌ ಕೇರಿ, ಪ್ಯಾಟ್‌ ಕಮಿನ್ಸ್‌, ಆ್ಯರನ್‌ ಫಿಂಚ್‌, ಜೋಶ್‌ ಹ್ಯಾಜಲ್‌ವುಡ್‌, ಟ್ರಾವಿಸ್‌ ಹೆಡ್, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಾಬುಶೇನ್‌, ನೇಥನ್‌ ಲಯನ್‌, ಮಿಷೆಲ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಬೆನ್‌ ಮೆಕ್‌ಡರ್ಮಟ್‌, ರಿಲಿ ಮೆರೆಡಿತ್‌, ಮೈಕಲ್‌‌ ನೆಸೆರ್‌, ಜೋಶ್‌ ಫಿಲಿಪ್‌, ಡೇನಿಯಲ್‌ ಸ್ಯಾಮ್ಸ್‌, ಡಿ ಆರ್ಸಿ ಶಾರ್ಟ್‌, ಕೇನ್‌ ರಿಚರ್ಡ್‌ಸನ್‌, ‌ಸ್ಟೀವ್‌ ಸ್ಮಿತ್‌, ಮಿಷೆಲ್‌ ಸ್ಟಾರ್ಕ್‌, ಮಾರ್ಕಸ್‌ ಸ್ಟೊಯಿನಿಸ್‌, ಆ್ಯಂಡ್ರ್ಯೂ ಟೈ, ಮ್ಯಾಥ್ಯೂ ವೇಡ್‌, ಡೇವಿಡ್‌ ವಾರ್ನರ್‌ ಮತ್ತು ಆ್ಯಡಂ ಜಂಪಾ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು