19 ವರ್ಷದೊಳಗಿನವರ ಏಷ್ಯಾಕಪ್‌ ಕ್ರಿಕೆಟ್‌: ಇಂದು ಅಫ್ಗಾನ್‌ ಎದುರು ಪೈಪೋಟಿ

7
ಗೆಲುವಿನ ‘ಹ್ಯಾಟ್ರಿಕ್‌’ ಮೇಲೆ ಭಾರತ ಕಣ್ಣು

19 ವರ್ಷದೊಳಗಿನವರ ಏಷ್ಯಾಕಪ್‌ ಕ್ರಿಕೆಟ್‌: ಇಂದು ಅಫ್ಗಾನ್‌ ಎದುರು ಪೈಪೋಟಿ

Published:
Updated:
Deccan Herald

ಸವರ್‌, ಬಾಂಗ್ಲಾದೇಶ: ಭಾರತ ಪುರುಷರ ತಂಡದವರು 19 ವರ್ಷದೊಳಗಿನವರ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಗೆಲುವಿನ ‘ಹ್ಯಾಟ್ರಿಕ್‌’ ಮೇಲೆ ಕಣ್ಣು ನೆಟ್ಟಿದ್ದಾರೆ.

ಮಂಗಳವಾರ ನಡೆಯುವ ‘ಎ’ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಪವನ್‌ ಶಾ ಪಡೆ ಅಫ್ಗಾನಿಸ್ತಾನದ ವಿರುದ್ಧ ಸೆಣಸಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ 171ರನ್‌ಗಳಿಂದ ನೇಪಾಳ ತಂಡವನ್ನು ಸೋಲಿಸಿದ್ದ ಭಾರತ, ಭಾನುವಾರ ನಡೆದಿದ್ದ ಎರಡನೇ ಹೋರಾಟದಲ್ಲಿ 227ರನ್‌ಗಳಿಂದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ವಿರುದ್ಧ ಜಯಭೇರಿ ಮೊಳಗಿಸಿತ್ತು. ಈ ಮೂಲಕ ಒಟ್ಟು ನಾಲ್ಕು ಪಾಯಿಂಟ್ಸ್‌ ಸಂಗ್ರಹಿಸಿ ‘ಎ’ ಗುಂಪಿನ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.

ದೇವದತ್ತ ಪಡಿಕ್ಕಲ್‌, ಅನುಜ್‌ ರಾವತ್‌, ನಾಯಕ ಪವನ್‌ ಮತ್ತು ಸಮೀರ್‌ ಚೌಧರಿ ಬ್ಯಾಟಿಂಗ್‌ನಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.

ಕರ್ನಾಟಕದ ದೇವದತ್‌, ಯುಎಇ ಎದುರಿನ ಪಂದ್ಯದಲ್ಲಿ 121ರನ್‌ ಸಿಡಿಸಿ ಗಮನ ಸೆಳೆದಿದ್ದರು. ಅನುಜ್‌ ಕೂಡಾ ಶತಕದ ಸಂಭ್ರಮ ಆಚರಿಸಿದ್ದರು. ಇವರು ಅಫ್ಗಾನ್‌ ಎದುರೂ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ವಿಶ್ವಾಸದಲ್ಲಿದ್ದಾರೆ.

ಬೌಲಿಂಗ್‌ನಲ್ಲಿ ಸಿದ್ದಾರ್ಥ್‌ ದೇಸಾಯಿ ತಂಡದ ಶಕ್ತಿಯಾಗಿದ್ದಾರೆ. ಯುಎಇ ಎದುರು ಇವರು ಆರು ವಿಕೆಟ್‌ ಉರುಳಿಸಿದ್ದರು. ರಾಜೇಶ್‌ ಮೊಹಂತಿ, ಸಬೀರ್‌ ಖಾನ್ ಮತ್ತು ಸಮೀರ್‌ ಚೌಧರಿ ಅವರೂ ಅಫ್ಗಾನ್‌ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಅಫ್ಗಾನಿಸ್ತಾನ ಕೂಡಾ ಗೆಲುವಿನ ವಿಶ್ವಾಸದಲ್ಲಿದೆ. ಈ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ರಹಮನ್‌ಉಲ್ಲಾ ಗುರ್ಬಾಜ್‌ ಬಳಗ ಈ ಬಾರಿ ಆಡಿರುವ ಎರಡು ಪಂದ್ಯಗಳಲ್ಲೂ ಗೆದ್ದಿದೆ.

ಆರಂಭ: ಬೆಳಿಗ್ಗೆ 8.30.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !