ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಶರಣಾದ ದಕ್ಷಿಣ ಆಫ್ರಿಕಾ

ಯೂತ್‌ ‘ಟೆಸ್ಟ್‌’ ಕ್ರಿಕೆಟ್‌ ಪಂದ್ಯ: ಹೃತಿಕ್‌, ಮಾನವ್‌ಗೆ ಮೂರು ವಿಕೆಟ್‌
Last Updated 22 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ತಿರುವನಂತಪುರ: ಮಾನವ್‌ ಸುತಾರ್‌ (44ಕ್ಕೆ3) ಮತ್ತು ಹೃತಿಕ್‌ ಶೊಕೀನ್‌ (52ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಭಾರತ 19 ವರ್ಷದೊಳಗಿನವರ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾ ಎದುರಿನ ‘ಯೂತ್‌ ಟೆಸ್ಟ್‌’ ಪಂದ್ಯದಲ್ಲಿ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ.

ಸೇಂಟ್‌ ಕ್ಸೇವಿಯರ್‌ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ 37ರನ್‌ಗಳ ಸುಲಭ ಗುರಿಯನ್ನು ಸೂರಜ್‌ ಅಹುಜಾ ಸಾರಥ್ಯದ ಭಾರತ ತಂಡ 7.5 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: 67.5 ಓವರ್‌ಗಳಲ್ಲಿ 197 ಮತ್ತು 66 ಓವರ್‌ಗಳಲ್ಲಿ 167 (ಆ್ಯಂಡಿಲ್‌ ಮೊಗಕಾನೆ 30, ಬೊಂಗಾ ಮಖಾಖಾ 74, ಬ್ರೈಸ್‌ ಪಾರ್‌ಸನ್ಸ್‌ 16; ಮಾನವ್‌ ಸುತಾರ್‌ 44ಕ್ಕೆ3, ಹೃತಿಕ್‌ ಶೊಕೀನ್‌ 52ಕ್ಕೆ3, ಅನ್ಸುಲ್‌ ಕಾಂಬೋಜ್‌ 12ಕ್ಕೆ2, ರಾಜವರ್ಧನ್‌ ಹಾಂಗರ್ಗೆಕರ್‌ 24ಕ್ಕೆ1).

ಭಾರತ: 92.3 ಓವರ್‌ಗಳಲ್ಲಿ 330 (ದಿವ್ಯಾಂಶ್‌ ಸಕ್ಸೇನಾ 122, ವತ್ಸಲ್‌ ಗೋವಿಂದ್‌ 23, ಯಶಸ್ವಿ ಜೈಸ್ವಾಲ್‌ 24, ಸೂರಜ್‌ ಅಹುಜಾ 57, ಹೃತಿಕ್‌ ಶೊಕೀನ್‌ 20, ರಾಜವರ್ಧನ್‌ ಹಾಂಗರ್ಗೆಕರ್‌ 41; ಲಿಫಾ ನತಾಂಜಿ 56ಕ್ಕೆ2, ಮಾರ್ಕೊ ಜಾನ್ಸನ್‌ 58ಕ್ಕೆ2, ಬ್ರೈಸ್‌ ಪಾರ್‌ಸನ್ಸ್‌ 77ಕ್ಕೆ6). ಮತ್ತು 7.5 ಓವರ್‌ಗಳಲ್ಲಿ 1 ವಿಕೆಟ್‌ಗೆ 37 (ವರುಣ್‌ ನಾಯನರ್‌ ಔಟಾಗದೆ 19, ದಿವ್ಯಾಂಶ್‌ ಸಕ್ಸೇನಾ 18; ಲಿಫಾ ನತಾಂಜಿ 15ಕ್ಕೆ1).

ಫಲಿತಾಂಶ: ಭಾರತ ತಂಡಕ್ಕೆ 9 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT