ಗುರುವಾರ , ಫೆಬ್ರವರಿ 20, 2020
19 °C

Video| ಡೈಪರ್ ತೊಟ್ಟು ಬ್ಯಾಟ್ ಬೀಸುವ ಬಾಲಕನಿಗೆ ಕೊಹ್ಲಿ ಬಳಿ ಅವಕಾಶ ಕೇಳಿದ ಕೆಪಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌ನ ಮೂರು ಮಾದರಿಯಲ್ಲೂ 50ಕ್ಕಿಂತ ಹೆಚ್ಚಿನ ಸರಾಸರಿ ಕಾಯ್ದುಕೊಂಡಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಬ್ಯಾಟಿಂಗ್‌ ಮಾಡುವ ವೇಳೆ, ಸ್ಟ್ರೈಟ್ ಡ್ರೈವ್‌, ಕವರ್‌ ಡ್ರೈವ್‌ ಹೊಡೆತಗಳನ್ನು ನೋಡುವುದೇ ಸೊಗಸು. ಅಷ್ಟು ನಿಖರವಾಗಿ ಬ್ಯಾಟ್‌ ಬೀಸುವವರು ವಿರಳ. ಆದರೆ ಇಲ್ಲೊಬ್ಬ ಬಾಲಕ ಕೊಹ್ಲಿಗೆ ಪೈಪೋಟಿ ನೀಡುವಂತೆ ಸೊಗಸಾಗಿ ಬ್ಯಾಟ್‌ ಬೀಸುತ್ತಿದ್ದಾನೆ.

ಮೈ ಮೇಲೆ ಧರಿಸಿರುವ ಟೀ ಷರ್ಟ್‌, ಕೈಗೆ ಹಾಕಿರುವ ಗ್ಲೌಸ್ ಹಾಗೂ ಸೊಂಟಕ್ಕೆ ತೊಟ್ಟಿರುವ ಡೈಪರ್‌ ಬಿಟ್ಟರೆ ಚೆಂಡಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಕ್ರಿಕೆಟಿಗರು ಮುನ್ನೆಚ್ಚರಿಕೆಗಾಗಿ ಬಳಸುವ ಹೆಲ್ಮೆಟ್‌, ಪ್ಯಾಡ್‌, ಶೂ ಹೀಗೆ ಯಾವುದನ್ನೂ ಆತ ತೊಟ್ಟಿಲ್ಲ. ಹೀಗಿದ್ದರೂ ಆ ಬಾಲಕನ ಕಣ್ಣುಗಳಲ್ಲಿ ಚೆಂಡು ತಲೆಗೆ ಅಪ್ಪಳಿಸೀತು ಎಂಬ ಭಯವಿಲ್ಲ. ಮನದಲ್ಲಿ ಅಳುಕೂ ಇಲ್ಲ. ಲಯಬದ್ಧ ಪಾದಚಲನೆಯೊಂದಿಗೆ ಅಷ್ಟೇ ಗಂಭೀರವಾಗಿ ಪ್ರತಿ ಎಸೆತವನ್ನೂ ಸೊಗಸಾಗಿ ಬಾರಿಸುತ್ತಿದ್ದಾನೆ.

ಇದನ್ನೂ ಓದಿ: ಪರಿಶ್ರಮಕ್ಕೆ ಕೊಹ್ಲಿಯೇ ಮಾನದಂಡ; ಅವರಿಂದ ಕಲಿಯುವುದು ಸಾಕಷ್ಟಿದೆ: ವಿಂಡೀಸ್ ಕೋಚ್

ಪ್ರತಿ ಎಸೆತವನ್ನು ಅತ್ಯಾಕರ್ಷಕವಾಗಿ ಮತ್ತು ನಿಖರವಾಗಿ ದಂಡಿಸುತ್ತಿರುವ ಆ ಪೋರನ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಾಕಷ್ಟು ವೈರಲ್‌ ಆಗಿದೆ. ಆ ವಿಡಿಯೊ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರರ ಕೆವಿನ್‌ ಪೀಟರ್‌ಸನ್‌ ಕಣ್ಣಿಗೂ ಬಿದ್ದಿದೆ.

ಬಾಲಕನ ಬ್ಯಾಟಿಂಗ್‌ ಕೌಶಲಕ್ಕೆ ಫಿದಾ ಆಗಿರುವ ಕೆವಿನ್‌, ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಆತನಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಕೊಡಿಸಲು ಶಿಫಾರಸು ಮಾಡಿದ್ದಾರೆ. ಭಾರತ ಕ್ರಿಕೆಟ್‌ ತಂಡದ ನಾಯಕ ಕೊಹ್ಲಿ ಅವರನ್ನು ಟ್ಯಾಗ್‌ ಮಾಡಿ ‘ಈತನನ್ನು ನಿಮ್ಮ ತಂಡಕ್ಕೆ ಸೇರಿಸಿಕೊಳ್ಳಿ. ನೀವು ಈತನನ್ನು ಆಯ್ಕೆ ಮಾಡುವಿರಾ?’ ಎಂದು ಕೇಳಿದ್ದಾರೆ.

 
 
 
 
 
 
 
 
 
 
 
 
 

WHAT?!?!?!?!?! Get him in your squad, @virat.kohli! Can you pick him?!?! 😱

A post shared by Kevin Pietersen (@kp24) on

ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್‌ ಕೊಹ್ಲಿ, ಬಾಲಕನ ಪ್ರತಿಭೆಯನ್ನು ‘ಕಾಲ್ಪನಿಕ’ ಎಂದಿದ್ದಾರೆ. ಜೊತೆಗೆ ‘ಬಾಲಕ ಎಲ್ಲಿಯವನು?’ ಎಂದು ಪ್ರಶ್ನಿಸಿದ್ದಾರೆ.

ಅಭಿಮಾನಿಗಳ ಪ್ರೀತಿಯ ಕೆಪಿ (ಕೆವಿನ್‌ ಪೀಟರ್‌ಸನ್‌) ಒಂದು ದಿನದ ಹಿಂದಷ್ಟೇ ಹಂಚಿಕೊಂಡಿರುವ ವಿಡಿಯೊವನ್ನು 4.29 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು