ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ತಾರತಮ್ಯದ ನಾಶಕ್ಕೆ ಶಿಕ್ಷಣ ಅಗತ್ಯ: ಮೈಕೆಲ್ ಹೋಲ್ಡಿಂಗ್

Last Updated 8 ಜುಲೈ 2020, 18:34 IST
ಅಕ್ಷರ ಗಾತ್ರ

ಸೌತಾಂಪ್ಟನ್ : ವಿಶ್ವದಿಂದ ವರ್ಣದ್ವೇಷವನ್ನು ಕೊನೆಗಾಣಿಸಲು ಇಡೀ ಮಾನವಕುಲಕ್ಕೇ ಶಿಕ್ಷಣ ನೀಡಿ ಜಾಗೃತಿ ಮೂಡಿಸಬೇಕು ಎಂದು ವೆಸ್ಟ್ ಇಂಡೀಸ್‌ನ ಹಿರಿಯ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಮೈಕೆಲ್ ಹೋಲ್ಡಿಂಗ್ ಹೇಳಿದ್ದಾರೆ.

ಬುಧವಾರ ರೋಸ್ ಬೌಲ್ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಆರಂಭವಾದ ಸಂದರ್ಭದಲ್ಲಿ ಅವರು ಮಾತನಾಡಿದರು.

’ಶಿಕ್ಷಣ ಎಂದರೆ ಜನರು ಇತಿಹಾಸದ ಪಾಠಗಳನ್ನು ಓದಬೇಕು. ನೂರು ವರ್ಷಗಳ ಅವಧಿಯಲ್ಲಿ ವರ್ಣದ್ವೇಷದ ಹೆಸರಲ್ಲಿ ಏನೆಲ್ಲ ಆಗಿದೆ ಎಂಬುದನ್ನು ಅರಿಯಬೇಕು. ಒಂದು ವರ್ಗದ ಜನತೆಯ ಮೇಲೆ ಆಗಿರುವ ಪರಿಣಾಮವನ್ನು ಗ್ರಹಿಸಬೇಕು‘ ಎಂದು ಸ್ಕೈ ಸ್ಪೋರ್ಟ್ಸ್‌ ಕಾಮೆಂಟ್ರಿಯಲ್ಲಿ ಹೋಲ್ಡಿಂಗ್‌ ಭಾವುಕರಾಗಿ ನುಡಿದರು.

ಅಮೆರಿಕದಲ್ಲಿ ಈಚೆಗೆ ಪೊಲೀಸ್ ದೌರ್ಜನ್ಯದಲ್ಲಿ ಆಫ್ರೊ ಅಮೆರಿಕನ್ ವ್ಯಕ್ತಿ ಜಾರ್ಜ್‌ ಫ್ಲಾಯ್ಡ್ ಸಾವಿಗೀಡಾಗಿದ್ದರು. ಅದರಿಂದಾಗಿ ವಿಶ್ವದೆಲ್ಲೆಡೆ ಜನಾಂಗೀಯ ದ್ವೇಷದ ವಿರುದ್ಧದ ಪ್ರತಿಭಟನೆಗಳು ನಡೆಯುತ್ತಿವೆ. ವರ್ಣದ್ವೇಷವನ್ನು ಖಂಡಿಸಿ ಈ ಪಂದ್ಯದಲ್ಲಿಯೂ ಉಭಯ ತಂಡಗಳ ಆಟಗಾರರು ’ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌‘ ಲೋಗೊ ಧರಿಸಿ ಕಣಕ್ಕಿಳಿದಿವೆ. ಸಂಜೆ ಪಂದ್ಯ ಆರಂಭವಾದಾಗ ಮೈದಾನದಲ್ಲಿದ್ದ ಎಲ್ಲ ಆಟಗಾರರೂ ಮಂಡಿಯೂರಿ ಕುಳಿತು ವರ್ಣದ್ವೇಷದ ವಿರುದ್ಧ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

’ನಮ್ಮನ್ನು ಹತ್ತಿಕ್ಕಿ ಜಯಿಸಿದವರೇ ಇತಿಹಾಸವನ್ನೂ ಬರೆದಿದ್ದಾರೆ. ಆದರೆ ಅವರ ವಶಕ್ಕೆ ಒಳಗಾದ ಜನರು ಇತಿಹಾಸ ಬರೆಯಲಿಲ್ಲ. ನಮ್ಮ ಮನಸ್ಥಿತಿಯನ್ನು ಬದಲಿಸುವ ವ್ಯವಸ್ಥಿತ ತಂತ್ರ ನಡೆಯಿತು. ಇದು ಕಪ್ಪು ಜನಾಂಗವನ್ನಷ್ಟೇ ಕಾಡಿಲ್ಲ. ಶ್ವೇತವರ್ಣದ ಕೆಲವರ ಮನಪರಿವರ್ತನೆ ಮಾಡಿದರು. ‌ಮನಸ್ಥಿತಿಯನ್ನು ಬದಲಾಯಿಸುವ. ಪೂರ್ವಾಗ್ರಹಗಳನ್ನು ತುಂಬುವ ಕೆಲಸ ನಿರಂತರವಾಗಿ ನಡೆಯಿತು‘ ಎಂದು ಹೇಳಿದ್ದಾರೆ.

’ಒಂದು ವರ್ಗದ ಜನರಲ್ಲಿ ಕಪ್ಪು ವರ್ಣಿಯರ ವಿರುದ್ಧ ಮೂಡಿಸಿರುವ ಪೂರ್ವಗ್ರಹಗಳು ಮಾರಕವಾಗಿವೆ. ಈ ಮನಸ್ಥಿತಿ ಬದಲಾಗಬೇಕು‘ ಎಂದರು.

‘ಕಪ್ಪುವರ್ಣೀಯ ವ್ಯಕ್ತಿಗಳು ಈ ವಿಶ್ವಕ್ಕೆ ಅಸಾಧಾರಣವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ. ವಿದ್ಯುತ್ ಬಲ್ಬ್ ಕಂಡುಹಿಡಿದ ಥಾಮಸ್ ಎಡಿಸನ್ ಬಹಳ ಜನರಿಗೆ ಗೊತ್ತು. ಆದರೆ ಆ ಬಲ್ಪ್‌ಗೆ ಫಿಲಾಮೆಂಟ್ ತಯಾರಿಸಿ ಕೊಟ್ಟ ವ್ಯಕ್ತಿ ಯಾರೆಂದು ಎಷ್ಟು ಮಂದಿಗೆ ಗೊತ್ತು? ಆತನ ಬಗ್ಗೆ ಯಾವುದಾದರೂ ಪುಸ್ತಕದಲ್ಲಿ ಓದಿರುವ ನೆನಪು ನಿಮಗೆ ಇದೆಯೇ? ಲೂಯಿಸ್ ಲ್ಯಾಟಿಮೆರ್ ಎಂಬ ಕಪ್ಪು ವರ್ಣೀಯ ವ್ಯಕ್ತಿ ಆತ. ನನ್ನ ಜೀವನದುದ್ದಕ್ಕೂ ಕಪ್ಪು ಮಂದಿಯ ಬಗ್ಗೆ ಒಳ್ಳೆಯದನ್ನು ಕಲಿಸಿದನ್ನು ನೋಡಲೇ ಇಲ್ಲ‘ ಎಂದು 66 ವರ್ಷದ ಹೋಲ್ಡಿಂಗ್ ನುಡಿದರು.

ಮುಂದಿನ ವರ್ಷ ಅವರು ವೀಕ್ಷಕ ವಿವರಣೆಗಾರ ಸ್ಥಾನದಿಂದ ನಿವೃತ್ತರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT