ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಆಟಗಾರ ಅಂದರೆ ಅದು ವೈಭವ್ ಸೂರ್ಯವಂಶಿ. 15 ವರ್ಷದ ಅವರು ಐಪಿಎಲ್ನಲ್ಲಿ ದಿನಕ್ಕೊಂದು ದಾಖಲೆ ಬರೆಯುತ್ತಾ ಮುನ್ನುಗ್ಗುತ್ತಿದ್ದಾರೆ. ಇದೀಗ ನಿನ್ನೆ (ಮೇ 9) ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ 100 ಸಿಕ್ಸರ್ಗಳ ಮೈಲಿಗಲ್ಲನ್ನು ವೇಗವಾಗಿ ತಲುಪಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಮೇ 9ರಂದು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿ ಮಿಂಚಿದರು. ಆ ಮೂಲಕ ಅವರು ಟಿ20 ಕ್ರಿಕೆಟ್ನಲ್ಲಿ 102 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಎಡಗೈ ಬ್ಯಾಟರ್ ವೈಭವ್, ಆಸ್ಟ್ರಿಯಾದ ಕರಣ್ಬೀರ್ ಸಿಂಗ್ ಅವರ ದಾಖಲೆಯನ್ನು ಮುರಿದು ಟಿ20 ಕ್ರಿಕೆಟ್ನಲ್ಲಿ ವೆಗವಾಗಿ 100 ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಕರಣ್ಬೀರ್ ಸಿಂಗ್ ಅವರು 813 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು. ಕಿರನ್ ಪೊಲಾರ್ಡ್, ರೊಮಾರಿಯೊ ಶೆಫರ್ಡ್, ಸೀಕುಗೆ ಪ್ರಸನ್ನ ಮತ್ತು ರಹಕೀಮ್ ಕಾರ್ನ್ವಾಲ್ 800ಕ್ಕೂ ಹೆಚ್ಚು ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.

2024ರಲ್ಲಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅವರು, ಇದೀಗ ಅವರು ಕೇವಲ 19 ಪಂದ್ಯಗಳಿಂದ 102 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಮಾತ್ರವಲ್ಲ ಟಿ20 ಕ್ರಿಕೆಟ್ನಲ್ಲಿ ವೇಗವಾಗಿ 100 ಸಿಕ್ಸರ್ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಕಡಿಮೆ ಎಸೆತಳಿಗೆ 100 ಸಿಕ್ಸರ್ ಸಿಡಿಸಿದ ಬ್ಯಾಟರ್ಗಳು

514 - ವೈಭವ್ ಸೂರ್ಯವಂಶಿ (ಭಾರತ)

813 - ಕರಣ್ಬೀರ್ ಸಿಂಗ್ (ಆಸ್ಟ್ರಿಯಾ)

843 - ಕಿರನ್ ಪೊಲಾರ್ಡ್ (ವೆಸ್ಟ್ ಇಂಡೀಸ್)

845 - ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್)

850 - ಸೀಕ್ಕುಗೆ ಪ್ರಸನ್ನ (ಶ್ರೀಲಂಕಾ)

850 - ರಖೀಮ್ ಕಾರ್ನ್ವಾಲ್ (ವೆಸ್ಟ್ ಇಂಡೀಸ್)

IPL 2026 ರಲ್ಲಿ ಮಿಂಚುತ್ತಿರುವ ಸೂರ್ಯವಂಶಿ

ಟೈಟಾನ್ಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ಸೂರ್ಯವಂಶಿ ಮತ್ತೊಮ್ಮೆ ರಾಯಲ್ಸ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಸಿರಾಜ್ ಮತ್ತು ಕಗಿಸೊ ರಬಾಡ ವಿರುದ್ಧ ಕೂಡ ಅವರು ಮೇಲುಗೈ ಸಾಧಿಸಿದ್ದಾರೆ.

2026ರ ಐಪಿಎಲ್ನಲ್ಲಿ ಸೂರ್ಯವಂಶಿ ಅವರು ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರು ಆಡಿರುವ 11 ಪಂದ್ಯಗಳಿಂದ 40ರ ಸರಾಸರಿಯಲ್ಲಿ 1 ಶತಕ, 2 ಅರ್ಧಶತಕ ಸಹಿತ 440 ರನ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.