ಗುವಾಹಟಿ: ‘ ಮೂರು ದಿನಗಳ ಹಿಂದೆ ನನ್ನ ಜನ್ಮದಿನ ಇತ್ತು. ಆದರೆ ಎಲ್ಲರೂ ನನ್ನ ಮುಖಕ್ಕೆ ಕೇಕ್ ಬಳಿಯುವುದನ್ನು ತಪ್ಪಿಸಿಕೊಳ್ಳಲು ಅಂದು ಬೇಗ ಮಲಗಿಬಿಟ್ಟೆ. ಕೇಕ್ ಕತ್ತರಿಸಿರಲಿಲ್ಲ’–

ರಾಜಸ್ಥಾನ ರಾಯಲ್ಸ್ ತಂಡದ ‘ಚಿನಕುರುಳಿ’ ವೈಭವ್ ಸೂರ್ಯವಂಶಿ ಸೋಮವಾರ ಐಪಿಎಲ್ ಪಂದ್ಯದ ನಂತರ ತಮ್ಮ ಸಂದರ್ಶನದಲ್ಲಿ ಹೇಳಿದ್ದ ಮಾತುಗಳಿವು. ಮಾರ್ಚ್ 27ರಂದು ಅವರು ಹದಿನೈದನೇ ವಸಂತ ಪೂರೈಸಿದರು. ಮೂರು ದಿನಗಳ ನಂತರ ಬರ್ಸಾಪರ ಕ್ರೀಡಾಂಗಣದಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಹೊಡೆಯುವ ಮೂಲಕ ಜನ್ಮದಿನವನ್ನು ತಡವಾಗಿಯಾದರೂ ಭರ್ಜರಿಯಾಗಿ ಆಚರಿಸಿಕೊಂಡರು.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಡ್ಡಿದ್ದ 128 ರನ್ಗಳ ಅಲ್ಪಮೊತ್ತದ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ತಂಡವು ಕೇವಲ 12.1 ಓವರ್ಗಳಲ್ಲಿ ಜಯಭೇರಿ ಬಾರಿಸಿತು. ಯಾವುದೇ ಧಾವಂತದ ಆಟದ ಅಗತ್ಯವಿರಲಿಲ್ಲ. ರಾಯಲ್ಸ್ ತಂಡದ ಬ್ಯಾಟಿಂಗ್ ಪಡೆಗೆ ಇದು ಸುಲಭವದ ಮೊತ್ತವೂ ಆಗಿತ್ತು. ಆದರೂ ವೈಭವ್ ಮಾತ್ರ ತಮ್ಮ ಎಂದಿನ ಸಹಜ ಶೈಲಿಯಲ್ಲಿಯೇ ಬೀಸಾಟವಾಡಿದರು.

‘ಪವರ್ಪ್ಲೇನಲ್ಲಿ ಸಾಧ್ಯವಾದಷ್ಟೂ ರನ್ಗಳನ್ನು ಗಳಿಸುವುದು ನಮ್ಮ ಯೋಜನೆಯಾಗಿತ್ತು. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆವು. ಆರಂಭದಲ್ಲಿ ಪಿಚ್ ಸ್ವಲ್ಪ ಮಟ್ಟಿಗೆ ಜಿಗುಟುತನ ತೋರಿತ್ತು. ಆದರೆ ಚೆಂಡು ಹಳತಾದಂತೆ ಬ್ಯಾಟಿಂಗ್ ಸುಲಭವಾಯಿತು’ ಎಂದು ವೈಭವ್ ವಿವರಿಸಿದರು.

‘ರಕ್ಷಣಾತ್ಮಕವಾಗಿ ಆಡಬೇಕೆಂಬ ಯೋಚನೆ ನನಗಿತ್ತು. ಆದರೆ, ಅಲ್ಪಮೊತ್ತದ ಗುರಿಯನ್ನು ಬೆನ್ನಟ್ಟುವಾಗ ಪವರ್ಪ್ಲೇನಲ್ಲಿ ಉತ್ತಮವಾಗಿ ಆಡುವುದು ಮುಖ್ಯವಾಗುತ್ತದೆ. ಆ ಹಂತದಲ್ಲಿ ಹೆಚ್ಚು ರನ್ಗಳ ಅಡಿಪಾಯ ಹಾಕಿದರೆ ಮುಂದೆ ಸುಲಭ. ಆ ಹಂತದಲ್ಲಿ ಬೌಲರ್ಗಳು ಮೇಲುಗೈ ಸಾಧಿಸಿದರೆ ಬ್ಯಾಟಿಂಗ್ ಬಳಗಕ್ಕೆ ಕಷ್ಟವಾಗುತ್ತದೆ’ ಎಂದು ಬಿಹಾರದ ವೈಭವ್ ವಿಶ್ಲೇಷಿಸಿದರು.

‘ಆರಂಭಿಕ ಜೊತೆಗಾರ (ಯಶಸ್ವಿ ಜೈಸ್ವಾಲ್ ) ಪ್ರತಿಯೊಂದು ಎಸೆತದ ನಂತರವೂ ನನ್ನೊಂದಿಗೆ ಮಾತನಾಡುತ್ತಿದ್ದರು. ಯಾವಾಗ ಸಿಂಗಲ್ಸ್ ತೆಗೆದುಕೊಳ್ಳಬೇಕು ಎಂಬುದನ್ನು ಹೇಳುತ್ತಿದ್ದರು. ಅದರಿಂದಾಗಿ ಅವರು ನನಗೆ ಬ್ಯಾಟಿಂಗ್ ಮಾಡಲು ಅವಕಾಶಗಳನ್ನು ಕೊಡುತ್ತಿದ್ದರು. ಉತ್ತಮ ಹೊಡೆತಗಳ ಆಯ್ಕೆ ಮಾಡಿಕೊಳ್ಳಲು ಹುರಿದುಂಬಿಸುತ್ತಿದ್ದರು’ ಎಂದರು.

ವೈಭವ್ ಅವರಿಗೆ ಇದು ಎರಡನೇ ಐಪಿಎಲ್ ಆವೃತ್ತಿಯಾಗಿದೆ. ಹೋದ ವರ್ಷ ಅವರು ಒಂದು ಶತಕ ಮತ್ತು ಅರ್ಧಶತಕ ಹೊಡೆದಿದ್ದರು.

ರಾಜಸ್ಥಾನ ರಾಯಲ್ಸ್ ತಂಡವು ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಂದ್ರೆ ಬರ್ಗರ್ (26ಕ್ಕೆ2) ಅವರ ಪರಿಣಾಮಕಾರಿ ದಾಳಿಯಿಂದಾಗಿ ಚೆನ್ನೈ ತಂಡವು 19.4 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.