ಮುಲ್ಲನಪುರ: ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್ನಲ್ಲಿ 700 ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ.

ಮಹಾರಾಜ ಯಾದವೀಂದ್ರಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವ ಕ್ವಾಲಿಫಯರ್–2 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು 20 ರನ್ ಗಳಿಸಿದ್ದ ವೇಳೆ ಅವರು ಈ ಸಾಧನೆ ಮಾಡಿದರು. ಇದರೊಂದಿಗೆ, ರಾಷ್ಟ್ರೀಯ ತಂಡದ ಪರ ಆಡದ ಆಟಗಾರರ ಪೈಕಿ ಐಪಿಎಲ್ನ ಒಂದೇ ಆವೃತ್ತಿಯಲ್ಲಿ 700+ ರನ್ ಕಲೆಹಾಕಿದ ಮೊದಲ ಆಟಗಾರ ಎಂಬ ಶ್ರೇಯಕ್ಕೂ ಭಾಜನರಾಗಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಐಪಿಎಲ್ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟರ್ ಎನಿಸಿದ್ದರು ವೈಭವ್. ಆಸ್ಟ್ರೇಲಿಯಾದ ಶಾನ್ ಮಾರ್ಷ್ ಹಾಗೂ ರಾಯಲ್ಸ್ ತಂಡದಲ್ಲೇ ಆಡುತ್ತಿರುವ ಯಶಸ್ವಿ ಜೈಸ್ವಾಲ್ ಉಳಿದ ಇಬ್ಬರು. ಮಾರ್ಷ್, ಐಪಿಎಲ್ನ ಉದ್ಘಾಟನಾ ಆವೃತ್ತಿಯಲ್ಲಿ (2008ರಲ್ಲಿ) 11 ಪಂದ್ಯಗಳಿಂದ 616 ರನ್ ಮತ್ತು ಜೈಸ್ವಾಲ್, 2023ರಲ್ಲಿ 626 ರನ್ ಕಲೆಹಾಕಿದ್ದರು.

ರಾಯಲ್ಸ್ ನಾಯಕ ರಿಯಾನ್ ಪರಾಗ್ (573) ಮತ್ತು ಪಂಜಾಬ್ ಕಿಂಗ್ಸ್ ತಂಡದ ಪ್ರಭಸಿಮ್ರನ್ ಸಿಂಗ್ (549) ಅವರು ಐದು ನೂರಕ್ಕಿಂತ ಹೆಚ್ಚು ರನ್ ಗಳಿಸಿದ ಅನ್ಕ್ಯಾಪ್ಡ್ ಪ್ಲೇಯರ್ಸ್ ಲಿಸ್ಟ್ನಲ್ಲಿದ್ದಾರೆ.

ಕ್ವಾಲಿಫಯರ್–2 ಪಂದ್ಯದಲ್ಲಿ ಅರ್ಧಶತಕ
ಪ್ರಮುಖ ಬ್ಯಾಟರ್ಗಳ ವೈಫಲ್ಯದ ನಡುವೆಯೂ ಛಲ ಬಿಡದೆ ಆಡಿದ ವೈಭವ್ ಸೂರ್ಯವಂಶಿ, ಕೇವಲ 4 ರನ್ ಅಂತರದಿಂದ ಶತಕ ತಪ್ಪಿಸಿಕೊಂಡರು.

47 ಎಸೆತಗಳನ್ನು ಎದುರಿಸಿದ ಅವರು, 8 ಬೌಂಡರಿ ಮತ್ತು 7 ಸಿಕ್ಸರ್ ಸಹಿತ 96 ರನ್ ಕಲೆಹಾಕಿದರು. ಇದು ಐಪಿಎಲ್ನಲ್ಲಿ ವೈಭವ್ಗೆ 6ನೇ ಅರ್ಧಶತಕ.

ಅವರ ಆಟದ ನೆರವಿನಿಂದ ರಾಜಸ್ಥಾನ ತಂಡ ನಿಗದಿತ 20 ಓವರ್ಗಳ್ಲಲಿ 6 ವಿಕೆಟ್ಗೆ 214 ರನ್ ಕಲೆಹಾಕಿದೆ.

ಎಲಿಮಿನೇಟರ್ ಪಂದ್ಯದಲ್ಲೂ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ವೈಭವ್, ಕೇವಲ 29 ಎಸೆತಗಳಲ್ಲಿ 97 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಈವರೆಗೆ ಆಡಿರುವ 15 ಪಂದ್ಯಗಳಲ್ಲಿ 48.50ರ ಸರಾಸರಿ, 237ರ ಸ್ಟ್ರೈಕ್ರೇಟ್ನಲ್ಲಿ 776 ರನ್ ಕಲೆಹಾಕಿದ್ದಾರೆ. ಆರೆಂಜ್ ಕ್ಯಾಪ್ ರೇಸ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.