ಗುವಾಹಟಿ: ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ (78;26ಎ) ಮತ್ತು ವಿಕೆಟ್ಕೀಪರ್ ಧ್ರುವ ಜುರೇಲ್ (ಔಟಾಗದೇ 81;43ಎ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ನಲ್ಲಿ ಸತತ ನಾಲ್ಕನೇ ಜಯ ದಾಖಲಿಸಿತು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಸೋಲು ಎದುರಾಯಿತು.

ಬರ್ಸಾಪರ ಕ್ರೀಡಾಂಗಣದಲ್ಲಿ ಶುಕ್ರವಾರ ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡವು ಫೀಲ್ಡಿಂಗ್ ಆಯ್ದು ಕೊಂಡಿತು. ನಾಯಕ ರಜತ್ ಪಾಟೀದಾರ್ ಅವರ ಅರ್ಧಶತಕದ ನೆರವಿನಿಂದ ಆರ್ಸಿಬಿ ತಂಡವು 8 ವಿಕೆಟ್ಗೆ 201 ರನ್ಗಳ ಸವಾಲಿನ ಮೊತ್ತ ಗಳಿಸಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು ಯಶಸ್ವಿ ಜೈಸ್ವಾಲ್ (13) ಅವರನ್ನು ಎರಡನೇ ಓವರ್ನಲ್ಲೇ ಕಳೆದುಕೊಂಡಿತು. ಆದರೆ, 15ರ ಪೋರ ಸೂರ್ಯವಂಶಿ ಎಂದಿನಂತೆ ಬೀಸಾಟ ಆರಂಭಿಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ ಇನಿಂಗ್ಸ್ನಲ್ಲಿ ಎಂಟು ಬೌಂಡರಿ ಮತ್ತು ಏಳು ಭರ್ಜರಿ ಸಿಕ್ಸರ್ ಒಳಗೊಂಡಿದ್ದವು. ಅವರು 300ರ ಸ್ಟ್ರೈಕ್ರೇಟ್ನಲ್ಲಿ ರನ್ ಬಾಚಿದರು.

ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್ ಓವರ್ಗಳಲ್ಲೂ ನಿರಾಯಾಸವಾಗಿ ಸಿಕ್ಸರ್ ಬಾರಿಸಿದ ಸೂರ್ಯವಂಶಿ, ಜುರೇಲ್ ಅವರೊಂದಿಗೆ ಎರಡನೇ ವಿಕೆಟ್ಗೆ ಬಿರುಸಿನ 108 (37ಎ) ಸೇರಿಸಿದ್ದು, ಪಂದ್ಯಕ್ಕೆ ತಿರುವು ನೀಡಿತು. ಕೃಣಾಲ್ ಪಾಂಡ್ಯ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಸೂರ್ಯವಂಶಿ ನಿರ್ಗಮಿಸಿದರು. ಅವರ ಬೆನ್ನಲ್ಲೇ ಶಿಮ್ರಾನ್ ಹೆಟ್ಮೆಯರ್ ಮತ್ತು ನಾಯಕ ರಿಯಾನ್ ಪರಾಗ್ ಔಟಾದಾಗ ಆರ್ಸಿಬಿ ಪಾಳಯದಲ್ಲಿ ಸಂಭ್ರಮ ಮನೆಮಾಡಿತು. ಆದರೆ, ಅದು ಹೆಚ್ಚು ಹೊತ್ತು ಇರಲಿಲ್ಲ.

ಈ ಹಂತದಲ್ಲಿ ಜುರೇಲ್ ಮತ್ತು ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜ (ಔಟಾಗದೇ 24) ಎಚ್ಚರಿಕೆಯ ಆಟವಾಡಿದರು. ಅವರಿಬ್ಬರು ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 68 ರನ್ (50ಎ) ಗಳಿಸಿ ತಂಡವನ್ನು ದಡ ಸೇರಿಸಿದರು. ಮೂರನೇ ಕ್ರಮಾಂಕದಲ್ಲಿ ಜುರೇಲ್ ಸೊಗಸಾಗಿ ಬ್ಯಾಟಿಂಗ್ ನಡೆಸಿದರು.ಅವರ ಇನಿಂಗ್ಸ್ನಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್ ಒಳಗೊಂಡಿದ್ದವು. ತಂಡವು 12 ಎಸೆತ ಬಾಕಿ ಇರುವಂತೆ 4 ವಿಕೆಟ್ಗೆ 202 ರನ್ ಗಳಿಸಿ 6 ವಿಕೆಟ್ಗಳ ಜಯ ಸಾಧಿಸಿತು.

ರಜತ್ ಆಸರೆ: ಇದಕ್ಕೂ ಮೊದಲು ಫಿಲ್ ಸಾಲ್ಟ್ ಎದುರಿಸಿದ ಮೊದಲ ಎಸೆತದಲ್ಲೇ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತರು. ಆದರೆ, ದೇವದತ್ತ ಪಡಿಕ್ಕಲ್ (14) ಮತ್ತು ವಿರಾಟ್ ಕೊಹ್ಲಿ (32) 16 ಎಸೆತಗಳಲ್ಲಿ 45 ರನ್ ಸೇರಿಸಿದರು. ಈ ಹಂತದಲ್ಲಿ ಹೆಟ್ಮೆಯರ್ ಹಿಡಿದ ಉತ್ತಮ ಕ್ಯಾಚಿಗೆ ಪಡಿಕ್ಕಲ್ ನಿರ್ಗಮಿಸಿದರು. ಇದೂ ಸೇರಿ ಹೆಟ್ಮೆಯರ್ ಡೀಪ್ನಲ್ಲಿ ಮೂರು ಕ್ಯಾಚ್ಗಳನ್ನು ಹಿಡಿದರು.

ಬಿಷ್ಣೋಯಿ ಮೊದಲ ಓವರಿನಲ್ಲೇ ವಿರಾಟ್ ಕೊಹ್ಲಿ ಬೌಲ್ಡ್ ಆದಾಗ ಆರ್ಸಿಬಿ ವೇಗಕ್ಕೆ ಕಡಿವಾಣಬಿದ್ದಿತು. ಪಾಂಡ್ಯ ಮತ್ತು ಜಿತೇಶ್ ಶರ್ಮಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಒಂದೆಡೆ ವಿಕೆಟ್ಗಳು ಉರುಳಿದರೂ, ಪಾಟೀದಾರ್ ಹೆಗಲು ನೀಡಿದರು.

ಪಾಟೀದಾರ್ ನಿರ್ಗಮಿಸಿದಾಗ ತಂಡದ ಮೊತ್ತ 166. ಆದರೆ, ‘ಇಂಪ್ಯಾಕ್ಟ್’ ಆಟಗಾರ ವೆಂಕಟೇಶ್ ಅಯ್ಯರ್ (29;15ಎ) ತಂಡದ ಮೊತ್ತವನ್ನು ದ್ವಿಶತಕದ ಗಡಿ ದಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.