ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

10 ಸಿಕ್ಸರ್ 7 ಬೌಂಡರಿ

ತಮ್ಮ ಎಂದಿನ ಆಟಕ್ಕೆ ವಿರುದ್ಧವಾಗಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ ವೈಭವ್ ಸೂರ್ಯವಂಶಿ, ನಂತರ ಲಖನೌ ಬೌಲರ್ಗಳ ಮೇಲೆ ಸವಾರಿ ಮಾಡಿದರು. ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ತಲುಪಲು ಲಖನೌ ವಿರುದ್ಧದ ಪಂದ್ಯ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 244 ಸ್ಟ್ರೈಕ್ರೇಟ್ನಲ್ಲಿ 93 ರನ್ ಸಿಡಿಸಿ ಮಿಂಚಿದರು. ಆ ಮೂಲಕ 7 ರನ್ಗಳಿಂದ ಶತಕ ವಂಚಿತರಾದರು.

50 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ

ಪಂದ್ಯಕ್ಕೂ ಮೊದಲು 43 ಸಿಕ್ಸರ್ ಸಿಡಿಸಿದ್ದ ವೈಭವ್ ಸೂರ್ಯವಂಶಿ ನಿನ್ನೆಯ ಪಂದ್ಯದಲ್ಲಿ 10 ಸಿಕ್ಸರ್ ಸಿಡಿಸಿ ಮಿಂಚಿದರು. ಆ ಮೂಲಕ ಐಪಿಎಲ್ ಆವೃತ್ತಿ ಒಂದರಲ್ಲಿ 50 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಕಳೆದ ವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಸೀಸನ್ 42 ಸಿಕ್ಸರ್ ಸಿಡಿಸಿ, ಅತ್ಯಧಿಕ ಸಿಕ್ಸರ್ ಸಿಡಿಸಿದ್ದ ಭಾರತೀಯ ಆಟಗಾರ ಎಂಬ ದಾಖಲೆ ಹೊಂದಿದ್ದ ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದರು.

ಅತ್ಯಧಿಕ ಸ್ಟ್ರೈಕ್ರೇಟ್ನಲ್ಲಿ ರಸೆಲ್ ಮೀರಿಸಿದ ವೈಭವ್

ಸ್ಫೋಟಕ ಬ್ಯಾಟಿಂಗ್ ಹೆಸರುವಾಸಿಯಾಗಿರುವ ಕೆಕೆಆರ್ ತಂಡದ ಮಾಜಿ ಆಟಗಾರ, ವೆಸ್ಟ್ ಇಂಡೀಸ್ನ ಅಂಡ್ರೆ ರಸೆಲ್ ಅವರು 2019ರಲ್ಲಿ 500ಕ್ಕೂ ಅಧಿಕ ರನ್ಗಳನ್ನು 205ರ ಸ್ಟ್ರೈಕ್ರೇಟ್ನಲ್ಲಿ ಬಾರಿಸಿದ್ದರು. ಅದು ಐಪಿಎಲ್ ಸೀಸನ್ ಒಂದರಲ್ಲಿ ಆಟಗಾರನೊಬ್ಬ ಅತ್ಯಧಿಕ ಸ್ಟ್ರೈಕ್ರೇಟ್ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ದಾಖಲೆಯಾಗಿತ್ತು. ಇದೀಗ ವೈಭವ್ ಸೂರ್ಯವಂಶಿ ಅವರು 579 ರನ್ಗಳನ್ನು 237ರ ಸ್ಟ್ರೈಕ್ರೇಟ್ನಲ್ಲಿ ಬಾರಿಸುವ ಮೂಲಕ ಸೀಸನ್ ಒಂದರಲ್ಲಿ ಅತ್ಯಧಿಕ ಸ್ಟ್ರೈಕ್ರೇಟ್ನಲ್ಲಿ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪವರ್ಪ್ಲೇನಲ್ಲಿ ಅತ್ಯಧಿಕ ರನ್

ಇಂಡಿಯನ್ ಪ್ರೀಮಿಯರ್ ಲೀಗ್ನ ಪವರ್ಪ್ಲೇ ಒಂದರಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವೈಭವ್ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 2016ರಲ್ಲಿ 467 ರನ್ ಕಲೆಹಾಕಿದ್ದ ಡೇವಿಡ್ ವಾರ್ನರ್ ಅಗ್ರಸ್ಥಾನದಲ್ಲಿದ್ದಾರೆ. 2024ರಲ್ಲಿ 402 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿರುವ ವೈಭವ್ ಸೂರ್ಯವಂಶಿ ಎರಡನೇ ಸ್ಥಾನಕ್ಕೇರಿದ್ದಾರೆ. ವೈಭವ್ ಸದ್ಯ ಪವರ್ಪ್ಲೇ ಒಂದರಲ್ಲೆ 426 ರನ್ ಕಲೆಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.