ಗುವಾಹಟಿ : ವಿಶ್ವದ ಅಗ್ರಗಣ್ಯ ಬೌಲರ್ ಜಸ್ಪ್ರೀತ್ ಬೂಮ್ರಾ. ಮಂಗಳವಾರ ಬರ್ಸಾಪರ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುವ 15ರ ಪೋರ ವೈಭವ್ ಸೂರ್ಯವಂಶಿ ಅವರು ಮುಂಬೈ ಇಂಡಿಯನ್ಸ್ ತಂಡದ ಬೂಮ್ರಾ ಅವರನ್ನು ಯಾವ ರೀತಿ ಎದುರಿಸುತ್ತಾರೆ ಎಂಬ ಕುತೂಹಲ ಮೂಡಿತ್ತು.

ಏಕೆಂದರೆ; ಕಳೆದ ಎರಡು ವರ್ಷಗಳಿಂದ ವೈಭವ್ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದ್ದರಿಂದ ಇವರಿಬ್ಬರ ಮುಖಾಮುಖಿಯು ಪಂದ್ಯಕ್ಕಿಂತ ಮೊದಲು ಬಹಳಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದರಲ್ಲಿ ವೈಭವ್ ಕೈಮೇಲಾಯಿತು!

ಹೌದು; ಇನಿಂಗ್ಸ್ನ ಎರಡನೇ ಓವರ್ನಲ್ಲಿ ಬೂಮ್ರಾ ಬೌಲಿಂಗ್ ಆರಂಭಿಸಿದರು. ಪ್ರತಿ ಗಂಟೆಗೆ 131 ಕಿ.ಮೀ ವೇಗದಲ್ಲಿ ಮಧ್ಯದ ಹಾಗೂ ಲೆಗ್ ಸ್ಟಿಕ್ ಗುರಿಯಾಗಿಟ್ಟುಕೊಂಡು ಬಂದ ಮೊದಲ ಎಸೆತವನ್ನು ವೈಭವ್ ಅವರು ಮಿಡ್ ಆನ್ ಮೇಲೆ ಸಿಕ್ಸರ್ಗೆತ್ತಿದರು. ನಾಲ್ಕನೇ ಎಸೆತಕ್ಕೂ ಪ್ರೇಕ್ಷಕರ ಗ್ಯಾಲರಿಯತ್ತ ದಾರಿ ತೋರಿಸಿದರು. ಅವರ ಈ ಆಟವು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚೊತ್ತಿತು. ನಾನ್ಸ್ಟ್ರೈಕರ್ ಬದಿಯಲ್ಲಿದ್ದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ಪ್ರಭಾವಿತರಾಗಿದ್ದಾರೆ.

‘ಅವರ (ಬೂಮ್ರಾ) ಮೊದಲ ಎಸೆತವನ್ನೇ ವೈಭವ್ ಸಿಕ್ಸರ್ ಹೊಡೆದರು. ಆಗ ನಿನ್ನ ನೈಜ ಹೊಡೆತಗಳನ್ನು ಪ್ರಯೋಗಿಸುತ್ತಿರು ಎಂದು ಹುರಿದುಂಬಿಸಿದೆ. ಬೂಮ್ರಾ ಅವರು ದಿಗ್ಗಜ ಬೌಲರ್. ಅವರ ಎಸೆತಗಳಲ್ಲಿಯೂ ರನ್ಗಳನ್ನು ಗಳಿಸಿದಾಗ ವೈಭವ್ ಅವರಿಗಷ್ಟೆ ಅಲ್ಲ, ಉಳಿದ ಬ್ಯಾಟರ್ಗಳ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಬೂಮ್ರಾ ಅವರ ಎಸೆತಗಳನ್ನು ಉತ್ತಮವಾಗಿ ಆಡಿದ ನಂತರ ಉಳಿದೆಲ್ಲ ಬೌಲರ್ಗಳ ಎಸೆತಗಳು ಸುಲಭವವೆನಿಸಿಬಿಡುತ್ತವೆ’ ಎಂದು ಯಶಸ್ವಿ ಸುದ್ದಿಗಾರರಿಗೆ ಹೇಳಿದರು.

ಯಶಸ್ವಿ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳಿದ್ದ ಅಜೇಯ 77 ರನ್ ಗಳಿಸಿದರು. ಕೇವಲ 32 ಎಸೆತಗಳನ್ನು ಆಡಿದರು. ವೈಭವ್ ಅವರು 14 ಎಸೆತಗಳಲ್ಲಿ 39 ರನ್ ಹೊಡೆದರು. ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ನಿಗದಿ ಪಡಿಸಲಾಗಿದ್ದ 11 ಓವರ್ಗಳಲ್ಲಿ ರಾಜಸ್ಥಾನ ತಂಡವು 3 ವಿಕೆಟ್ಗಳಿಗೆ 150 ರನ್ ಗಳಿಸಿತು. ಅದಕ್ಕುತ್ತರವಾಗಿ ಮುಂಬೈ ತಂಡವು 11 ಓವರ್ಗಳಲ್ಲಿ 9 ವಿಕೆಟ್ಗಳಿಗೆ 123 ರನ್ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.