ಅಹಮದಾಬಾದ್: ಕಗಿಸೊ ರಬಾಡ, ಪ್ರಸಿದ್ಧಕೃಷ್ಣ ಮತ್ತು ಮೊಹಮದ್ ಸಿರಾಜ್ ಅವರನ್ನು ಒಳಗೊಂಡ ಗುಜರಾತ್ ಟೈಟನ್ಸ್ ವೇಗದ ದಾಳಿ ಪ್ರಬಲವಾಗಿರುವಂತೆ ಕಾಣುತ್ತಿದ್ದರೂ, ಬ್ಯಾಟರ್ಸ್ನೇಹಿ ಪಿಚ್ನಲ್ಲಿ ಅವರಿಗೆ ‘ಅಚ್ಚರಿಯ ಬಾಲಕ’ ವೈಭವ ಸೂರ್ಯವಂಶಿ ಅವರನ್ನು ಕಟ್ಟಿಹಾಕುವ ಸವಾಲು ಇದೆ. ಶನಿವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮೇಲ್ನೋಟಕ್ಕೆ ರಾಜಸ್ಥಾನ ರಾಯಲ್ಸ್ ಫೇವರಿಟ್ ಆಗಿ ಕಾಣುತ್ತಿದೆ.

15 ವರ್ಷದ ಈ ಆಕ್ರಮಣಕಾರಿ ಆಟಗಾರ, ತನ್ನ ಎರಡನೇ ಐಪಿಎಲ್ ಋತುವಿನ ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರಿಸಿ 15 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು. ಆದರೆ ಆ ಪಂದ್ಯದಲ್ಲಿ ಗುರಿ (127) ಸಣ್ಣದಿದ್ದು ಎದುರಾಳಿ ದಾಳಿಯೂ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅವರಿಗೆ ಎದುರಾಗಲಿರುವ ಮೂವರು ವೇಗಿಗಳು (ರಬಾಡ, ಸಿರಾಜ್, ಪ್ರಸಿದ್ಧ) ಅಂತರರಾಷ್ಟ್ರೀಯ ಬೌಲರ್ಗಳು. ಅವರು ಬಿಹಾರದ ಹುಡುಗನನ್ನು ಸತ್ವಪರೀಕ್ಷೆಗೆ ಒಳಪಡಿಸುವುದು ಖಚಿತ.

ಈ ಹಿಂದಿನ ಪಂದ್ಯದಲ್ಲಿ ಟೈಟನ್ಸ್ ನಾಯಕ ಶುಭಮನ್ ಗಿಲ್ ಅವರ ನಿರ್ಧಾರಗಳು ಅತಾರ್ಕಿಕವಾಗಿದ್ದವು. ಅವರು ಸಿರಾಜ್ ಅವರಿಗೆ ಎರಡೇ ಓವರ್ ನೀಡಿದ್ದರು. ಪ್ರಸಿದ್ಧ ಅವರನ್ನು ತಡವಾಗಿ– 12ನೇ ಓವರಿನಲ್ಲಿ ದಾಳಿಗಿಳಿಸಿದ್ದರು.

ರಾಯಲ್ಸ್ನ ಪ್ರಮುಖ ವೇಗಿಗಳಾದ ನಾಂಡ್ರೆ ಬರ್ಗರ್ ಮತ್ತು ಜೋಫ್ರಾ ಆರ್ಚರ್ ಅವರು ಟೈಟನ್ಸ್ನ ಅಗ್ರ ಬ್ಯಾಟರ್ಗಳಾದ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಟರ್ ಅವರನ್ನು ಕಠಿಣ ಪರೀಕ್ಷೆಗೊಡ್ಡುವುದಂತೂ ಖಚಿತ. ಟೈಟನ್ಸ್ ತಂಡದ ಸಮಸ್ಯೆಯೆಂದರೆ ಈ ಮೂವರು ಆಕ್ರಮಣಕಾರಿಯಾಗಿ ಆಡುತ್ತಿಲ್ಲ. ಮೊದಲ ಪಂದ್ಯದಲ್ಲಿ ಇದು ಎದ್ದುಕಂಡಿತ್ತು. ಶಾರೂಕ್ ಖಾನ್, ವಾಷಿಂಗ್ಟನ್ ಸುಂದರ್, ರಾಹುಲ್ ತೇವಾಟಿಯಾ ಕೂಡ ವಿಶ್ವಾಸದಿಂದ ಆಡಿಲ್ಲ.

ರಾಯಲ್ಸ್ ತಂಡವು ನಾಯಕ ರಿಯಾನ್ ಪರಾಗ್, ಭಾರತ ತಂಡದ ಆಟಗಾರರಾದ ರವೀಂದ್ರ ಜಡೇಜ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೇಲ್ ಅವರನ್ನು ಹೊಂದಿದ್ದು ಬ್ಯಾಟಿಂಗ್ ಸರದಿ ಪ್ರಬಲವಾಗಿದೆ. ಆದರೆ ವೈಭವ್ ಅವರಿಂದ ತಂಡ ಬಿರುಸಿನ ಆರಂಭ ನಿರೀಕ್ಷಿಸುತ್ತಿದೆ.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.