ಕೋಲ್ಕತ್ತ: ಇಲ್ಲಿ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯ 28ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ಆವೃತಿಯ ಮೊದಲ ಗೆಲುವು ಸಾಧಿಸಿದೆ. ಗೆಲುವಿನ ಬಳಿಕ ಕೆಕೆಆರ್ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿನ ಬಾವುಕ ಕ್ಷಣಗಳನ್ನು ವರುಣ್ ಚಕ್ರವರ್ತಿ ಹಂಚಿಕೊಂಡಿದ್ದಾರೆ.

2026ರ ಐಪಿಎಲ್ ಆವೃತಿಯಲ್ಲಿ ಕೆಕೆಆರ್ ತಂಡವು ಸತತ 5 ಸೋಲುಗಳನ್ನು ಅನುಭವಿಸಿತ್ತು. ನೆನ್ನೆ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಸೋಲುಗಳಿಗೆ ಕಡಿವಾಣ ಹಾಕಿದೆ. ತಂಡದ ಪ್ರಮುಖ ಬೌಲರ್ ವರುಣ್ ಚಕ್ರವರ್ತಿ ಆವೃತಿಯ ಮೊದಲ ಗೆಲುವಿನ ಕುರಿತು ಮಾತನಾಡಿದ್ದಾರೆ.

‘ಈ ಪಂದ್ಯ ತುಂಬಾ ಮಹತ್ವದ್ದಾಗಿತ್ತು. ಈ ಪಂದ್ಯದ ಬಳಿಕ ಡ್ರೇಸಿಂಗ್ ರೂಮ್ನಲ್ಲಿ ಹಲವು ಆಟಗಾರರು ಕಣ್ಣೀರು ಹಾಕಿದರು. 2024ರಲ್ಲಿ ಟ್ರೋಫಿ ಗೆದ್ದಾಗಲೂ ಇಷ್ಟು ಸಂತೋಷ ಆಗಿರಲಿಲ್ಲ. ಗೆಲುವಿನ ಶ್ರೇಯಸ್ಸು ಕೋಚಿಂಗ್ ಸಿಬ್ಬಂದಿಗೆ ಸಲ್ಲಬೇಕು’ ಎಂದು ಪಂದ್ಯದ ಬಳಿಕ ವರುಣ್ ಹೇಳಿದ್ದಾರೆ.

‘ಈ ಆವೃತಿಯನ್ನು ನಾವು ಗಾಯದಿಂದ ಪ್ರಾರಂಭಿಸಿದೆವು. ತಂಡದ ಪ್ರಮುಖ ಆಟಗಾರರ ಅಲಭ್ಯತೆ ನಮ್ಮ ಸೋಲುಗಳಿಗೆ ಪ್ರಮುಖ ಕಾರಣವಾಯಿತು. ರಾಜಸ್ಥಾನ ವಿರುದ್ಧದ ಗೆಲುವನ್ನು ತಂಡದ ತರಬೇತುದಾರರಿಗೆ, ವಿಶೇಷವಾಗಿ ಅಭಿಷೇಕ್ ನಾಯರ್ ಅವರಿಗೆ ಕ್ರೆಡಿಟ್ ನೀಡಲು ಬಯಸುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ಸಾಕಷ್ಟು ಧೈರ್ಯ ಬೇಕು. ನಾವು ನಿಧಾನವಾಗಿ ಗೆಲುವಿಗೆ ಮರಳುತ್ತಿದ್ದೇವೆ’ ಎಂದಿದ್ದಾರೆ.

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ವರುಣ್ ಚಕ್ರವರ್ತಿ ತಮ್ಮ ಲಯಕ್ಕೆ ಮರಳಿದ್ದು, 3 ಓವರ್ಗಳಲ್ಲಿ ಕೇವಲ 14 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದುಕೊಂಡರು. ಈ ಪ್ರದರ್ಶನಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.