ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್‌ ಟೂರ್ನಿ: ವೆಂಕಟೇಶ್‌, ಕೃತಿಕ್‌ ಶತಕ

7

ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್‌ ಟೂರ್ನಿ: ವೆಂಕಟೇಶ್‌, ಕೃತಿಕ್‌ ಶತಕ

Published:
Updated:

ಬೆಂಗಳೂರು: ಎಂ.ವೆಂಕಟೇಶ್‌ (122; 153ಎ, 10ಬೌಂ, 5ಸಿ) ಮತ್ತು ಕೃತಿಕ್‌ ಕೃಷ್ಣ (ಔಟಾಗದೆ 104; 146ಎ, 10ಬೌಂ, 2ಸಿ) ಅವರ ಶತಕಗಳ ಬಲದಿಂದ ಮೈಸೂರು ವಲಯ ತಂಡ 19 ವರ್ಷದೊಳಗಿನವರ ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 57ರನ್‌ಗಳಿಂದ ಧಾರವಾಡ ವಲಯದ ಎದುರು ಗೆದ್ದಿದೆ.

ಮೊದಲು ಬ್ಯಾಟ್‌ ಮಾಡಿದ ಮೈಸೂರು ವಲಯ 50 ಓವರ್‌ಗಳಲ್ಲಿ 1 ವಿಕೆಟ್‌ಗೆ 242ರನ್‌ ದಾಖಲಿಸಿತು. ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಧಾರವಾಡ ತಂಡಕ್ಕೆ 43 ಓವರ್‌ಗಳಲ್ಲಿ 209ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು. ಈ ತಂಡ 7 ವಿಕೆಟ್‌ಗೆ 151ರನ್‌ಗಳಿಗೆ ಹೋರಾಟ ಮುಗಿಸಿತು.

ಸಂಕ್ಷಿಪ್ತ ಸ್ಕೋರ್‌: ಮೈಸೂರು ವಲಯ: 50 ಓವರ್‌ಗಳಲ್ಲಿ 1 ವಿಕೆಟ್‌ಗೆ 242 (ಎಂ.ವೆಂಕಟೇಶ್‌ 122, ಕೃತಿಕ್‌ ಕೃಷ್ಣ ಔಟಾಗದೆ 104).

ಧಾರವಾಡ ವಲಯ: 43 ಓವರ್‌ಗಳಲ್ಲಿ 7 ವಿಕೆಟ್‌ಗೆ 151 (ರವಿಚಂದ್ರ ಉಕ್ಕಲಿ 54, ಪಾರ್ಥ ‍ಪಾಟೀಲ 20, ಎ.ಸಿ.ರೋಹಿತ್‌ ಕುಮಾರ್‌ 31; ವಿ.ಉತ್ತಮ್‌ ಗೌಡ 27ಕ್ಕೆ2).

ಫಲಿತಾಂಶ: ಮೈಸೂರು ವಲಯಕ್ಕೆ 57ರನ್‌ ಗೆಲುವು.

ಮಂಗಳೂರು ವಲಯ: 45.1 ಓವರ್‌ಗಳಲ್ಲಿ 148 (ಹರ್ಷಿತ್‌ ಪೂಜಾರಿ 20, ಪ್ರತೀಕ್‌ ರಾವ್‌ 32, ರಾಹುಲ್‌ ಜೆ.ಶೆಟ್ಟಿ 24; ಪ್ರಣವ್‌ ಬೆಳ್ಳೂರು 31ಕ್ಕೆ2, ಎಚ್‌.ಪಿ.ಅಭಿಷೇಕ್‌ 15ಕ್ಕೆ2, ವಿ.ಎನ್.ಸಂಜಯ್‌ 25ಕ್ಕೆ2, ಜಿಯಾವುರ್‌ ರಹಮಾನ್‌ 22ಕ್ಕೆ2).

ತುಮಕೂರು ವಲಯ: 46.5 ಓವರ್‌ಗಳಲ್ಲಿ 8 ವಿಕೆಟ್‌ಗೆ 149 (ವಿ.ಎನ್‌.ಸಂಜಯ್‌ ಔಟಾಗದೆ 77; ಸ್ಪರ್ಶ್‌ ಅನೂಪ್‌ ಹೆಗ್ಡೆ 22ಕ್ಕೆ2, ಬಿ.ಹನುಮಂತ 35ಕ್ಕೆ2,ಅಭಿಷೇಕ್‌ ಹರೀಶ್‌ ಶೆಟ್ಟಿ 30ಕ್ಕೆ3).

ಫಲಿತಾಂಶ: ತುಮಕೂರು ವಲಯಕ್ಕೆ 2 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !