ಕ್ರಿಕೆಟ್‌: ವೀನಸ್‌, ಆರ್‌.ವಿ ಶಾಲೆ ಫೈನಲ್‌ಗೆ

7

ಕ್ರಿಕೆಟ್‌: ವೀನಸ್‌, ಆರ್‌.ವಿ ಶಾಲೆ ಫೈನಲ್‌ಗೆ

Published:
Updated:

ಬೆಂಗಳೂರು: ವೀನಸ್ ಇಂಟರ್‌ನ್ಯಾಷನಲ್ ಸ್ಕೂಲ್‌ ಮತ್ತು ಕೋಲಾರದ ಶ್ರೀ ಆರ್‌.ವಿ.ಸ್ಕೂಲ್ ತಂಡಗಳು ಕೆಎಸ್‌ಸಿಎ ಆಶ್ರಯದಲ್ಲಿ ಬಿಟಿಆರ್‌ ಶೀಲ್ಡ್‌ಗಾಗಿ ನಡೆಯುತ್ತಿರುವ 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಫೈನಲ್‌ ಪ್ರವೇಶಿಸಿದವು.

ಕೆ.ಆರ್.ಪುರದ ಎಸ್‌ಡಬ್ಲ್ಯುಆರ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ  ವೀನಸ್ ಶಾಲೆ ಕೆಎಲ್‌ಇ ಸೊಸೈಟಿಯ ಬಿ–72 ಶಾಲೆ ತಂಡವನ್ನು ಎರಡು ವಿಕೆಟ್‌ಗಳಿಂದ ಮಣಿಸಿತು. ಐಟಿಐ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಆರ್‌.ವಿ.ಸ್ಕೂಲ್‌, ಮಾರತ್ತಹಳ್ಳಿ ವಿಬ್‌ಗಯಾರ್ ಶಾಲೆಯನ್ನು ಒಂದು ವಿಕೆಟ್‌ನಿಂದ ಸೋಲಿಸಿತು.

ಸಂಕ್ಷಿಪ್ತ ಸ್ಕೋರು: ಕೆಎಲ್‌ಇ ಸೊಸೈಟಿಯ ಬಿ–72 ಶಾಲೆ: 44 ಓವರ್‌ಗಳಲ್ಲಿ 180 (ಸೂರ್ಯ ಕೆ.ಎಸ್‌50;ಆಯುಷ್‌ 25ಕ್ಕೆ3, ರಘುವೀರ್‌ 41ಕ್ಕೆ3); ವೀನಸ್ ಶಾಲೆ: 42.1 ಓವರ್‌ಗಳಲ್ಲಿ 8ಕ್ಕೆ 181 (ರಘುವೀರ್‌ 39, ಸುನೀಶ್‌ 44; ಪ್ರಥಮ್‌ 42ಕ್ಕೆ2, ರೋಷನ್‌ 29ಕ್ಕೆ3). ಫಲಿತಾಂಶ: ವೀನಸ್ ಶಾಲೆಗೆ 2 ವಿಕೆಟ್‌ಗಳ ಜಯ. ವಿಬ್‌ಗಯಾರ್ ಶಾಲೆ, ಮಾರತ್ತಹಳ್ಳಿ: 50 ಓವರ್‌ಗಳಲ್ಲಿ 158 (ಯಶ್‌ 45; ಮೋನಿಷ್‌ ಕಾರ್ತಿಕ್‌ 28ಕ್ಕೆ2, ಕಿಶನ್‌ 22ಕ್ಕೆ3); ಶ್ರೀ ಆರ್‌ವಿ ಶಾಲೆ ಕೋಲಾರ: 48.2 ಓವರ್‌ಗಳಲ್ಲಿ 9ಕ್ಕೆ 159 (ಗಗನ್ ಗೌಡ 70;ಪಾರ್ಥ 17ಕ್ಕೆ3, ಅಮನ್‌ 20ಕ್ಕೆ2). ಫಲಿತಾಂಶ: ಆರ್‌ವಿ ಶಾಲೆಗೆ 1 ವಿಕೆಟ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !