ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ರಾಜ್ಯ ತಂಡಕ್ಕೆ ಪಾಂಡೆ ನಾಯಕ

Last Updated 21 ಸೆಪ್ಟೆಂಬರ್ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡವನ್ನು ಮನೀಷ್ ಪಾಂಡೆ ಮುನ್ನಡೆಸುವರು. ಕೆ.ಎಲ್. ರಾಹುಲ್ ಅವರು ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ರಾಹುಲ್ ಅವರು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದ್ದರಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಬಹುತೇಕ ಪಂದ್ಯಗಳಿಗೆ ಅವರು ಲಭ್ಯರಾಗಲಿದ್ಧಾರೆ. ಕರ್ನಾಟಕ ತಂಡವು ಆಲೂರು ಕ್ರೀಡಾಂಗಣದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅ. 13ರವರೆಗೆ ಬೆಂಗಳೂರಿನಲ್ಲಿ ಮೊದಲ ಗುಂಪಿನ ಪಂದ್ಯಗಳು ನಡೆಯಲಿವೆ.

ತಂಡ: ಮನೀಷ್ ಪಾಂಡೆ (ಜವಾನ್ಸ್‌ ಕ್ರಿಕೆಟ್ ಕ್ಬಬ್), ಕೆ.ಎಲ್. ರಾಹುಲ್ (ವಲ್ಚರ್ಸ್‌ ಸಿಸಿ), ದೇವದತ್ತ ಪಡಿಕ್ಕಲ್ (ಕೆಂಬ್ರಿಜ್ ಸಿಸಿ), ಕೆ.ವಿ.ಸಿದ್ಧಾರ್ಥ್ (ಕೆನರಾ ಬ್ಯಾಂಕ್/ಸ್ವಸ್ತಿಕ್ ಯೂನಿಯನ್), ಪ್ರವೀಣ ದುಬೆ (ವಲ್ಚರ್ಸ್‌ ಸಿಸಿ), ಪವನ್ ದೇಶಪಾಂಡೆ (ಭಾರತೀಯ ಸ್ಟೇಟ್‌ ಬ್ಯಾಂಕ್‌/ವಲ್ಚರ್ಸ್‌), ಅಭಿಷೇಕ್ ರೆಡ್ಡಿ (ಸ್ವಸ್ತಿಕ್ ಯೂನಿಯನ್), ಕೃಷ್ಣಪ್ಪ ಗೌತಮ್ (ಬ್ಯಾಂಕ್ ಆಫ್ ಬರೋಡ/ಸ್ವಸ್ತಿಕ್ ಯೂನಿಯನ್), ಜೆ. ಸುಚಿತ್ (ವಲ್ಚರ್ಸ್ ಸಿಸಿ), ಅಭಿಮನ್ಯು ಮಿಥುನ್ (ವಲ್ಚರ್ಸ್‌ ಸಿಸಿ), ಪ್ರಸಿದ್ಧ ಎಂ ಕೃಷ್ಣ (ಮೌಂಟ್ ಜಾಯ್ ಸಿಸಿ), ರೋನಿತ್ ಮೋರೆ (ವಲ್ಚರ್ಸ್‌ ಸಿಸಿ), ಶರತ್ ಶ್ರೀನಿವಾಸ್ (ಬೆಂಗಳೂರು ಯುನೈಟೆಡ್ ಸಿಸಿ), ಶ್ರೇಯಸ್ ಗೋಪಾಲ್ (ಸ್ವಸ್ತಿಕ್ ಯೂನಿಯನ್), ವಿ. ಕೌಶಿಕ್ (ಕೇಂದ್ರ ಅಬಕಾರಿ ಸುಂಕ ಇಲಾಖೆ/ಬೆಂಗಳೂರು ಒಕೆಷನಲ್ಸ್‌). ಯರೇ ಕೆ ಗೌಡ (ಕೋಚ್), ಎಸ್‌ ಅರವಿಂದ್ (ಬೌಲಿಂಗ್ ಕೋಚ್/ಭಾರತೀಯ ಸ್ಟೇಟ್ ಬ್ಯಾಂಕ್), ಶಬರೀಶ್ ಪಿ. ಮೋಹನ್ (ಫೀಲ್ಡಿಂಗ್ ಕೋಚ್), ಅನುತೋಷ್ ಪೋಳ (ಮ್ಯಾನೇಜರ್), ಎ. ರಮೇಶ್ ರಾವ್ (ಲಾಗಿಸ್ಟಿಕ್ಸ್‌ ಮ್ಯಾನೇಜರ್), ಜಾಬ ಪ್ರಭು (ಫಿಸಿಯೊ), ರಕ್ಷಿತ್ (ಕಂಡಿಷನಿಂಗ್ ಕೋಚ್), ಸಿ.ಎಂ. ಸೋಮಸುಂದರ್ (ಮಸಾಜ್ ಥೆರಪಿಸ್ಟ್‌), ವಿನೋದ್ (ವಿಡಿಯೊ ಅನಾಲಿಸ್ಟ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT