ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಹಜಾರೆ: ಸಂಭವನೀಯರ ತಂಡದಲ್ಲಿ ರಾಹುಲ್, ಮಯಂಕ್

ವಿಜಯ್‌ ಹಜಾರೆ ಟ್ರೋಫಿ ಟೂರ್ನಿ
Last Updated 11 ಸೆಪ್ಟೆಂಬರ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡದ ಸಂಭವನೀಯ ಆಟಗಾರರ ಪಟ್ಟಿಯನ್ನು ಬುಧವಾರ ಕೆಎಸ್‌ಸಿಎ ಪ್ರಕಟಿಸಿದೆ. ಒಟ್ಟು 25 ಮಂದಿ ಆಟಗಾರರನ್ನು ಇದರಲ್ಲಿದ್ದಾರೆ.

ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಟೂರ್ನಿಯಲ್ಲಿ ಗಮನ ಸೆಳೆದ ಕೆಲವು ಆಟಗಾರರು ಸಂಭವನೀಯರ ಪಟ್ಟಿಯಲ್ಲಿದ್ದಾರೆ. ನಿಹಾಲ್ ಉಳ್ಳಾಲ್, ಪ್ರತೀಕ್ ಜೈನ್, ವೈಶಾಖ ವಿಜಯಕುಮಾರ್, ಪ್ರವೀಣ್ ದುಬೆ ಕೆಪಿಎಲ್‌ನಲ್ಲಿ ಆಡಿದ್ದರು.
ಇದೇ 24ರಿಂದ ಟೂರ್ನಿಯು ಬೆಂಗಳೂರಿನಲ್ಲಿ ಆರಂಭವಾಗಲಿದೆ.

ತಂಡ ಇಂತಿದೆ: ಮನೀಷ್‌ ಪಾಂಡೆ, ಕೆಎಲ್‌ ರಾಹುಲ್‌, ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌, ದೇವದತ್ತ ಪಡಿಕ್ಕಲ್‌, ಪವನ್‌ ದೇಶಪಾಂಡೆ, ಅಭೀಷೇಕ್‌ ರೆಡ್ಡಿ, ಕೆ.ವಿ. ಸಿದ್ಧಾರ್ಥ್, ಕೃಷ್ಣಪ್ಪ ಗೌತಮ್‌, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌, ಪ್ರವೀಣ್‌ ದುಬೆ, ಶರತ್‌ ಬಿ.ಆರ್‌ (ವಿಕೆಟ್‌ ಕೀಪರ್‌), ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ನಿಹಾಲ್‌ ಉಳ್ಳಾಲ್ (ವಿಕೆಟ್‌ ಕೀಪರ್‌), ಅಭಿಮನ್ಯು ಮಿಥುನ್‌, ಪ್ರಸಿದ್ಧ ಎಂ. ಕೃಷ್ಣ, ರೋನಿತ್‌ ಮೋರೆ, ವಿ. ಕೌಶಿಕ್‌, ಪ್ರತೀಕ್‌ ಜೈನ್‌, ಮನೋಜ್‌ ಭಾಂಡಗೆ, ಶುಭಾಂಗ್‌ ಹೆಗಡೆ, ರೋಹನ್‌ ಕದಂ, ಆರ್. ಸಮರ್ಥ್‌, ವೈಶಾಖ ವಿಜಯಕುಮಾರ್‌.

ಸೌರಾಷ್ಟ್ರಕ್ಕೆ ಉನದ್ಕತ್ ನಾಯಕ: ವಿಜಯ್ ಹಜಾರೆ ಟೂರ್ನಿಗೆ ಸೌರಾಷ್ಟ್ರ ತಂಡವನ್ನು ಆಯ್ಕೆ ಮಾಡಲಾಗಿದೆ. ಅನುಭವಿ ಎಡಗೈ ಮಧ್ಯಮವೇಗಿ ಜಯದೇವ್ ಉನದ್ಕತ್ ಅವರು ತಂಡದ ನಾಯಕತ್ವ ವಹಿಸಲಿದ್ದಾರೆ. ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಕೆಲವು ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇದೆ ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT