ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಆಯುಧಪೂಜೆಯ ದಿನ ವಿಜಯದ ಹಂಬಲ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ
Last Updated 6 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಭರ್ಜರಿ ಫಾರ್ಮ್‌ನಲ್ಲಿರುವ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ನಾಲ್ಕು ದಿನಗಳ ವಿಶ್ರಾಂತಿಯ ನಂತರ ಮತ್ತೆ ಕಣಕ್ಕಿಳಿಯಲಿದೆ.

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎ ಗುಂಪಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಕರ್ನಾಟಕವು ಸೋಮವಾರ ಆಂಧ್ರ ತಂಡವನ್ನು ಎದುರಿಸಲಿದೆ. ನಗರದ ಹೊರವಲಯದಲ್ಲಿರುವ ಜಸ್ಟ್‌ ಕ್ರಿಕೆಟ್ ಮೈದಾನದಲ್ಲಿ ಪಂದ್ಯವು ನಡೆಯಲಿದೆ.

ಅಕ್ಟೋಬರ್ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಂಡೆ ಶತಕ ಮತ್ತು ಕೆ.ಎಲ್. ರಾಹುಲ್ ಅರ್ಧಶತಕದ ಬಲದಿಂದ ಆತಿಥೇಯ ತಂಡವು ಛತ್ತೀಸಗಡದ ಎದುರು ಜಯಗಳಿಸಿತ್ತು. ಟೂರ್ನಿಯ ಮೊದಲ ಎರಡೂ ಪಂದ್ಯಗಳಲ್ಲಿ ಗೆದ್ದು, ಹೈದರಾಬಾದ್ ಎದುರು ಮಾತ್ರ ಸೋತಿತ್ತು. ಒಟ್ಟು 12 ಪಾಯಿಂಟ್ಸ್‌ಗಳೊಂದಿಗೆ ಕರ್ನಾಟಕ ತಂಡವು ಎ ಮತ್ತು ಬಿ ಗುಂಪುಗಳ ಜಂಟಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ.

ಆದರೆ, ಆಂಧ್ರ ತಂಡದ ಪರಿಸ್ಥಿತಿ ಚಿಂತಾಜನಕವಾಗಿದೆ. ಆಡಿರುವ ಮೂರರಲ್ಲಿ ಕೇವಲ ಒಂದು ಪಂದ್ಯ (ಗೋವಾ ಎದುರು) ಗೆದ್ದಿದೆ. ಉಳಿದದ್ದರಲ್ಲಿ ಸೋತಿದೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಉತ್ತಮವಾಗಿ ಆಡುತ್ತಿರುವ ಕರ್ನಾಟಕದ ಆಟಗಾರರು ಫೀಲ್ಡಿಂಗ್‌ನಲ್ಲಿ ಕೆಲವು ಲೋಪಗಳನ್ನು ತಿದ್ದಿಕೊಳ್ಳುವ ಅನಿವಾರ್ಯತೆ ಇದೆ. ಮನೀಷ್ ಬಳಗವು ಈ ಪಂದ್ಯದಲ್ಲಿ ಜಯ ಸಾಧಿಸಿದರೆ, ಕ್ವಾರ್ಟರ್‌ಫೈನಲ್ ಹಾದಿಯು ಸುಗಮವಾಗಲಿದೆ.

ತಂಡಗಳು: ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಕೆ.ಎಲ್. ರಾಹುಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಅಭಿಷೇಕ್ ರೆಡ್ಡಿ, ಶ್ರೇಯಸ್ ಗೋಪಾಲ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಕೃಷ್ಣಪ್ಪ ಗೌತಮ್ , ರೋನಿತ್ ಮೋರೆ, ಪ್ರಸಿದ್ಧಕೃಷ್ಣ, ವಿ. ಕೌಶಿಕ್, ಅಭಿಮನ್ಯು ಮಿಥುನ್, ಜೆ. ಸುಚಿತ್, ಪವನ್ ದೇಶಪಾಂಡೆ, ಪ್ರವೀಣ್ ದುಬೆ, ಶ್ರೀನಿವಾಸ್ ಶರತ್.

ಆಂಧ್ರ: ರಿಕಿ ಭುಯ್ (ವಿಕೆಟ್‌ಕೀಪರ್/ನಾಯಕ), ಶ್ರೀಕರ್ ಭರತ್, ಅಶ್ವಿನ್ ಹೆಬ್ಬಾರ, ಪ್ರಶಾಂತಕುಮಾರ್, ಕರಣ್ ಶಿಂಧೆ, ಶೋಯಬ್ ಮೊಹಮ್ಮದ್ ಖಾನ್, ಗಿರಿನಾಥ್ ರೆಡ್ಡಿ, ಯರ್ರಾ ಪೃಥ್ವಿರಾಜ್, ಕೆ.ವಿ. ಶ್ರೀಕಾಂತ್, ದಾಸರಿ ಸ್ವರೂಪ್, ಬೋದಪಾಟಿ ಸುಮಂತ್, ನರೇನ್ ರೆಡ್ಡಿ, ಚೀಪುರಪಳ್ಳಿ ಸ್ಟೀಫನ್, ಕ್ರಾಂತಿಕುಮಾರ್, ಪ್ರಣೀತ್ ಮನ್ಯಾಲ, ಎಸ್‌.ಕೆ. ಕಮ್ರುದ್ದೀನ್, ಮನೀಶ್ ಗೋಲಮಾರು.

ಇಂದಿನ ಪಂದ್ಯಗಳು

ಕರ್ನಾಟಕ–ಆಂಧ್ರ (ಜಸ್ಟ್ ಕ್ರಿಕೆಟ್ ಮೈದಾನ)‌

ಹೈದರಾಬಾದ್–ಗೋವಾ (ಅಲೂರು–1, ಕ್ರೀಡಾಂಗಣ)

ಛತ್ತೀಸಗಡ–ಸೌರಾಷ್ಟ್ರ (ಆಲೂರು 2. ಕ್ರೀಡಾಂಗಣ)

ಮಂಗಳವಾರದ ಪಂದ್ಯಗಳು

ಸೌರಾಷ್ಟ್ರ–ಜಾರ್ಖಂಡ್ (ಆಲೂರು)

ಮುಂಬೈ–ಗೋವಾ (ಆಲೂರು)

ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT