ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ತಂಡಕ್ಕೆ ಜಾರ್ಖಂಡ್ ಸವಾಲು

ವಿಜಯ್ ಹಜಾರೆ ಟ್ರೋಫಿ: ಮಳೆ ನಿಂತರೆ ಮೂಡಲಿದೆ ಕ್ರಿಕೆಟ್ ಕಳೆ
Last Updated 25 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರವಾದರೂ ಮಳೆರಾಯ ಕೃಪೆ ತೋರಿದರೆ ಸೂರ್ಯಕಿರಣಗಳ ಜೊತೆಗೆ ಕ್ರಿಕೆಟಿಗರೂ ನಲಿಯಬಹುದು. ಸತತ ಮೂರು ದಿನಗಳಿಂದ ಬೆಂಗಳೂರಿನಲ್ಲಿ ರಾತ್ರಿ ಹಾಗೂ ಬೆಳಗಿನ ಜಾವ ಮಳೆ ಸುರಿಯುತ್ತಿರುವುದರಿಂದ ಒಟ್ಟು ಆರು ಪಂದ್ಯಗಳು ರದ್ದಾಗಿವೆ.

ಇನ್ನುಳಿದ ಪಂದ್ಯಗಳಲ್ಲಾದರೂ ಆಡಲು ಅವಕಾಶ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ತಂಡಗಳಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆತಿಥೇಯ ಕರ್ನಾಟಕ ತಂಡವು ಜಾರ್ಖಂಡ್ ತಂಡವನ್ನು ಎದುರಿಸಲಿದೆ. ಮಂಗಳವಾರ ಆಲೂರು ಕ್ರೀಡಾಂಗಣದಲ್ಲಿ ಕರ್ನಾಟಕ ತಂಡವು ಹೈದರಾಬಾದ್ ಎದುರು ಮೊದಲ ಪಂದ್ಯ ಆಡಬೇಕಿತ್ತು. ಆದರೆ ನೀರು ನಿಂತ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿಲ್ಲ. ಬುಧವಾರವೂ ಆಲೂರಿನಲ್ಲಿ ನಡೆಯಲಿದ್ದ ಎರಡು ಮತ್ತು ಜಸ್ಟ್‌ ಕ್ರಿಕೆಟ್ ಮೈದಾನದಲ್ಲಿ ಒಂದು ಪಂದ್ಯವು ಕೂಡ ರದ್ದಾಯಿತು. ಆದ್ದರಿಂದ ಈ ಗುಂಪಿನ ತಂಡಗಳು ತಲಾ ಎರಡು ಪಾಯಿಂಟ್ ಗಳಿಸಿವೆ.

ಹೋದ ವರ್ಷ ಲೀಗ್ ಹಂತದಲ್ಲಿ ನಿರಾಶೆ ಅನುಭವಿಸಿದ್ದ ಕರ್ನಾಟಕ ತಂಡವು ಈ ಸಲ ನಾಕೌಟ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಅದಕ್ಕೆ ತಂಡದಲ್ಲಿ ಅನುಭವಿ, ಅಂತರರಾಷ್ಟ್ರೀಯ ಆಟಗಾರರ ದಂಡು ಇದೆ. ನಾಯಕ ಮನೀಷ್ ಪಾಂಡೆ, ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಕರುಣ್ ನಾಯರ್, ಭಾರತ ‘ಎ’ ತಂಡದಲ್ಲಿ ಆಡಿರುವ ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಅನುಭವಿ ಮಧ್ಯಮವೇಗಿ ಅಭಿಮನ್ಯು ಮಿಥುನ್ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿಯ ಕಣ್ಣು ಇವರ ಮೇಲಿದೆ. ಅವರ ಗಮನ ಸೆಳೆಯುವಂತಹ ಹೊಣೆ ಈ ಆಟಗಾರದ್ದಾಗಿದೆ.

ಜಾರ್ಖಂಡ್ ತಂಡದಲ್ಲಿ ಮಹೇಂದ್ರಸಿಂಗ್ ಧೋನಿ ಆಡುವುದಿಲ್ಲ. ಆದ್ದರಿಂದ ತಂಡವನ್ನು ಮುನ್ನಡೆಸುವ ಹೊಣೆ ಮಧ್ಯಮವೇಗಿ ವರುಣ್ ಆ್ಯರನ್ ಹೆಗಲೇರಿದೆ. ಇಶಾನ್ ಕಿಶನ್, ಸೌರಭ್ ತಿವಾರಿ, ಶಹಬಾಜ್ ನದೀಂ ಅವರ ಮೇಲೆ ಅಪಾರ ನಿರೀಕ್ಷೆಯನ್ನು ಅವರಿಟ್ಟುಕೊಂಡಿದ್ದಾರೆ. ಬುಧವಾರ ಜಾರ್ಖಂಡ್ ತಂಡವು ಮುಂಬೈ ವಿರುದ್ಧ ಆಡಬೇಕಿತ್ತು. ಆದರೆ ಜಸ್ಟ್ ಕ್ರಿಕೆಟ್‌ ಮೈದಾನವು ಒದ್ದೆಯಾಗಿದ್ದ ಕಾರಣ ಪಂದ್ಯ ನಡೆಯಲಿಲ್ಲ.

ಹವಾಮಾನ ಇಲಾಖೆಯ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ ಸುರಿಯುವ ಸಾಧ್ಯತೆ ಇದೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್‌ ಏರ್ ವ್ಯವಸ್ಥೆ ಇರುವುದರಿಂದ ಒಂದಿಷ್ಟು ಓವರ್‌ಗಳ ಪಂದ್ಯವಾದರೂ ನಡೆಯಬಹುದು ಎಂದು ಕೆಎಸ್‌ಸಿಎ ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ತಂಡಗಳು

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಮಯಂಕ್ ಅಗರವಾಲ್, ಕರುಣ್ ನಾಯರ್, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಪ್ರಸಿದ್ಧ ಎಂ ಕೃಷ್ಣ, ವೈಶಾಖ ವಿಜಯಕುಮಾರ್, ದೇವದತ್ತ ಪಡಿಕ್ಕಲ್, ಅಭಿಷೇಕ್ ರೆಡ್ಡಿ, ಬಿ.ಆರ್. ಶರತ್, ಜೆ. ಸುಚಿತ್, ಮನೋಜ್ ಬಾಂಢಗೆ, ಕೆ.ವಿ. ಸಿದ್ಧಾರ್ಥ್, ರೋಹನ್ ಕದಂ, ಪ್ರವೀಣ್ ದುಬೆ, ಪವನ್ ದೇಶಪಾಂಡೆ, ಯರೇ ಗೌಡ (ಕೋಚ್). ಎಸ್. ಅರವಿಂದ್ (ಬೌಲಿಂಗ್ ಕೋಚ್).

ಜಾರ್ಖಂಡ್: ವರುಣ್ ಆ್ಯರನ್ (ನಾಯಕ), ಸೌರಭ್ ತಿವಾರಿ, ಜಸ್ಕರಣ್ ಸಿಂಗ್, ಶಹಬಾಜ್ ನದೀಂ, ರಾಹುಲ್ ಶುಕ್ಲಾ, ಕುಮಾರ್ ದೇವವ್ರತ್, ಆನಂದ್ ಸಿಂಗ್, ಶಶೀಮ್ ರಾಥೋಡ್, ಮೋನು ಕುಮಾರ್, ವಿರಾಟ್ ಸಿಂಗ್, ಆಶಿಶ್ ಕುಮಾರ್, ಇಶಾನ್ ಕಿಶನ್ (ವಿಕೆಟ್‌ಕೀಪರ್‌), ಸುಮಿತ್ ಕುಮಾರ್, ಅನುಕೂಲ್ ರಾಯ್, ಉತ್ಕರ್ಷ್ ಸಿಂಗ್, ಅತುಲ್ ಸಿಂಗ್ ಸುರ್ವಾರ್.

ತಮಿಳುನಾಡು ತಂಡಕ್ಕೆ ಎರಡನೇ ಜಯ

ಜೈಪುರ: ತಮಿಳುನಾಡು ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನಲ್ಲಿ ಸತತ ಎರಡನೇ ಜಯವನ್ನು ದಾಖಲಿಸಿತು. ಬುಧವಾರ ಐದು ರನ್‌ ಗಳಿಂದ ಶತಕ ತಪ್ಪಿಸಿಕೊಂಡ ದಿನೇಶ್ ಕಾರ್ತಿಕ್ (95 ರನ್) ಮತ್ತು ಕೃಷ್ಣಮೂರ್ತಿ ವಿಘ್ನೇಷ್ (41ಕ್ಕೆ5) ಅವರ ಬೌಲಿಂಗ್‌ನಿಂದ ತಮಿಳುನಾಡು ತಂಡವು 212 ರನ್‌ಗಳಿಂದ ಸರ್ವಿಸಸ್‌ ವಿರುದ್ಧ ಜಯಿಸಿತು.

ಸಂಕ್ಷಿಪ್ತ ಸ್ಕೋರು

ಸಿ.ಗುಂಪು (ಜೈಪುರ): ತಮಿಳುನಾಡು: 50 ಓವರ್‌ಗಳಲ್ಲಿ 8ಕ್ಕೆ294 (ಹರಿ ನಿಶಾಂತ್ 73, ದಿನೇಶ್ ಕಾರ್ತಿಕ್ 95, ಶಾರೂಕ್ ಖಾನ್ 23, ಮೊಹಮ್ಮದ್ 36, ವರುಣ್ ಚೌಧರಿ 60ಕ್ಕೆ2, ರಜತ್ ಪಲೀವಾಲ 26ಕ್ಕೆ2), ಸರ್ವಿಸಸ್: 19.1 ಓವರ್‌ಗಳಲ್ಲಿ 82 (ನಕುಲ್ ಹರಪಾಲ್ ವರ್ಮಾ 20, ಕೃಷ್ಣಮೂರ್ತಿ ವಿಘ್ನೇಷ್ 41ಕ್ಕೆ5, ಮೊಹಮ್ಮದ್ 10ಕ್ಕೆ3) ಫಲಿತಾಂಶ: ತಮಿಳುನಾಡು ತಂಡಕ್ಕೆ 212 ರನ್‌ಗಳ ಜಯ.

ತ್ರಿಪುರ: 50 ಓವರ್‌ಗಳಲ್ಲಿ 8ಕ್ಕೆ268 (ಉದಿಯಾನ್ ಬೋಸ್ 29, ಜಾಯ್‌ದೀಪ್ ಬಾನಿಕ್ 26, ವಿಶಾಲ್ ಘೋಷ್ 26, ತನ್ಮಯ್ ಮಿಶ್ರಾ 102, ಮಿಲಿಂದ್ ಕುಮಾರ್ 41, ಈಶ್ವರ್ ಪಾಂಡೆ 41ಕ್ಕೆ2, ಕುಲದೀಪ್ ಸೇನ್ 80ಕ್ಕೆ2) ಮಧ್ಯಪ್ರದೇಶ: 26 ಓವರ್‌ಗಳಲ್ಲಿ 6ಕ್ಕೆ86 (ರಜತ್ ಪಾಟೀದಾರ್ 41, ಪಾರ್ಥ್ ಸಹಾನಿ 21) ಫಲಿತಾಂಶ: ತ್ರಿಪುರ ತಂಡಕ್ಕೆ 104 ರನ್‌ಗಳ ಜಯ (ವಿಜೆಡಿ ಪದ್ಧತಿ).

ರೈಲ್ವೆಸ್: 50 ಓವರ್‌ಗಳಲ್ಲಿ 6ಕ್ಕೆ289 (ಮಂಗಲ್ ಮೆಹರೂರ್ 44, ಆಶಿಶ್ ಶೆಹ್ರಾವತ್ 41, ಅರಿಂದಮ್ ಘೋಷ್ 96, ವಿಕ್ರಾಂತ್ ರಜಪೂತ್ 70, ವಿವೇಕ್ ಕುಮಾರ್ 55ಕ್ಕೆ3), ಬಿಹಾರ:43 ಓವರ್‌ಗಳಲ್ಲಿ 6ಕ್ಕೆ155 (ಶಶೀಮ್ ರಾಥೋಡ್ ಔಟಾಗದೆ 86, ಸಚಿನ್ ಕುಮಾರ್ 31, ಕರ್ಣ ಶರ್ಮಾ 23ಕ್ಕೆ3) ಫಲಿತಾಂಶ: ರೈಲ್ವೆಸ್‌ಗೆ 84 ರನ್ ಜಯ (ವಿಜೆಡಿ ಪದ್ಧತಿ)

ಪ್ಲೇಟ್ ಗುಂಪು (ಡೆಹ್ರಾಡೂನ್): ಅಸ್ಸಾಂ: 50 ಓವರ್‌ಗಳಲ್ಲಿ 3ಕ್ಕೆ324 (ಸ್ವರೂಪಂ ಪುರಕಾಯಸ್ಥ 163, ಗೋಕುಲ್ ಶರ್ಮಾ 57, ಶಿವಶಂಕರ್ ರಾಯ್ ಔಟಾಗದೆ 79), ಮಿಜೋರಾಂ: 50 ಓವರ್‌ಗಳಲ್ಲಿ 6ಕ್ಕೆ211 (ಅಮಾಟಿ 36, ಕೆ.ಬಿ. ಪವನ್ 18, ಅಬ್ರಾರ್‌ ಖಾಜಿ ಔಟಾಗದೆ 78, ಪರ್ವೇಜ್ ಅಹಮದ್ 38, ರೋಷನ್ ಆಲಂ 45ಕ್ಕೆ4) ಫಲಿತಾಂಶ: ಅಸ್ಸಾಂ ತಂಡಕ್ಕೆ 113 ರನ್‌ಗಳಿಂದ ಜಯ.

ಮೇಘಾಲಯ: 26.1 ಓವರ್‌ಗಳಲ್ಲಿ 107 (ದ್ವಾರಕಾ ರವಿತೇಜಾ 21, ಸಂಜಯ್ ಯಾದವ್ 20, ಸಾಗರ್ ತ್ರಿವೇದಿ 18ಕ್ಕೆ4, ಸಾಗರ್ ಉದೇಶಿ 15ಕ್ಕೆ2, ವಿನಯಕುಮಾರ್ 29ಕ್ಕೆ1), ಪುದುಚೇರಿ: 23.5 ಓವರ್‌ಗಳಲ್ಲಿ 6ಕ್ಕೆ108 (ಸುರೇಶ್ ಕುಮಾರ್ ಔಟಾಗದೆ 37, ವಿನಯಕುಮಾರ್ ಔಟಾಗದೆ 20, ಅಭಯ್ ನೇಗಿ 17ಕ್ಕೆ4) ಫಲಿತಾಂಶ: ಪುದುಚೇರಿ ತಂಡಕ್ಕೆ 4 ವಿಕೆಟ್‌ಗಳ ಜಯ (ಮಳೆಯಿಂದಾಗಿ ಪಂದ್ಯವನ್ನು 28 ಓವರ್‌ಗಳಿಗೆ ಇಳಿಸಲಾಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT