ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಶಂಕರ್‌

Last Updated 1 ಜೂನ್ 2019, 13:20 IST
ಅಕ್ಷರ ಗಾತ್ರ

ವಿಜಯ್‌ ಶಂಕರ್‌

-1991ರ ಜನವರಿ 26ರಂದು ತಮಿಳುನಾಡಿನ ತಿರುನಲ್ವೇಲಿಯಲ್ಲಿಜನನ

-ಆಲ್‌ ರೌಂಡರ್‌, ಬಲಗೈ ಬ್ಯಾಟ್ಸ್ ಮನ್‌, ರೈಟ್‌ ಆರ್ಮ್‌ ಮೀಡಿಯಮ್‌ ಪೇಸ್‌ ಬೌಲರ್‌

-2019ರ ಜನವರಿ 18ರಂದು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ನಡೆದಿದ್ದಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ.

ವೃತ್ತಿ ಜೀವನದ ವಿವರಗಳು

1. ಟಿ.ವಿ ಶೋ ಒಂದರಲ್ಲಿ ಅಸಭ್ಯ ಮಾತುಗಳನ್ನಾಡಿಹರ್ದಿಕ್‌ ಪಾಂಡ್ಯ ಅಮಾನತಾಗಿದ್ದು ತಮಿಳುನಾಡಿನ ವಿಜಯ ಶಂಕರ್‌ಗೆ ವರದಾನವಾಗಿತ್ತು. 2019ರ ಫೆಬ್ರುವರಿಯಆಸ್ಟ್ರೇಲಿಯಾ ವಿರುದ್ಧದ ಪಂದ್ಯಾವಳಿಯಿಂದ ಹೊರ ಬಿದ್ದ ಪಾಂಡ್ಯ ಜಾಗಕ್ಕೆ ವಿಜಯಶಂಕರ್‌ ನೇಮಕವಾಗಿದ್ದರು. ನಂತರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೂ ಆಯ್ಕೆಯಾದರು.

2. ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿರುವ ವಿಜಯಶಂಕರ್‌ಗೆ ಪ್ರಥಮ ದರ್ಜೆ ಮತ್ತು ಐಪಿಎಲ್‌ನಲ್ಲಿ ಉತ್ತಮ ಹಿನ್ನೆಲೆ ಇದೆ.

3. 2019ರ ಮಾರ್ಚ್‌ 5ರಂದು ನಾಗಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ವೃತ್ತಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ವಿಕೆಟ್‌ ಗಳಿಸಿದ್ದರು. ಸ್ಟೋನಿಸ್‌ ಅವರ ಮೊದಲ ವಿಕೆಟ್‌ ಆಗಿದ್ದರು. ನಂತರ ಆ್ಯಡಮ್‌ ಜಂಪಾ ವಿಕೆಟ್‌ ಕಸಿದಿದ್ದ ಅವರು ಪಂದ್ಯದಲ್ಲಿ ಭಾರತ ತಂಡ ಗೆಲ್ಲಲು ನೆರವಾಗಿದ್ದರು.

ಅಂಕಿ ಅಂಶಗಳಲ್ಲಿ ಮಾಹಿತಿ

ಬ್ಯಾಟಿಂಗ್‌/ ಫೀಲ್ಡಿಂಗ್‌ ವಿವರ

ಒಟ್ಟು ಪಂದ್ಯಗಳು–9

ಇನ್ನಿಂಗ್ಸ್‌–5

ನಾಟ್‌ ಔಟ್‌–0

ರನ್‌ಗಳು–165

ಬೆಸ್ಟ್‌–46

ಸರಾಸರಿ–33.00

ಎದುರಿಸಿದ ಬಾಲ್‌ಗಳು–171

ಸ್ಟ್ರೈಕ್‌ ರೇಟ್‌–96.49

ಶತಕಗಳು–0

ಅರ್ಧಶತಕಗಳು–0

ಬೌಂಡರಿಗಳು–14

ಸಿಕ್ಸರ್‌ಗಳು–4

ಕ್ಯಾಚ್‌ಗಳು–5

ಸ್ಟಂಪ್‌ಗಳು–0

ಬೌಲಿಂಗ್‌ ವಿವರ

ಒಟ್ಟು ಪಂದ್ಯಗಳು–9

ಇನ್ನಿಂಗ್ಸ್‌–8

ಬಾಲ್‌ಗಳು–201

ನೀಡಿದ ರನ್‌ಗಳು–188

ವಿಕೆಟ್‌ಗಳು–2

ಬೆಸ್ಟ್‌–‌2/15

ಸರಾಸರಿ–94.00

ಎಕಾನಮಿ–5.61

ಬೌಲಿಂಗ್‌ ಸ್ಟ್ರೈಕ್‌ ರೇಟ್‌–100.5

4 ವಿಕೆಟ್‌ಗಳು–0

ಮಾಹಿತಿ:ಐಸಿಸಿ ವೆಬ್‌ಸೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT