ಬೆಂಗಳೂರು: ಈ ಸಲದ ಐಪಿಎಲ್ನಲ್ಲಿ ಬ್ಯಾಟಿಂಗ್ ವಿಷಯ ಬಂದಾಗಲೆಲ್ಲ ವೈಭವ್ ಸೂರ್ಯವಂಶಿಯ ಹೆಸರು ಮುನ್ನೆಲೆಗೆ ಬಂದು ನಿಲ್ಲುತ್ತದೆ. ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಈ ಬ್ಯಾಟರ್ ಕ್ರಿಕೆಟ್ ಕ್ಷೇತ್ರದ ದಿಗ್ಗಜ ಮತ್ತು ಪರಿಣಾಮಕಾರಿ ಬೌಲರ್ಗಳೆಲ್ಲರಿಗೂ ಸಿಕ್ಸರ್ ಹೊಡೆದ ಸಾಧನೆ ಮಾಡಿದ್ದಾರೆ. ನಿರ್ಭೀತವಾದ ಬ್ಯಾಟಿಂಗ್ ಮೂಲಕ ಬಿಹಾರ ಮೂಲದ ಈ ಹುಡುಗ ಈಗ ಬೌಲರ್ಗಳಿಗೆ ಸಿಂಹಸ್ವಪ್ನವಾಗುತ್ತಿದ್ದಾರೆ.

ಇನ್ನೊಂದೆಡೆ ಕಾಮೆಂಟ್ರಿ ಬಾಕ್ಸ್ನಲ್ಲಿ ಕ್ರಿಕೆಟ್ ವಿಶ್ಲೇಷಣೆ ಮಾಡುವ ಹಲವು ಮಾಜಿ ಬೌಲರ್ಗಳಿಗೂ ಪಕ್ಕದಲ್ಲಿ ಕುಳಿತವರು ‘ಈಗ ನೀವು ಇದ್ದಿದ್ದರೆ ವೈಭವ್ ಎದುರು ಹೇಗೆ ಬೌಲಿಂಗ್ ಮಾಡುತ್ತೀರಿ’ ಎಂಬ ಪ್ರಶ್ನೆ ಕೇಳುವುದು ಸಾಮಾನ್ಯವಾಗಿದೆ.

ಜಿಯೊಸ್ಟಾರ್ ಪರಿಣತ, ಮಾಜಿ ಮಧ್ಯಮವೇಗಿ ಆರ್. ವಿನಯಕುಮಾರ್ ಅವರೂ ಇಂತಹದೊಂದು ಪ್ರಶ್ನೆಗೆ ಉತ್ತರಿಸಿದರು.

‘ವೈಭವ್ ಅಪಾರ ಪ್ರತಿಭಾನ್ವಿತ ಆಟಗಾರ. ಚೆಂಡಿನ ಚಲನೆಯನ್ನು ಗುರುತಿಸುವುದರಲ್ಲಿ ಚುರುಕು. ಆದ್ದರಿಂದ ಅವರಿಗೆ ಬೌಲಿಂಗ್ ಮಾಡುವುದ ಸವಾಲು ನಿಜ. ಆದರೆ ಬೌಲರ್ಗಳು ತಮ್ಮ ಮೂಲ ಕೌಶಲಗಳಿಗೆ ತಕ್ಕಂತೆಯೇ ಬೌಲಿಂಗ್ ಮಾಡಬೇಕು. ನಾನು ವೈಭವ್ ಎದುರು ಬೌಲಿಂಗ್ ಮಾಡುವ ಸಂದರ್ಭ ಬಂದಿದ್ದರೆ ವೈವಿಧ್ಯತೆಗೆ ಒತ್ತು ಕೊಡುತ್ತಿದೆ. ನಾನು ಪರಿಣತಿ ಸಾಧಿಸಿರುವ ಎಸೆತಗಳನ್ನೇ ಹೆಚ್ಚು ಪ್ರಯೋಗಿಸುತ್ತಿದ್ದೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ ಪ್ರವೇಶಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಸಲ ಎಲ್ಲ ತಂಡಗಳಿಗಿಂತ ಮೊದಲು ಕ್ವಾಲಿಫೈಯರ್ಗೆ ಆರ್ಸಿಬಿ ಪ್ರವೇಶಿಸಿದೆ. ಅವರು ಅತ್ಯುತ್ತಮವಾದ ಕ್ರಿಕೆಟ್ ಆಡುತ್ತಿದ್ಧಾರೆ. ಈ ಹಿಂದೆ ಅರ್ಸಿಬಿ ತಂಡವು ಉತ್ತಮ ಬ್ಯಾಟರ್ಗಳನ್ನು ಹೊಂದಿತ್ತು. ಆದರೆ ಬೌಲಿಂಗ್ ವಿಭಾಗದಲ್ಲಿ ಸ್ಥಿರತೆ ಇರಲಿಲ್ಲ. ಆದರೆ ಈ ವರ್ಷ ಬ್ಯಾಟಿಂಗ್ ಕ್ರಮಾಂಕವು ಆಳವಾಗಿದೆ. ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಝಲ್ವುಡ್ ಅವರು ಪರಿಣಾಮಕಾರಿಯಾಗಿದ್ದಾರೆ. ಇದರಿಂದಾಗಿ ತಂಡವು ಯಶಸ್ಸಿನ ಹಾದಿಯಲ್ಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.