ಗುರುವಾರ , ನವೆಂಬರ್ 14, 2019
19 °C

ವಿನೋದ್‌, ಡಯಾನಾಗೆ ತಲಾ ₹3.5 ಕೋಟಿ

Published:
Updated:

ನವದೆಹಲಿ: ಬಿಸಿಸಿಐ ಆಡಳಿತದ ಅನುಪಸ್ಥಿತಿಯಲ್ಲಿ ದೇಶದ ಕ್ರಿಕೆಟ್‌ ಆಡಳಿತ ನಿರ್ವಹಿಸಿದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್‌ ರೈ ಮತ್ತು ಸದಸ್ಯೆ ಡಯನಾ ಎಡುಲ್ಜಿ ಅವರು 33 ತಿಂಗಳ ಕಾರ್ಯನಿರ್ವಹಣೆಗೆ ತಲಾ ₹3.5 ಕೋಟಿ ಪಡೆಯಲಿದ್ದಾರೆ.

ಬುಧವಾರ ಬಿಸಿಸಿಐ ಮಹಾಸಭೆ ನಡೆಯಲಿದೆ. ಅಲ್ಲಿ ಹೊಸ ಪದಾಧಿಕಾರಿಗಳು ಅಧಿಕಾರ ವಹಿಸಲಿದ್ದು, ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿದ್ದ ಸಿಒಎ ಅವಧಿ ಅಂತ್ಯಗೊಳ್ಳಲಿದೆ. ವಿನೋದ್‌ ಮಾಜಿ ಮಹಾ ಲೇಖಪಾಲರಾಗಿದ್ದರೆ, ಎಡುಲ್ಜಿ ಭಾರತ ಮಹಿಳಾ ತಂಡದ ನಾಯಕಿ ಆಗಿದ್ದರು.

2017ರ ಜನವರಿಯಲ್ಲಿ ಈ ಸಮಿತಿ ಅಧಿಕಾರ ವಹಿಸಿತ್ತು. ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದ ರಾಮಚಂದ್ರ ಗುಹಾ ಮತ್ತು ವಿಕ್ರಮ್‌ ಲಿಮಯೆ ಬೇರೆ ಬೇರೆ ಕಾರಣಗಳಿಂದಾಗಿ ಅದೇ ವರ್ಷದ ಕೊನೆಯಲ್ಲಿ ರಾಜೀನಾಮೆ ನೀಡಿದ್ದರು.

ಈ ವರ್ಷದ ಆರಂಭದಲ್ಲಿ ರವಿ ತೋಡಗೆ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ಸಿಒಎಯ ಎಲ್ಲಾ ಸದಸ್ಯರಿಗೆ 2017ರ ಅವಧಿಯಲ್ಲಿ ತಿಂಗಳಿಗೆ ತಲಾ ₹ 10 ಲಕ್ಷ ಪಾವತಿ ಮಾಡಲಾಗುತ್ತಿದೆ. 2018 ಮತ್ತು 2019ರ ಅವಧಿಯಲ್ಲಿ ತಲಾ ₹ 11 ಲಕ್ಷ ಮತ್ತು ₹ 12 ಲಕ್ಷ ನೀಡಲಾಗುತ್ತಿದೆ.

ನ್ಯಾಯಾಲಯದಿಂದ ನಿರ್ದೇಶಿತರಾದ (ಅಮಿಕಸ್‌ ಕ್ಯೂರಿ) ಪಿ.ಎಸ್‌.ನರಸಿಂಹ ಅವರ ಜೊತೆ ಚರ್ಚೆಯ ನಂತರ ಈ ಮೊತ್ತವನ್ನು ಅಂತಿಮಗೊಳಿಸಲಾಯಿತು ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)