ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗ ರಾಹುಲ್ ಮಂಕಡ್‌ ನಿಧನ

Last Updated 30 ಮಾರ್ಚ್ 2022, 12:47 IST
ಅಕ್ಷರ ಗಾತ್ರ

ಮುಂಬೈ: ಮಾಜಿ ಕ್ರಿಕೆಟಿಗ, ಮುಂಬೈ ತಂಡದ ಪರ ಆಡಿದ್ದ ರಾಹುಲ್ ಮಂಕಡ್‌ (66) ಲಂಡನ್‌ನಲ್ಲಿ ನಿಧನರಾದರು.

ಕ್ರಿಕೆಟ್‌ ದಂತಕತೆ ವಿನೂ ಮಂಕಡ್ ಅವರ ಪುತ್ರ ರಾಹುಲ್‌ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.

ಮುಂಬೈ ತಂಡದ ಮಾಜಿ ಆಟಗಾರ ಶಿಶಿರ್‌ ಹಟ್ಟಂಗಡಿ ತಮ್ಮ ಫೇಸಬುಕ್‌ ಪೋಸ್ಟ್‌ನಲ್ಲಿ ರಾಹುಲ್‌ ಅವರ ನಿಧನದ ಸುದ್ದಿ ತಿಳಿಸಿದ್ದಾರೆ.

ಬಲಗೈ ಬ್ಯಾಟರ್‌ ಮತ್ತು ಎಡಗೈ ಸ್ಪಿನ್ನರ್ ಆಗಿದ್ದರಾಹುಲ್‌, 47 ಪ್ರಥಮದರ್ಜೆ ಪಂದ್ಯಗಳನ್ನು ಆಡಿ 2,111 ರನ್‌ ಗಳಿಸಿದ್ದರು. ಅದರಲ್ಲಿ ಐದು ಶತಕ ಮತ್ತು 12 ಅರ್ಧಶತಕಗಳಿದ್ದವು. 1972–85ರ ಅವಧಿಯಲ್ಲಿ ಅವರು ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT