ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನ ಆರ್ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಮಾಜಿ ಕ್ರಿಕೆಟಿಗ ಎ.ಬಿ ಡಿವಿಲಿಯರ್ಸ್ ಅವರನ್ನು ಭೇಟಿಯಾಗಿದ್ದಾರೆ.

ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯಕ್ಕೂ ಇಬ್ಬರು ಸ್ಟಾರ್ ಕ್ರಿಕೆಟಿಗರು ಒಟ್ಟಾಗಿ ಕಾಣಿಸಿಕೊಂಡು ನಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

2025ರ ಫೈನಲ್ ಪಂದ್ಯದ ವೇಳೆಯೂ ಡಿವಿಲಿಯರ್ಸ್ ಮೈದಾನಕ್ಕೆ ಆಗಮಿಸಿದ್ದರು. ಆರ್ಸಿಬಿ ಚೊಚ್ಚಲ ಪ್ರಶಸ್ತಿ ಗೆದ್ದ ಬಳಿಕ, ತಂಡದೊಂದಿಗೆ ಟ್ರೋಫಿ ಹಿಡಿದುಕೊಂಡು ಸಂಭ್ರಮಿಸಿದ್ದರು.

2011ರಿಂದ 2021ರವರೆಗೆ ವಿರಾಟ್–ಎಬಿಡಿ ಆರ್ಸಿಬಿ ಪರ ಒಟ್ಟಿಗೆ ಆಡಿದ್ದರು. ಇವರಿಬ್ಬರ ಜೊತೆಯಾಟವು ಹಲವು ಪಂದ್ಯಗಳ ಗೆಲುವಿಗೆ ಕಾರಣವಾಗಿತ್ತು. 2016ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಇವರಿಬ್ಬರು 229 ರನ್ ಜೊತೆಯಾಟವಾಡಿರುವುದು ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಜೊತೆಯಾಟವಾಗಿದೆ.

ಆರ್ಸಿಬಿ ಪರ ಭಾವನಾತ್ಮಕ ನಂಟು ಹೊಂದಿರುವ ಡಿವಿಲಿಯರ್ಸ್ ಅವರು, ಈ ಫ್ರಾಂಚೈಸಿ ಪರ 11 ಆವೃತ್ತಿಗಳಲ್ಲಿ 156 ಪಂದ್ಯಗಳನ್ನು ಆಡಿದ್ದು, 4,522 ರನ್ ಗಳಿಸಿದ್ದಾರೆ. 2022ರ ಆರ್ಸಿಬಿ ಹಾಲ್ ಆಫ್ ಫೇಮ್ಗೆ ಡಿವಿಲಿಯರ್ಸ್ ಭಾಜನರಾಗಿದ್ದರು.

ಫೈನಲ್ನಲ್ಲಿ ಆರ್ಸಿಬಿ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದು, ಗುಜರಾತ್ ತಂಡವನ್ನು 155 ರನ್ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಸತತ ಎರಡನೇ ಬಾರಿ ಟ್ರೋಫಿ ಗೆಲ್ಲಲು 156 ರನ್ ಗಳಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.