ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಪ್ರಶಸ್ತಿ ಮೇಲೆ ಕಣ್ಣಟ್ಟಿದ್ದು, ಅದಕ್ಕೆ ತಕ್ಕಂತೆ ಅಭ್ಯಾಸ ಕೂಡ ಅರಂಭಿಸಿದೆ.

ಮಾರ್ಚ್ 28ರಿಂದ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗಲಿವೆ. ತವರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.
.IPL 2026: CSK, RR ತಂಡಗಳಿಗೆ ಆಘಾತ: ಪ್ರಮುಖ ಆಟಗಾರರು ಟೂರ್ನಿಯಿಂದಲೇ ಹೊರಕ್ಕೆ.IPL 2026: ಸನ್ರೈಸರ್ಸ್ ತಂಡಕ್ಕೆ ಇಶಾನ್ ಕಿಶನ್ ಹಂಗಾಮಿ ನಾಯಕ.
ಈ ನಡುವೆ ತಂಡದ ತಾರಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದಾರೆ.

ಸದ್ಯ, ನೆಟ್ಸ್ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಭರ್ಜರಿ ಯಾರ್ಕರ್ ಹಾಕಿರುವ ಭುವನೇಶ್ವರ್ ಕುಮಾರ್ ಅವರು ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಟೂರ್ನಿಯ ಆರಂಭಿಕ ಕೆಲವು ಪಂದ್ಯಗಳಿಗೆ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ವುಡ್ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ತಂಡದಲ್ಲಿ ಅನುಭವಿ ಬೌಲರ್ಗಳ ಕೊರತೆ ಇದ್ದು, ಭುವನೇಶ್ವರ್ ಕುಮಾರ್ ತಂಡದ ಬೌಲಿಂಗ್ ಜವಾಬ್ದಾರಿಯನ್ನು ಮುನ್ನಡೆಸಲಿದ್ದಾರೆ.

2025ರಲ್ಲಿ ಆರ್ಸಿಬಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಭುವನೇಶ್ವರ್ ಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇವರು ಆಡಿದ 14 ಪಂದ್ಯಗಳಿಂದ 17 ವಿಕೆಟ್ ಪಡೆದು ಮಿಂಚಿದ್ದರು. ವಿರಾಟ್ ಕೂಡ 15 ಇನಿಂಗ್ಸ್ಗಳಲ್ಲಿ 657 ರನ್ಗಳನ್ನು ಕಲೆಹಾಕಿದ್ದರು.

ಕಳೆದ ಆವೃತಿಯ ಹರಾಜು ಪ್ರಕ್ರಿಯೆಯಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆರ್ಸಿಬಿ ತಂಡವು ₹10.75 ಕೋಟಿಗೆ ಖರೀದಿಸಿತ್ತು. ಈ ಆವೃತಿಯಲ್ಲಿ ಇತರೆ ಯುವ ಬೌಲರ್ಗಳಿಗೆ ಮಾರ್ಗದರ್ಶನ ನೀಡುತ್ತ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಜವಾಬ್ದಾರಿ ಭುವನೇಶ್ವರ್ಗೆ ಅವರ ಮೇಲಿದೆ.
.IPL ಆರಂಭಕ್ಕೂ ಮುನ್ನ ಗಾಯದ ಸಮಸ್ಯೆ: RCB ತಾರಾ ವೇಗಿಯೂ ಆಡುವುದು ಅನುಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.