ಮಂಗಳವಾರ, ನವೆಂಬರ್ 19, 2019
29 °C
ಕ್ರಿಕೆಟ್

ಬಾಂಗ್ಲಾದೇಶ ಎದುರು ಟ್ವೆಂಟಿ–20 ಸರಣಿ: ಕೊಹ್ಲಿಗೆ ವಿಶ್ರಾಂತಿ

Published:
Updated:
Prajavani

ನವದೆಹಲಿ: ನವೆಂಬರ್ ಮೂರರಿಂದ ಬಾಂಗ್ಲಾದೇಶ ತಂಡದ ಎದುರು ನಡೆಯಲಿರುವ ಟ್ವೆಂಟಿ–20 ಕ್ರಿಕೆಟ್ ಸರಣಿಯಿಂದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಈ ಸರಣಿಯಲ್ಲಿ ಆಡುವ ಭಾರತ ತಂಡದ ಆಟಗಾರರನ್ನು ಇದೇ 24ರಂದು ಮುಂಬೈನಲ್ಲಿ  ಆಯ್ಕೆ ಮಾಡಲಾಗುವುದು. ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ದೆಹಲಿ, ರಾಜ್‌ಕೋಟ್ ಮತ್ತು ನಾಗಪುರದಲ್ಲಿ ಆಯೋಜನೆಗೊಳ್ಳಲಿವೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯು ನ.14ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಇಂದೋರ್ ಮತ್ತು ಎರಡನೇ ಟೆಸ್ಟ್‌ ಕೋಲ್ಕತ್ತ (ನ.22)ದಲ್ಲಿ ನಡೆಯಲಿದೆ.

ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ ಆಗಮಿಸಲಿದೆ. ಮೂರು ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ.

 

ಪ್ರತಿಕ್ರಿಯಿಸಿ (+)