ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಫೌಂಡೇಷನ್‌ನಿಂದ ಪ್ರಾಣಿಗಳಿಗೆ ಆಶ್ರಯತಾಣ ನಿರ್ಮಾಣ

Last Updated 4 ಏಪ್ರಿಲ್ 2021, 13:18 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮುಂಬೈನ ಹೊರವಲಯದಲ್ಲಿ ಎರಡು ‘ಪ್ರಾಣಿಗಳ ಆಶ್ರಯತಾಣ‘ಗಳನ್ನು ನಿರ್ಮಿಸಲಿದ್ದಾರೆ. ಪ್ರಾಣಿಗಳ ಕ್ಷೇಮ ಯೋಜನೆಯ ಭಾಗವಾಗಿ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಉದ್ದೇಶಕ್ಕಾಗಿ ಅವರು ಮುಂಬೈ ಮೂಲದ ಸರ್ಕಾರೇತರ ಸಂಘಟನೆಗಳಾದ ‘ವಿವಾಲ್ದೀಸ್‌ ಅನಿಮಲ್ ಹೆಲ್ತ್‌ ಮತ್ತು ಆವಾಜ್‌‘ನೊಂದಿಗೆ ಕೈಜೋಡಿಸಿದ್ದಾರೆ.

ಎರಡು ಆಶ್ರಯತಾಣಗಳು ಮಲಾಡ್ ಹಾಗೂ ಬೊಯಿಸರ್‌ನಲ್ಲಿ ನಿರ್ಮಾಣವಾಗಲಿದ್ದು, ಆವಾಜ್‌ ಸಂಘಟನೆ ಇವುಗಳ ನಿರ್ವಹಣೆ ಮಾಡಲಿದೆ.

ಮಲಾಡ್‌ನ ಆಶ್ರಯತಾಣವು ತಾತ್ಕಾಲಿಕ ಪುನರ್ವಸತಿ ಕೇಂದ್ರವಾಗಿದ್ದು, ಗಾಯಗೊಂಡ ಪ್ರಾಣಿಗಳನ್ನು (ನಾಯಿ ಮತ್ತು ಬೆಕ್ಕುಗಳಂತಹ ಸಣ್ಣ ಪ್ರಾಣಿಗಳು) ಚೇತರಿಸಿಕೊಳ್ಳುವವರೆಗೆ ಇರಿಸಿಕೊಳ್ಳಲಾಗುತ್ತದೆ. ಬೊಯಿಸರ್‌ನಲ್ಲಿ ಶಾಶ್ವತ ತಾಣ ನಿರ್ಮಾಣವಾಗಲಿದ್ದು, ಕಣ್ಣಿಲ್ಲದ ಹಾಗೂ ಪಾರ್ಶ್ವವಾಯು ಪೀಡಿತ ಪ್ರಾಣಿಗಳನ್ನು ಇರಿಸಬಹುದಾಗಿದೆ.

ಕೊಹ್ಲಿ ಇದಕ್ಕೆ ಆ್ಯಂಬುಲೆನ್ಸ್ ಸೇವೆಯನ್ನೂ ಒದಗಿಸುತ್ತಿದ್ದಾರೆ.

'ಮುಂಬೈನಲ್ಲಿ ಆಶ್ರಯರಹಿತ ಪ್ರಾಣಿಗಳಿಗೆ ಸುರಕ್ಷಿತ ತಾಣ ನಿರ್ಮಿಸುವುದು ನಮ್ಮ ಕನಸಾಗಿತ್ತು. ವಿವಾಲ್ದೀಸ್‌ ಹಾಗೂ ಆವಾಜ್‌ನ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಕ್ಕೆ ಖುಷಿಯಿದೆ. ಸಮಾನ ಮನಸ್ಕರೊಂದಿಗೆ ಸೇರಿ ಈ ಪ್ರಾಣಿಗಳಿಗೆ ನೆರವಾಗುತ್ತಿದ್ದೇವೆ' ಎಂದು ಕೊಹ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT