ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತೊಮ್ಮೆ ಸೊನ್ನೆ ಸುತ್ತಿದರು. ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ತಾವೆದುರಿಸಿದ ಎರಡನೇ ಎಸೆತದಲ್ಲಿ ಔಟಾಗಿದ್ದ ಅವರು ಈ ಬಾರಿ ಮೊದಲ ಎಸೆತದಲ್ಲೇ ಪೆವಿಲಿಯನ್ ಸೇರಿಕೊಂಡರು.

ರಾಯ್ಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 166 ರನ್ ಗಳಿಸಿದೆ. ಈ ಮೊತ್ತ ಬೆನ್ನತ್ತಿರುವ ಆರ್ಸಿಬಿಗೆ ವೇಗಿ ದೀಪಕ್ ಚಾಹರ್ ಮೊದಲ ಓವರ್ನಲ್ಲೇ ಆಘಾತ ನೀಡಿದ್ದಾರೆ.

ಚಾಹರ್ ಎಸೆದ ಓವರ್ನ ಮೊದಲೆರಡೂ ಎಸೆತಗಳನ್ನು ಬೌಂಡರಿಗಟ್ಟಿದ ಜೇಕಬ್ ಬೆಥೆಲ್, ಮೂರನೇ ಎಸೆತದಲ್ಲಿ ಒಂಟಿ ರನ್ ಗಳಿಸಿದರು. ಈ ವೇಳೆ ಸ್ಟ್ರೈಕ್ಗೆ ಬಂದ ಕೊಹ್ಲಿ, ನಾಲ್ಕನೇ ಎಸೆತವನ್ನು ಮಿಡ್ ಆಫ್ ಕಡೆಗೆ ಬಾರಿಸಿದರು. ಕ್ಷೇತ್ರರಕ್ಷಣೆಯಲ್ಲಿದ್ದ ರಾಜ್ ಬಾವಾ ತಮ್ಮ ಬಲಕ್ಕೆ ಜಿಗಿದು ಕ್ಯಾಚ್ ಪಡೆದರು. ಇದರೊಂದಿಗೆ ಮುಂಬೈ ಪಾಳೆಯದಲ್ಲಿ ಸಂಭ್ರಮದ ಅಲೆ ಎದ್ದಿತು.
.ವಿಕೆಟ್ ಪಡೆಯುವುದು ಹೇಗೆಂದು ಕೊಹ್ಲಿಯೇ ಹೇಳಿಕೊಟ್ಟಿದ್ದರು: ಪ್ರಿನ್ಸ್ ಯಾದವ್.IPL 2026: RCB vs MI- ಅಂತಿಮ ಎಸೆತದಲ್ಲಿ ಗೆದ್ದ ಆರ್ಸಿಬಿ!.
ವಿರಾಟ್ ಈ ರೀತಿ ಸತತ ಇನಿಂಗ್ಸ್ಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿರುವುದು ಎರಡನೇ ಬಾರಿ. 2022ರ ಆವೃತ್ತಿಯಲ್ಲಿ ಲಖನೌ ಮತ್ತು ಸನ್ರೈಸರ್ಸ್ ಹೈದರಾಬಾದ್ ಎದುರು ಇದೇ ರೀತಿ ಔಟಾಗಿದ್ದರು.

ಅಂದಹಾಗೆ, ಕೊಹ್ಲಿ 2023ರಿಂದ ಈಚೆಗೆ ಆಡಿದ ಐಪಿಎಲ್ ಪಂದ್ಯಗಳಲ್ಲಿ ಒಮ್ಮೆಯೂ ಖಾತೆ ತೆರೆಯೆದೆ ವಿಕೆಟ್ ಒಪ್ಪಿಸಿರಲಿಲ್ಲ. ಕಳೆದ ಪಂದ್ಯದಲ್ಲಿ ಲಖನೌ ವೇಗಿ ಪ್ರಿನ್ಸ್ ಯಾದವ್ ಅವರು ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.