ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 19 ವರ್ಷಗಳ ಇತಿಹಾಸದಲ್ಲಿ ಹೆಚ್ಚು ಆದಾಯ ಪಡೆದ ಆಟಗಾರರ ಪಟ್ಟಿಯಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಐಪಿಎಲ್ನ 19 ಆವೃತ್ತಿಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿರುವ ವಿರಾಟ್ ಕೊಹ್ಲಿ, ಒಟ್ಟು ₹230 ಕೋಟಿ ಆದಾಯ ಪಡೆದಿದ್ದಾರೆ.

ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ₹227.2 ಕೋಟಿ, ಮಹೇಂದ್ರ ಸಿಂಗ್ ಧೋನಿ ₹200 ಕೋಟಿ ಗಳಿಕೆ ಮಾಡಿದ್ದಾರೆ. ಇವರು ವಿರಾಟ್ ನಂತರ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಮಹಿಳಾ ಆಟಗಾರ್ತಿಯರಲ್ಲಿ ಸ್ಮೃತಿ ಮಂದಾನ ಅವರು ಅಗ್ರಸ್ಥಾನದಲ್ಲಿದ್ದಾರೆ. ಡಬ್ಲ್ಯೂಪಿಎಲ್ನಿಂದ ಅವರು ₹13.7 ಕೋಟಿ ಆದಾಯ ಮಾಡಿದ್ದಾರೆ. ಟಾಪ್–10 ಆಟಗಾರ್ತಿಯರ ಆದಾಯವು ₹90 ಕೋಟಿಯಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.