ಧರ್ಮಶಾಲಾ: ಇಲ್ಲಿ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿ, ಆರ್ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ ವಿರಾಟ್ ಕೊಹ್ಲಿ ಅವರು ಐಪಿಎಲ್ನಲ್ಲಿ ಹೊಸ ದಾಖಲೆ ಮಾಡಿದ್ದಾರೆ.

ಕ್ವಾಲಿಫೈಯರ್ 1ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ, 25 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು. ಈ ಸಂದರ್ಭದಲ್ಲಿ ಅವರು ಐಪಿಎಲ್ನ ಸತತ 4 ಆವೃತ್ತಿಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಈ ಪಂದ್ಯದ ಆರಂಭಕ್ಕೂ ಮೊದಲು 557 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರಿಗೆ 600 ರನ್ಗಳ ಮೈಲಿಗಲ್ಲು ತಲುಪಲು 43 ರನ್ಗಳ ಅಗತ್ಯವಿತ್ತು. ಗುಜರಾರ್ ವಿರುದ್ಧ ಅಷ್ಟೇ ರನ್ ಸಿಡಿಸುವ ಮೂಲಕ ಆ ಗುರಿ ಮುಟ್ಟಿದರು. ಇದಕ್ಕೂ ಮೊದಲು, ಕೆ.ಎಲ್. ರಾಹುಲ್, ಕ್ರಿಸ್ ಗೇಲ್ ಜೊತೆ ವಿರಾಟ್ ಕೊಹ್ಲಿ ಕೂಡ ಸತತ ಮೂರು ಐಪಿಎಲ್ ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ನಾಲ್ಕನೇ ಬಾರಿ ಈ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು, ಇದಕ್ಕೂ ಮೊದಲು ಐಪಿಎಲ್ 2023ರಲ್ಲಿ 14 ಪಂದ್ಯಗಳಿಂದ 639 ರನ್ಗಳು, 2024 ರಲ್ಲಿ 15 ಪಂದ್ಯಗಳಿಂದ 741 ರನ್ಗಳು, 2025 ರಲ್ಲಿ 16 ಪಂದ್ಯಗಳಿಂದ 657 ರನ್ಗಳನ್ನು ಕಲೆಹಾಕಿದ್ದರು. ಇದೀಗ ಈ ಬಾರಿಯೂ 600 ರನ್ ಗಳಿಸುವ ಮೂಲಕ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.