ಸೋಮವಾರ, ಜೂನ್ 1, 2020
27 °C

ಕೊಹ್ಲಿಯೇ ಉತ್ತಮ ಕ್ರಿಕೆಟಿಗ: ಇಯಾನ್ ಚಾಪೆಲ್

ಪಿಟಿಐ Updated:

ಅಕ್ಷರ ಗಾತ್ರ : | |

virat

ನವದೆಹಲಿ: ಕ್ರಿಕೆಟ್‌ನ ‘ಕಾಪಿಬುಕ್‌’ನಲ್ಲಿ ಬರೆದಿಟ್ಟಂಥ ಅತ್ಯಮೋಘ ಹೊಡೆತಗಳೊಂದಿಗೆ ರಂಜಿಸಬಲ್ಲ ಮತ್ತು ಫಿಟ್‌ನೆಸ್ ವಿಷಯದಲ್ಲಿ ಮಾದರಿಯಾಗಬಲ್ಲ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ವಿಶ್ವದ ಉತ್ತಮ ಬ್ಯಾಟ್ಸ್‌ಮನ್‌...

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಸೋಮವಾರ ಆಡಿದ ಮಾತುಗಳು ಇವು. 

ರಾಧಾಕೃಷ್ಣನ್ ಶ್ರೀನಿವಾಸನ್ ಅವರು ಯು ಟ್ಯೂಬ್‌ನಲ್ಲಿ ಆಯೋಜಿಸಿದ್ದ ‘ದಿ ಆರ್‌ಕೆ ಶೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಚಾಪೆಲ್ ಅವರು ‘ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ಅವರ ಸಾಲಿಗೆ ಸೇರುವ ಆಟಗಾರ ವಿರಾಟ್ ಕೊಹ್ಲಿ. ಮೂರೂ ಮಾದರಿಗಳಲ್ಲಿ ಅವರು ಮಾಡಿರುವ ದಾಖಲೆಗಳು ವಿಸ್ಮಯ ಮೂಡಿಸುತ್ತಿವೆ. ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಂತೂ ಅವರನ್ನು ಹಿಂದಿಕ್ಕುವವರು ಯಾರೂ ಇಲ್ಲ’ ಎಂದರು.

‘ಕೊಹ್ಲಿ ಬ್ಯಾಟಿಂಗ್‌ಗೆ ಅಣಿ ಯಾಗುವ ರೀತಿಯೇ ವಿಶಿಷ್ಟ. ಏಕದಿನ ಕ್ರಿಕೆಟ್‌ನಲ್ಲಿ ವಿವಿಯನ್ ರಿಚರ್ಡ್ಸ್ ಅವರನ್ನು ಹೋಲುವಂತೆ ವಿರಾಟ್ ಆಡುತ್ತಾರೆ. ಸಾಂಪ್ರದಾಯಿಕ ಹೊಡೆತಗಳನ್ನು ಆಕರ್ಷಕವಾಗಿ ಆಡ ಬಲ್ಲ ಅವರ ಸಾಮರ್ಥ್ಯ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಫಿಟ್‌ನೆಸ್ ಕಾಪಾಡಿ ಕೊಂಡಿರುವ ಅವರು ವಿಕೆಟ್‌ಗಳ ಮಧ್ಯೆ ಓಡುವುದನ್ನು ನೋಡುವುದೇ ಖುಷಿ’ ಎಂದು ಚಾಪೆಲ್ ಬಣ್ಣಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು