ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೊಹ್ಲಿ ಹೆಚ್ಚು ಅಪಾಯಕಾರಿ ಆಗಬಲ್ಲರು: ಗಂಭೀರ್

Last Updated 12 ಡಿಸೆಂಬರ್ 2021, 14:35 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ನಾಯಕತ್ವ ತೆರವಾದ ಬಳಿಕ ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಇನ್ನೂ ಹೆಚ್ಚು ಅಪಾಯಕಾರಿ ಬ್ಯಾಟರ್ ಆಗಿ ಹೊರಹೊಮ್ಮಬಹುದು ಎಂದು ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಅವರು ಕಳೆದ ಎರಡು ವರ್ಷಗಳಿಂದ ಹೇಳಿಕೊಳ್ಳುವಂಥ ಫಾರ್ಮ್‌ನಲ್ಲಿಲ್ಲ. ಅವರು 2019ರಲ್ಲಿ ಶತಕ ಬಾರಿಸಿದ್ದು ಬಿಟ್ಟರೆ ನಂತರ ಅಂತಹ ಇನ್ನಿಂಗ್ಸ್ ಅವರಿಂದ ಮೂಡಿಬಂದಿಲ್ಲ.

‘ಸ್ಟಾರ್ ಸ್ಪೋರ್ಟ್ಸ್’ ವಾಹಿನಿಯ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಗಂಭಿರ್, ‘ಕೊಹ್ಲಿ ನಾಯಕನಾಗಿರಲಿ ಅಥವಾ ಇಲ್ಲದೇ ಇರಲಿ ಅವರಿಂದ ಉತ್ತಮ ಆಟ ನಿರೀಕ್ಷಿಸಬಹುದು’ ಎಂದು ಹೇಳಿದ್ದಾರೆ.

‘ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಲ್ಲದ ರೋಹಿತ್ ಶರ್ಮಾ ಅವರ ಪಾತ್ರವೇನೋ ಹಾಗೆಯೇ ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಕೊಹ್ಲಿಯದ್ದು ಕೂಡ. ನಾಯಕತ್ವವಿಲ್ಲದೆ ನಿರಾಳರಾಗಿರುವ ಕೊಹ್ಲಿಯಿಂದ ಉತ್ತಮ ಆಟ ನಿರೀಕ್ಷಿಸಬಹುದು. ಅವರು ಇನ್ನೂ ಅಪಾಯಕಾರಿ ಬ್ಯಾಟರ್ ಆಗುವ ಸಾಧ್ಯತೆಗಳಿವೆ. ಯಾಕೆಂದರೆ ನಾಯಕತ್ವದ ಹೊರೆ ಅವರ ಹೆಗಲ ಮೇಲಿಲ್ಲ’ ಎಂದು ಗಂಭೀರ್ ಹೇಳಿದ್ದಾರೆ.

‘ಅವರು ಭಾರತವೇ ಹೆಮ್ಮೆಪಡುವಂತೆ ಮಾಡಲಿದ್ದಾರೆ ಎಂಬ ಬಗ್ಗೆ ನನಗೆ ಖಾತರಿ ಇದೆ. ನಿಗದಿತ ಓವರ್‌ಗಳ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಅವರು ಉತ್ತಮ ರನ್ ಗಳಿಸಲಿದ್ದಾರೆ. ಇಬ್ಬರೂ ಆಟಗಾರರು ತಮ್ಮದೇ ಚಿಂತನೆಗಳ ಮೂಲಕ ತಂಡಕ್ಕೆ ತಮ್ಮದೇ ಆದ ದೃಷ್ಟಿಕೋನ ತೋರಲಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾಯಕತ್ವದಿಂದ ಹೊರಗುಳಿದರೂ ಕೊಹ್ಲಿ ಅವರನ್ನು ತಂಡದಿಂದ ಕೈಬಿಡುವ ಪ್ರಶ್ನೆಯೇ ಉದ್ಭವಿಸದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT