ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್, ಲಾರಾ ದಾಖಲೆ ಮುರಿಯುವ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

Last Updated 16 ಡಿಸೆಂಬರ್ 2020, 6:44 IST
ಅಕ್ಷರ ಗಾತ್ರ

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಸೋತರೂ ಟಿ20 ಸರಣಿಯನ್ನು ಗೆದ್ದು ಸಮಬಲದ ಹೋರಾಟ ನೀಡಿರುವ ಟೀಮ್ ಇಂಡಿಯಾ, ಈಗ ಬಹುನಿರೀಕ್ಷಿತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯವು ಡಿ. 17ರಂದು ಅಡಿಲೇಡ್ ಮೈದಾನದಲ್ಲಿ ಆರಂಭವಾಗಲಿದೆ. ಇದರಂತೆ ಸರಣಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಭಾಗವಹಿಸುತ್ತಿರುವ ಕಪ್ತಾನ ವಿರಾಟ್ ಕೊಹ್ಲಿ ನೂತನ ದಾಖಲೆಯನ್ನು ಎದುರು ನೋಡುತ್ತಿದ್ದಾರೆ.

ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ದಾಖಲೆಯನ್ನು ಒಂದೊಂದಾಗಿ ಮುರಿಯುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ, ಈಗ ವಿಶಿಷ್ಟ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ.

ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಆಡಿರುವ 20 ಟೆಸ್ಟ್ ಪಂದ್ಯಗಳಲ್ಲಿ ಆರು ಶತಕ ಸೇರಿದಂತೆ 53.2ರ ಸರಾಸರಿಯಲ್ಲಿ 1809 ರನ್ ಪೇರಿಸಿದ್ದರು.

ಸಚಿನ್‌ಗೆ ಹೋಲಿಸಿದಾಗ ವಿರಾಟ್ ಕೊಹ್ಲಿ, 12 ಪಂದ್ಯಗಳಲ್ಲಿ ಅಷ್ಟೇ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ 55.39ರ ಸರಾಸರಿಯಲ್ಲಿ 1,274 ರನ್ ಗಳಿಸಿದ್ದಾರೆ. ಈಗ ಆಡಿಲೇಡ್ ಓವಲ್ ಪಂದ್ಯದಲ್ಲಿ ಮಗದೊಂದು ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲಿದ್ದಾರೆ.

ಲಾರಾ ದಾಖಲೆ ಬೆನ್ನಟ್ಟಿದ ಕೊಹ್ಲಿ:
ಈ ಮಧ್ಯೆ ವಿರಾಟ್ ಕೊಹ್ಲಿ, ಅಡಿಲೇಡ್‌ನಲ್ಲಿ ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ಬ್ರಿಯಾನ್ ಲಾರಾ ದಾಖಲೆಯನ್ನು ಅಳಿಸಿ ಹಾಕುವ ಇರಾದೆಯಲ್ಲಿದ್ದಾರೆ.

ಅಡಿಲೇಡ್ ಓವಲ್ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಬ್ಯಾಟ್ಸ್‌ಮನ್‌ಗಳ ಪೈಕಿ 610 ರನ್ ಗಳಿಸಿರುವ ಬ್ರಿಯಾನ್ ಲಾರಾ ಮೊದಲ ಸ್ಥಾನದಲ್ಲಿದ್ದಾರೆ. ಈ ದಾಖಲೆ ಮುರಿಯಲು ಕೊಹ್ಲಿಗೀಗ, 179 ರನ್‌ಗಳ ಅವಶ್ಯಕತೆಯಿದೆ.

ಇಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಲಾರಾ 76.25ರ ಸರಾಸರಿಯಲ್ಲಿ ರನ್ ಪೇರಿಸಿದ್ದರು. ಇದರಲ್ಲಿ ತಲಾ ಎರಡು ಶತಕ ಹಾಗೂ ಅರ್ಧಶತಕಗಳು ಸೇರಿವೆ. ಇನ್ನೊಂದೆಡೆ ವಿರಾಟ್, ಮೂರು ಶತಕಗಳ ಬೆಂಬಲದೊಂದಿಗೆ 71.83ರ ಸರಾಸರಿಯಲ್ಲಿ 431 ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT