ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ಭಾನುವಾರ ನಡೆದ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ಗಳು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ವಿಶೇಷವಾಗಿ, ಫಿಲ್ ಸಾಲ್ಟ್, ನಾಯಕ ರಜತ್ ಪಾಟಿದಾರ್ ಹಾಗೂ ಟಿಮ್ ಡೇವಿಡ್ ಮುಂಬೈ ಬೌಲರ್ಗಳ ಮೇಲೆ ಸವಾರಿ ಮಾಡಿದರು.

ಆದರೆ, ಇನ್ನೊಂದೆಡೆ ಕ್ರೀಸ್ ಕಚ್ಚಿ ಆಡಿದ ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ಗೆ ಒತ್ತು ನೀಡಿದ್ದರು. ವಿರಾಟ್ ಕೊಹ್ಲಿ ಅವರ ಈ ರೀತಿಯ ಆಟಕ್ಕೆ ನ್ಯೂಜಿಲೆಂಟ್ನ ಕ್ರಿಕೆಟ್ ವಿಶ್ಲೇಷಕ ಸೈಮನ್ ಡೌಲ್, ವಿರಾಟ್ರನ್ನು ರಿಟೈರ್ಡ್ ಔಟ್ ಮಾಡಬೇಕಿತ್ತು ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿಯವರು ನಿಧಾನಗತಿಯಾಗಿ ಬ್ಯಾಟಿಂಗ್ ಮಾಡುವ ಬದಲು ರಿಟೈರ್ಡ್ ಔಟ್ ಆಗಿ ಟಿಮ್ ಡೇವಿಡ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರೆ, ತಂಡದ ಮೊತ್ತ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದಿದ್ದಾರೆ. ಕೊಹ್ಲಿ ಆರಂಭದಲ್ಲಿ 11 ಎಸೆತಗಳಲ್ಲಿ 20 ರನ್ ಗಳಿಸಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದರು. ಆದರೆ, ಕ್ರಮೇಣ ಅವರು ನಿಧಾನಗತಿಯ ಆಟಕದ ಮೊರೆ ಹೋದರು. ಪರಿಣಾಮ ಅವರು 38 ಎಸೆತಗಳಲ್ಲಿ 50 ರನ್ ಗಳಿಸಿ ಔಟ್ ಆದರು.

ಒಂದೆಡೆ ಆರ್ಸಿಬಿ ನಾಯಕ ರತ್ ಪಾಟಿದಾರ್ ಕೇವಲ 20 ಎಸೆತಗಳಲ್ಲಿ 53 ರನ್ ಬಾರಿಸುತ್ತಾರೆ. ಆದರೆ ಇನ್ನೊಂದೆಡೆ ಕೊಹ್ಲಿ ಕೇವಲ 131.58ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಮಾಡುತ್ತಾರೆ.

‘ನೀವು ವೇಗವಾಗಿ ಬ್ಯಾಟಿಂಗ್ ಮಾಡದೇ ಇದ್ದರೆ, ನಿಮ್ಮನ್ನು ಹೊರಗಿಡಬೇಕಾಗುತ್ತದೆ ಎಂದು ಆರ್ಸಿಬಿ ನಾಯಕ ಪಾಟಿದಾರ್ ಅವರು ವಿರಾಟ್ ಕೊಹ್ಲಿಗೆ ಒಂದು ಸಂದೇಶ ನೀಡಬೇಕು’ ಎಂದು ಸೈಮನ್ ಡೌಲ್ ಹೇಳಿದ್ದಾರೆ.

ಸೈಮನ್ ಡೌಲ್ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೆಲವರು, ನೀವು ವಿರಾಟ್ ಕೊಹ್ಲಿಯವರ ಆಟವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರ ಆಟದ ಮಹತ್ವವೇ ನಿಮಗೆ ತಿಳಿದಿಲ್ಲ ಎಂದಿದ್ದಾರೆ.

ಇನ್ನೂ ಕೆಲವರು 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ರೇಟ್ ಕೇವಲ 128 ಆದರೆ, ಅದು ಎಷ್ಟು ಅಮೂಲ್ಯ ಇನಿಂಗ್ಸ್ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದಿದ್ದಾರೆ.

ಅಷ್ಟು ಸಾಲದು ಅಂದರೆ 2022ರ ಟಿ20 ವಿಶ್ವಕಪ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊನೆಯ 8 ಎಸೆತಗಳಿಗೆ 28 ರನ್ ಸಿಡಿಸಿರುವುದನ್ನು ಒಮ್ಮೆ ನೆನೆಪಿಸಿಕೊಳ್ಳಿ ಎಂದು ಸೈಮನ್ ಡೌಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.