ಶನಿವಾರ, ಸೆಪ್ಟೆಂಬರ್ 25, 2021
25 °C

ಅನುಷ್ಕಾ ಮೊದಲ ಭೇಟಿಯ ಅನುಭವ ಹಂಚಿಕೊಂಡ ವಿರಾಟ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುಷ್ಕಾ ಶರ್ಮಾ ಅವರೊಂದಿಗಿನ ಮೊದಲ ಭೇಟಿಯ ಅನುಭವವನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ.

ಅನುಷ್ಕಾ ಮತ್ತು ಕೊಹ್ಲಿ ನಡುವಿನ ಭೇಟಿಯ ಬಗ್ಗೆ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಕೇಳಿದ ಪ್ರಶ್ನೆಗೆ ಕೊಹ್ಲಿ ಉತ್ತರಿಸಿದ್ದಾರೆ.

ನಾನು ಅನುಷ್ಕಾರನ್ನು ಮೊದಲು ಭೇಟಿ ಮಾಡಿದ್ದು 2013ರಲ್ಲಿ. ನಾವು ಒಟ್ಟಿಗೆ ಶ್ಯಾಂಪು ಜಾಹೀರಾತಿನಲ್ಲಿ ನಟಿಸುವ ಸಂದರ್ಭ ಅದಾಗಿತ್ತು. ಅವರನ್ನು ನೋಡಿದಾಗ ನಾನು ಕೂಡ ನರ್ವಸ್‌ ಆಗಿದ್ದೆ. ಸೆಟ್‌ನಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೇ ಅವರ ಮೇಲೆ ಜೋಕ್‌ ಮಾಡುತ್ತಿದೆ. ಇದು ಅನುಷ್ಕಾಗೂ ಇಷ್ಟವಾಗಿತ್ತು ಎಂದು ಕೊಹ್ಲಿ ತಮ್ಮ ಮೊದಲ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. 

ಮೂರು ವರ್ಷ ಡೇಟಿಂಗ್‌ ಮಾಡಿದ ವಿರುಷ್ಕಾ ಜೋಡಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಈ ಜೋಡಿಗೆ ವಮಿಕಾ ಎಂಬ ಹೆಣ್ಣು ಮಗು ಇದೆ. ಅನುಷ್ಕಾ ಜತೆ ಸಂತೃಪ್ತಿಯ ಜೀವನ ನಡೆಸುತ್ತಿರುವೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. 

ತಂದೆಯ ನಿಧನ ಬೇಸರ ತರಿಸಿದೆ ಅವರು ಹೇಳಿದ್ದಾರೆ. ನನ್ನ ಕ್ರಿಕೆಟ್‌ ಆಟವನ್ನು ನೋಡಲು ಅಪ್ಪ ಇಲ್ಲ, ನನ್ನ ಮಗಳನ್ನು ನೋಡಲು ಅವರಿಲ್ಲ ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು