ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ವಿಶ್ವಕಪ್‌ ಗೆಲ್ಲುವ ಸಾಮರ್ಥ್ಯ ಇದೆ: ವಿವಿಯನ್‌ ರಿಚರ್ಡ್ಸ್‌

Last Updated 27 ಡಿಸೆಂಬರ್ 2018, 18:50 IST
ಅಕ್ಷರ ಗಾತ್ರ

ಗುವಾಹಟಿ: ‘ಭಾರತ ಕ್ರಿಕೆಟ್‌ ತಂಡ ಮುಂದಿನ ವರ್ಷ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸುವ ಸಾಮರ್ಥ್ಯ ಹೊಂದಿದೆ’ ಎಂದು ವೆಸ್ಟ್‌ ಇಂಡೀಸ್‌ ತಂಡದ ಹಿರಿಯ ಕ್ರಿಕೆಟಿಗ ವಿವಿಯನ್‌ ರಿಚರ್ಡ್ಸ್‌ ಹೇಳಿದ್ದಾರೆ.

‘ವಿಶ್ವದ ಬಲಿಷ್ಠ ತಂಡಗಳನ್ನು ಮಣಿಸುವ ಸಾಮರ್ಥ್ಯ ವಿರಾಟ್‌ ಕೊಹ್ಲಿ ಬಳಗಕ್ಕಿದೆ. ಜೊತೆಗೆ ಇಂಗ್ಲೆಂಡ್‌, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಕೂಡಾ ಪ್ರಶಸ್ತಿಯ ರೇಸ್‌ನಲ್ಲಿವೆ. ಈ ವರ್ಷ ನಡೆದ ಟೂರ್ನಿಗಳಲ್ಲಿ ಇಂಗ್ಲೆಂಡ್‌ ತಂಡದವರು ಉತ್ತಮ ಆಟ ಆಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳೂ ಪ್ರತಿಭಾನ್ವಿತರಿಂದ ಕೂಡಿವೆ ಎಂದು ತಿಳಿಸಿದ್ದಾರೆ.

‘ವೆಸ್ಟ್‌ ಇಂಡೀಸ್ ತಂಡ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸಾಮರ್ಥ್ಯ ತೋರಿಲ್ಲ. ಹಾಗಂತ ಆ ತಂಡವನ್ನು ಕಡೆಗಣಿಸಲು ಆಗುವುದಿಲ್ಲ. ನಿಗದಿತ ಓವರ್‌ಗಳ ಹೋರಾಟಗಳಲ್ಲಿ ಪಂದ್ಯದ ದಿನ ಏನಾದರೂ ಆಗಬಹುದು. ಕ್ರಿಕೆಟ್‌ ಕೂಸು ಎನಿಸಿಕೊಂಡ ತಂಡಗಳು ಬಲಾಢ್ಯ ತಂಡಗಳಿಗೆ ಆಘಾತ ನೀಡಬಹುದು’ ಎಂದು ನುಡಿದಿದ್ದಾರೆ.

ಪಾಕಿಸ್ತಾನದ ಇಮ್ರಾನ್‌ ಖಾನ್‌ ಅವರ ಹಾಗೆ ನೀವು ರಾಜಕೀಯಕ್ಕೆ ಇಳಿಯುವ ಆಲೋಚನೆ ಇದೆಯೇ ಎಂಬ ಪ್ರಶ್ನೆಗೆ ‘ಸದ್ಯಕ್ಕಂತೂ ಅಂತಹ ಆಲೋಚನೆ ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT