ಮುಂಬೈ: ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯವು ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ನಡುವೆ ಮಳೆ ಬಂದು ಪಂದ್ಯ ರದ್ಧಾದರೆ, ಭಾರತ ಫೈನಲ್ ತಲುಪುತ್ತಾ? ಇಲ್ಲವಾ? ಎಂಬ ಪ್ರಶ್ನೆಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಎದುರಾಗಿದೆ.

ಸದ್ಯದ ಮಾಹಿತಿಯ ಪ್ರಕಾರ, ಮುಂಬೈನಲ್ಲಿ ವಾತಾವರಣ ಸಮತೋಲನದಿಂದ ಕೂಡಿದ್ದು, ಮಳೆ ಬರುವ ಸಾಧ್ಯತೆ ಕಡಿಮೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯವು ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಆ ದಿನ ಶುಭ್ರ ಆಕಾಶ ಮತ್ತು ಕ್ರಿಕೆಟ್ ಸ್ನೇಹಿ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪಂದ್ಯದ ದಿನ ಇಲ್ಲಿನ ತಾಪಮಾನವು 27 ರಿಂದ 37 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ, ಆರ್ದ್ರತೆಯ ಮಟ್ಟವು ಶೇಕಡಾ 60ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಮಳೆಯಿಂದ ಪಂದ್ಯ ರದ್ದಾದರೆ?

ನಿಗದಿತ ದಿನದಂದು ಮಳೆಯಿಂದ ಆಟ ನಿಂತರೆ, ಮರುದಿನ ಹೊಸದಾಗಿ ಪಂದ್ಯ ನಡೆಯಲಿದೆ.

ಸೆಮಿಫೈನಲ್ ಪಂದ್ಯ ನಡೆಯುವ ದಿನ 90 ನಿಮಿಷಗಳು ಮತ್ತು ಮೀಸಲು ದಿನದಂದು 120 ನಿಮಿಷಗಳು ಹೆಚ್ಚುವರಿ ಸಮಯ ಲಭ್ಯವಿರಲಿದೆ.

ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಎರಡೂ ದಿನಗಳು 120 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗುತ್ತದೆ.

ಪಂದ್ಯದ ಫಲಿತಾಂಶ ನಿರ್ಧಾರವಾಗಬೇಕೆಂದರೆ, ಎರಡೂ ತಂಡಗಳು ಕನಿಷ್ಠ 10 ಓವರ್ ಬ್ಯಾಟಿಂಗ್ ಮಾಡಬೇಕು. ಅದು ಆಗದಿದ್ದರೆ, ಮೀಸಲು ದಿನ ಆಟವು ಅದೇ ಸ್ಕೋರ್ನಿಂದ ಪುನರಾರಂಭವಾಗುತ್ತದೆ.

ಒಂದುವೇಳೆ, ಮೀಸಲು ದಿನದಂದು ಕೂಡ ಪಂದ್ಯಾವಳಿ ಪೂರ್ಣಗೊಳ್ಳದೇ ಇದ್ದರೆ, ಸೂಪರ್–8ರ ಹಂತದಲ್ಲಿ ಹೆಚ್ಚಿನ ಅಂಕ ಪಡೆದ ತಂಡವು ಫೈನಲ್ಗೆ ಅರ್ಹತೆ ಪಡೆಯುತ್ತದೆ. ಒಂದುವೇಳೆ ಹೀಗಾದರೆ, ಭಾರತ ಸೆಮಿಫೈನಲ್ನಲ್ಲಿ ತನ್ನ ಅಭಿಯಾನ ಕೊನೆಗೊಳಿಸಬೇಕಾಗುತ್ತದೆ.

ಸೂಪರ್–8ರ ಗುಂಪು 1ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಭಾರತ ತಂಡವು ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.

ಆದರೆ, ಸೂಪರ್–8ರಲ್ಲಿ ಮೂರಕ್ಕೆ ಮೂರು ಪಂದ್ಯ ಗೆದ್ದ ಇಂಗ್ಲೆಂಡ್ ಅಜೇಯವಾಗಿ ಸೆಮಿಫೈನಲ್ ತಲುಪಿದೆ.

.ಟಿ20 ವಿಶ್ವಕಪ್ನಲ್ಲಿ ಭಾರತ vs ಇಂಗ್ಲೆಂಡ್ 5 ಬಾರಿ ಮಖಾಮುಖಿ; ಯಾರಿಗೆ ಮೇಲುಗೈ?.ಜೆರ್ಸಿ ಕಳವು ಮಾಡಿದ ಆರೋಪ: ವಾಂಖೆಡೆ ಕ್ರೀಡಾಂಗಣ ಮ್ಯಾನೇಜರ್ ಬಂಧನ.
ಭಾರತ vs ಇಂಗ್ಲೆಂಡ್

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಟಿ20ಯಲ್ಲಿ ಇದುವರೆಗೆ 29 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ, ಭಾರತ 17 ಗೆಲುವು ಮತ್ತು 12 ಸೋಲು ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.