ಪಾಕ್ ಕ್ರಿಕೆಟಿಗರಿಗೆ ಬಿರಿಯಾನಿ; ವಾಸೀಂ ಕಿಡಿ

ಶನಿವಾರ, ಏಪ್ರಿಲ್ 20, 2019
27 °C

ಪಾಕ್ ಕ್ರಿಕೆಟಿಗರಿಗೆ ಬಿರಿಯಾನಿ; ವಾಸೀಂ ಕಿಡಿ

Published:
Updated:
Prajavani

ಬೆಂಗಳೂರು: ವಿಶ್ವಕಪ್ ಟೂರ್ನಿಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಆದರೆ ಪಾಕಿಸ್ತಾನ ತಂಡದ ಆಟಗಾರರಿಗೆ ಇನ್ನೂ ಬಿರಿಯಾನಿ ತಿನ್ನಲು ನೀಡಲಾಗುತ್ತಿದೆ. ಇದು ಫಿಟ್‌ನೆಸ್‌ ಬಗ್ಗೆ ತಾಳಿರುವ ನಿಷ್ಕಾಳಜಿ ಎಂದು ಹಿರಿಯ ಕ್ರಿಕೆಟಿಗ ವಾಸೀಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆಟಗಾರರಿಗೆ ಬಿರಿಯಾನಿ ತಿನ್ನಿಸಿ ಚಾಂಪಿಯನ್ ತಂಡಗಳ ಎದುರು ಆಡಲು ಸಿದ್ಧಗೊಳಿಸಲು ಸಾಧ್ಯವಿಲ್ಲ. ಆಟಗಾರರ ದೈಹಿಕ ಕ್ಷಮತೆಯನ್ನು ಕಾಪಾಡಲು ಆಹಾರಪದ್ಧತಿಯೂ ಮುಖ್ಯವಾಗುತ್ತದೆ. ಆದ್ದರಿಂದ ತಂಡದ ಆಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವೈಜ್ಞಾನಿಕವಾಗಿ ಸಿದ್ದಪಡಿಸಿದ ಡಯಟ್ ಚಾರ್ಟ್ ಪ್ರಕಾರ ಆಹಾರ ಒದಗಿಸಬೇಕು’ ಎಂದು ಕ್ವಿಂಟ್‌ ವೆಬ್‌ಸೈಟ್‌ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !