ವಿಡಿಯೊ ವೈರಲ್‌: ಧೋನಿ ಸಿಕ್ಸರ್‌ಗೆ ಕಣ್ಣು ಬಾಯಿ ಅರಳಿಸಿದ ಕೊಹ್ಲಿ!

ಗುರುವಾರ , ಜೂನ್ 20, 2019
31 °C
ವಿಶ್ವಕಪ್‌ ಕ್ರಿಕೆಟ್‌

ವಿಡಿಯೊ ವೈರಲ್‌: ಧೋನಿ ಸಿಕ್ಸರ್‌ಗೆ ಕಣ್ಣು ಬಾಯಿ ಅರಳಿಸಿದ ಕೊಹ್ಲಿ!

Published:
Updated:

ಲಂಡನ್‌: ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಸವಾಲಿನ ಮೊತ್ತ ದಾಖಲಿಸಿತು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್‌ ಧೋನಿ ಭರ್ಜರಿ ಆಟ ಪ್ರದರ್ಶಿಸಿದರು. ಧೋನಿ ಸಿಡಿಸಿದ ಸಿಕ್ಸರ್‌ ಕಂಡ ತಂಡದ ನಾಯಕ ವಿರಾಟ್‌ ಕೊಹ್ಲಿ ಕಣ್ಣು, ಬಾಯಿ ಅರಳಿಸಿ ನೋಡುತ್ತಾ ನಿಂತರು. 

ಧೋನಿ ಹೊಡೆತಕ್ಕೆ ಕೊಹ್ಲಿ ನೀಡಿರುವ ಈ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

49ನೇ ಓವರ್‌ನಲ್ಲಿ ಧೋನಿ ಮತ್ತು ಕೊಹ್ಲಿ ಕಣದಲ್ಲಿದ್ದರು. ಕಾಂಗರೂ ಪಡೆಯ ಮಿಷೆಲ್‌ ಸ್ಟಾರ್ಕ್‌ ಹಾಕಿದ ಎಸೆತಕ್ಕೆ ಧೋನಿ ಸಿಡಿಸಿದ ಬೃಹತ್‌ ಸಿಕ್ಸರ್‌ ಕೆಲ ಕ್ಷಣ ಕೊಹ್ಲಿ ದಂಗಾಗುವಂತೆ ಮಾಡಿತು. ಗಂಟೆಗೆ 143 ಕಿ.ಮೀ. ವೇಗದಲ್ಲಿ ಸ್ಟಾರ್ಕ್‌ ಚೆಂಡು ಎಸೆಯುತ್ತಿದ್ದಂತೆ ಕ್ರೀಸ್‌ ಬಿಟ್ಟಿದ್ದ ಕೊಹ್ಲಿ, ಧೋನಿ ರನ್‌ ಓಡುತ್ತಾರೆ ಎಂದು ಭಾವಿಸಿದಂತಿತ್ತು. ಆದರೆ, ಧೋನಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದರು. 

ಇನ್ನಷ್ಟು ಓದಿ

* ಕಾಂಗರೂ ಪಡೆ ಎದುರು ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್‌; 352 ರನ್‌

* ಬೌಲಿಂಗ್‌ ಪ್ರಯೋಗದಲ್ಲಿ ಭಾರತ; ಕಾಂಗರೂಗಳ ತಾಳ್ಮೆಯ ಆಟ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 4

  Sad
 • 1

  Frustrated
 • 8

  Angry

Comments:

0 comments

Write the first review for this !