ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಐಪಿಎಲ್‌ನಲ್ಲಿ ಗೇಲ್‌ ಮೊದಲ ಪಂದ್ಯದಿಂದಲೇ ಕಣಕ್ಕೆ: ವಾಡಿಯಾ

Last Updated 20 ನವೆಂಬರ್ 2020, 3:14 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಮುಂದಿನ ಮೂರು ವರ್ಷಗಳ ಯೋಜನೆಯನ್ನು ಸಿದ್ಧಪಡಿಸಿಕೊಂಡಿದೆ.

ಗುರುವಾರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಪಂಜಾಬ್ ಫ್ರ್ಯಾಂಚೈಸಿ ಸಹಮಾಲೀಕ ನೆಸ್ ವಾಡಿಯಾ, ’ಈ ವರ್ಷ ಐಪಿಎಲ್‌ನಲ್ಲಿ ಮಾಡಿದ ಲೋಪಗಳನ್ನು ತಿದ್ದಿಕೊಳ್ಳುವತ್ತ ಆದ್ಯತೆ ನೀಡುತ್ತೇವೆ. ಮುಂದಿನ ವರ್ಷದ ಟೂರ್ನಿಯಲ್ಲಿ ಕ್ರಿಸ್ ಗೇಲ್ ಅವರನ್ನು ಮೊದಲ ಪಂದ್ಯದಿಂದಲೇ ಕಣಕ್ಕಿಳಿಸುತ್ತೇವೆ. ಮುಖ್ಯ ಕೋಚ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ತಂಡದ ಭವಿಷ್ಯದ ರೂಪುರೇಷೆ ಮಾಡಿಕೊಂಡಿದ್ದೇವೆ‘ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

’ತಂಡಕ್ಕೆ ಹೊಸ ನಾಯಕ, ಹೊಸ ಆಟಗಾರರು ಇದ್ದಾರೆ. ಇಂತಹ ಸಂಯೋಜನೆಯು ಕೆಲವೊಮ್ಮೆ ಇದು ಅರಂಭದಲ್ಲಿಯೇ ದೊಡ್ಡಮಟ್ಟದಲ್ಲಿ ಯಶಸ್ಸು ಕೊಡುತ್ತದೆ. ಮಧ್ಯಮ ಕ್ರಮಾಂಕದಲ್ಲಿರುವ ಕೊರತೆಯನ್ನು ತುಂಬಲು ಮುಂಬರುವ ಹರಾಜು ಪ್ರಕ್ರಿಯೆಯ ಮೇಲೆ ಕಣ್ಣಿಟ್ಟಿದ್ದೇವೆ. ಉತ್ತಮ ಆಟಗಾರರಿಗಾಗಿ ಶೋಧ ನಡೆಯುತ್ತಿದೆ‘ ಎಂದರು.

’ನಮ್ಮ ತಂಡದಲ್ಲಿದ್ದ ಕೆಲವು ಅಂತರರಾಷ್ಟ್ರೀಯ ಆಟಗಾರರು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ‘ ಎಂದೂ ಅವರು ಹೇಳಿದರು. ಈ ಸಲ ತಂಡದಲ್ಲಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಶೆಲ್ಡನ್ ಕಾಟ್ರೆಲ್ ಅವರು ವೈಫಲ್ಯ ಅನುಭವಿಸಿದ್ದರು.

ವಿಂಡೀಸ್ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರನ್ನು ಮೊದಲ ಹಂತದ ಒಂದೂ ಪಂದ್ಯದಲ್ಲ ಕಣಕ್ಕಿಳಿಸಿರಲಿಲ್ಲ. ಆದರೆ ಎರಡನೇ ಹಂತದಲ್ಲಿ ಆಡಿದ್ದ ಅವರು ರನ್‌ಗಳ ಹೊಳೆ ಹರಿಸಿದ್ದರು. ತಂಡದ ಜಯಕ್ಕೆ ಕಾರಣರಾಗಿದ್ದರು. ತಂಡದ ನಾಯಕ ಕನ್ನಡಿಗ ಕೆ.ಎಲ್. ರಾಹುಲ್ ಈ ಸಲದ ಟೂರ್ನಿಯಲ್ಲ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT